ದಕ್ಷಿಣ 24 ಪರಗಣಾ(ಬಂಗಾಳ)– ಡಿಸೆಂಬರ 3 ರಂದು ಭಾಜಪದ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು ಹಿಂಸಾಚಾರ ನಡೆಸಿದರು. ಈ ಸಭೆಯಲ್ಲಿ ಅವರು ಕಲ್ಲು ಎಸೆದರು. ಹಾಗೆಯೇ ಅನೇಕ ದ್ವಿಚಕ್ರ ವಾಹನಗಳನ್ನು ಸುಟ್ಟು ಹಾಕಿದರು. ಭಾಜಪ ಮುಖಂಡರು ಮತ್ತು ಶಾಸಕ ಶುಭೇಂದು ಅಧಿಕಾರಿ ಈ ಸಭೆಗೆ ಮಾರ್ಗದರ್ಶನ ಮಾಡುವವರಿದ್ದರು.
Bengal: Stones Hurled, Bikes Set On Fire As Violent Clash Breaks Out Between BJP And TMC Workershttps://t.co/q5rlRocFUI
— ABP LIVE (@abplive) December 3, 2022
ಶುಭೇಂದು ಅಧಿಕಾರಿ ಇವರು ಮಾಹಿತಿ ನೀಡುವಾಗ, ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು 100 ಕ್ಕಿಂತ ಅಧಿಕ ವಾಹನಗಳನ್ನು ಧ್ವಂಸಗೊಳಿಸಿದರು. ಹಾಗೆಯೇ 150 ಕ್ಕಿಂತ ಅಧಿಕ ಮಹಿಳೆಯರ ಮೇಲೆ ಆಕ್ರಮಣ ನಡೆಸಿದರು. ಇದರಲ್ಲಿ 50 ಮಹಿಳೆಯರು ಗಂಭೀರವಾಗಿ ಗಾಯಗೊಂಡರು. ಒಬ್ಬ ಮಹಿಳೆ ನಾಪತ್ತೆಯಾಗಿದ್ದಾಳೆ. ಈ ಸಭೆಗೆ ಮಮತಾ ಬ್ಯಾನರ್ಜಿ ಸರಕಾರದ ಆಡಳಿತವು ಅನುಮತಿ ನೀಡಿರಲಿಲ್ಲ. ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯವು ಅನುಮತಿ ನೀಡಿತ್ತು. ಪೊಲೀಸರು ತೃಣಮೂಲ ಕಾಂಗ್ರೆಸ್ಸಿನ ಕೆಲವು ಜನರನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುತೃಣಮೂಲ ಕಾಂಗ್ರೆಸ್ಸಿನಿಂದ ಬಂಗಾಳದಲ್ಲಿ ನಿರಂತರವಾಗಿ ಭಾರತೀಯ ಜನತಾ ಪಕ್ಷವನ್ನು ಗುರಿ ಮಾಡುತ್ತಿರುವಾಗ ಕೇಂದ್ರದ ಭಾಜಪ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವುದೇ ಸೂಕ್ತವಾಗಿದೆ. ಎಂದು ಜನಸಾಮಾನ್ಯರಿಗೆ ಅನಿಸುತ್ತದೆ. |