ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ರೈಲು ನಿಲ್ದಾಣಗಳು ಮತ್ತು ಹಿಂದೂ ಧಾರ್ಮಿಕ ಸ್ಥಳಗಳನ್ನು ಸ್ಪೋಟಿಸುವುದಾಗಿ ಬೆದರಿಕೆ

ಜೈಶ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ರೈಲು ನಿಲ್ದಾಣಕ್ಕೆ ಕಳುಹಿಸಿದ ಪತ್ರ !

ಹರಿದ್ವಾರ (ಉತ್ತರಾಖಂಡ) – ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಅನೇಕ ರೈಲು ನಿಲ್ದಾಣಗಳನ್ನು ಬಾಂಬ್‌ಗಳಿಂದ ಸ್ಫೋಟಿಸಲಾಗುವುದು ಎಂದು ಹರಿದ್ವಾರ ರೈಲು ನಿಲ್ದಾಣಕ್ಕೆ ಬೆದರಿಕೆ ಪತ್ರ ಬಂದಿದೆ.
ಜೈಶ-ಎ-ಮೊಹಮ್ಮದ ಈ ಭಯೋತ್ಪಾದಕ ಸಂಘಟನೆಯಿಂದ ಈ ಪತ್ರ ಬಂದಿದೆ ಎಂದು ದಾವೆ ಮಾಡಲಾಗಿದೆ. ರೈಲು ನಿಲ್ದಾಣಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ಸಹ ಗುರಿಯಾಗಿಸಲಾಗುವುದು ಎಂದು ಅದು ಹೇಳಿದೆ. ಪತ್ರವನ್ನು ಸ್ವೀಕರಿಸಿದ ನಂತರ ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಯುತ್ತಿರುವ ಸಹಚರರ ಸೇಡು ತೀರಿಸಿಕೊಳ್ಳಲಾಗುವುದು’, ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹರ್ ಕಿ ಪೌಡಿ, ಭಾರತಮಾತಾ ದೇವಾಲಯ, ಚಂಡಿದೇವಿ, ಮಾನಸದೇವಿ ಸಹಿತ ಹರಿದ್ವಾರದಲ್ಲಿನ ಮುಖ್ಯ ದೇವಸ್ಥಾನಗಳ ಸಹಿತ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ್ ಸ್ಥಳಗಳಲ್ಲಿ ಬಾಂಬ್ ಸ್ಫೋಟಗಳು ನಡೆಯಲಿವೆ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಈ ಬೆದರಿಕೆಯು ಭಯೋತ್ಪಾದಕರಿಗೆ ಧರ್ಮವಿದೆ ಎಂದು ತೋರಿಸುತ್ತದೆ !