ಪ್ರಧಾನಿ ಮೋದಿ ಅವರಿಂದ ಇಸ್ರೇಲ್ ನ ನೂತನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇವರಿಗೆ ಅಭಿನಂದನೆ

ತೆಲ ಅವಿವ (ಇಸ್ರೇಲ್) – ಇಸ್ರೇಲ್‌ನ ಇತಿಹಾಸದಲ್ಲಿ ಸುಧೀರ್ಘ ಕಾಲ ಪ್ರಧಾನಿ ಸ್ಥಾನದಲ್ಲಿದ್ದ ೭೩ ವರ್ಷದ ಬೆಂಜಮಿನ್ ನೆತನ್ಯಾಹು ಇವರು ಮತ್ತೊಮ್ಮೆ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಇವರು ನೆತನ್ಯಾಹು ಇವರನ್ನು ಅಭಿನಂದಿಸಿದರು. ಮೋದಿಯವರು ಟ್ವೀಟ್ ಮಾಡಿ ‘ನನ್ನ ಸ್ನೇಹಿತ’ ನೆತನ್ಯಾಹು ಈಬಾರಿ ಚುನಾವಣೆಯಲ್ಲಿನ ಜಯ ಸಾಧಿಸಿದ್ದಕ್ಕಾಗಿ ಅಭಿನಂದನೆ ! ನಾವು ಒಟ್ಟಾಗಿ ಭಾರತ್ ಇಸ್ರೆಲ್ ಕಾರ್ಯತಂತ್ರದ ಭಾಗಿದಾರಿ ಮುಂದೆ ಕೊಂಡೊಯ್ಯುವೆವು’, ಎಂದು ನೆತನ್ಯಾಹು ಇವರನ್ನು ಅಭಿನಂದಿಸಿದ್ದಾರೆ.

೧. ನವೆಂಬರ್ ೩ ರಂದು ನಡೆದ ಮತ ಎಣಿಕೆಯ ಕೊನೆಯ ಸುತ್ತಿನಲ್ಲಿ ನೆತನ್ಯಾಹು ಇವರ ಲಿಕುಡ ಪಕ್ಷದ ಮೈತ್ರಿಯು ೧೨೦ ರಲ್ಲಿ ೬೪ ಸ್ಥಾನ ಗೆದ್ದಿದ್ದಾರೆ. ಇಸ್ರೇಲ್‌ನಲ್ಲಿ ಕಳೆದ ೩ ವರ್ಷಗಳಲ್ಲಿ ೫ ನೇ ಸಾರಿ ಚುನಾವಣೆ ನಡೆದಿದೆ.

೨. ನೆತನ್ಯಾಹು ೧೯೯೬ ರಿಂದ ೧೯೯೯ ಮತ್ತು ೨೦೦೯ ರಿಂದ ೨೦೨೧ ವರೆಗೆ ಹೀಗೆ ೧೫ ವರ್ಷ ಇಸ್ರೇಲ್‌ನ ಪ್ರಧಾನಿ ಆಗಿದ್ದರು. ನವಂಬರ್ ೧೫ ರಂದು ಔಪಚಾರಿಕವಾಗಿ ಅವರು ಪ್ರಧಾನಿ ಎಂದು ನೇಮಕಗೊಳ್ಳುವರು.

ನೆತನ್ಯಾಹು – ಮೋದಿ ಇವರ ಆತ್ಮೀಯ ಸಂಬಂಧವಿದೆ !

ನೆತನ್ಯಾಹು ಇಸ್ರೇಲ್ ನ ಪ್ರಧಾನಿ ಆಗಿದ್ದಾಗ ೫ ವರ್ಷದ ಹಿಂದೆ ಭಾರತಕ್ಕೆ ಬಂದಿದ್ದರು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರ ಸ್ವಾಗತಕ್ಕಾಗಿ ಪ್ರೋಟೋಕಾಲ್ ಉಲ್ಲಂಘಿಸಿ ಸ್ವತಃ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅದೇ ವರ್ಷ ಮೋದಿ ಕೂಡ ಇಸ್ರೇಲ್ ನ ಪ್ರವಾಸಕ್ಕೆ ಹೋಗಿದ್ದರು. ಇಸ್ರೇಲ್‌ಗೆ ಭೇಟಿ ನೀಡುವ ಮೋದಿ ಇವರು ಮೊಟ್ಟಮೊದಲ ಭಾರತೀಯ ಪ್ರಧಾನಿ ಆಗಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ‘ಸ್ನೇಹಿತ’ನೆಂದು ಸಂಬೋಧಿಸಿದ್ದರು. ಈಗ ನೆತನ್ಯಾಹು ಪ್ರಧಾನಿ ಆದಕಾರಣ ಭಾರತ ಮತ್ತು ಇಸ್ರೇಲ್ ಈ ಎರಡು ದೇಶಗಳು ಭಯೋತ್ಪಾದನೆ, ತಂತ್ರಜ್ಞಾನ ಮತ್ತು ವ್ಯಾಪಾರ ಇದರ ಬಗ್ಗೆ ಒಟ್ಟಾಗಿ ಕೆಲಸ ಮಾಡಬಹುದು. ಎರಡು ದೇಶದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಕೂಡ ಆಗಬಹುದು ಎಂದು ಹೇಳಲಾಗುತ್ತಿದೆ.