ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಿಂದ ನೂಪುರ ಶರ್ಮಾ ಹತ್ಯೆಯ ಹುನ್ನಾರ

ಭಾರತ ಪಾಕಿಸ್ತಾನ ಗಡಿಯ ಮೇಲೆ ಬಂಧಿಸಲ್ಪಟ್ಟ ಅಶರಫ ರಿಝವಾನ್ ಗೆ ಈ ಸಂಘಟನೆಯೊಂದಿಗೆ ಸಂಬಂಧ ಇರುವುದು ಬೆಳಕಿಗೆ

ಜಯಪುರ – ಮಹಮ್ಮದ್ ಪೈಗಂಬರ್ ಇವರ ಬಗ್ಗೆ ತಥಾಕಥಿತ ಆಕ್ಷೇಪಾರ್ಯ ಹೇಳಿಕೆ ನೀಡಿರುವ ಭಾಜಪದ ಮಾಜಿ ವಕ್ತಾರೆ ನೂಪುರು ಶರ್ಮಾ ಇವರ ಮೇಲೆ ಬಲಾತ್ಕಾರ ನಡೆಸಿ ಅವರ ಹತ್ಯೆ ಮಾಡುವ ಅನೇಕ ಬೆದರಿಕೆ ಸಿಗುತ್ತಿತ್ತು. ಈಗ ಪಾಕಿಸ್ತಾನದಲ್ಲಿ ಅವರ ಹತ್ಯೆಯ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಗುಪ್ತಚರ ಇಲಾಖೆಯ ಹೆಚ್ಚುವರಿ ಪೊಲೀಸ ಮಹಾ ಸಂಚಾಲಕ ಎಸ್ ಸೆಂಗಾಥೀರ ಇವರು ನೀಡಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ತಹರಿಕ್ ಏ ಲಬ್ಬೈಕ್ ನಿಂದ ನೂಪುರ ಶರ್ಮಾ ಇವರ ಹತ್ಯೆಯ ಹುನ್ನಾರ ನಡೆಯುತ್ತಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಭಾರತ ಪಾಕಿಸ್ತಾನ ಗಡಿಯಲ್ಲಿ ಬಂಧಿಸಲ್ಪಟ್ಟ ಅಶರಫ್ ರಿಝವಾನ ಇವನು ಕೂಡ ಈ ಸಂಘಟನೆಯ ಸದಸ್ಯನಗಿದ್ದಾನೆ.

ಗುಪ್ತಚರ ಇಲಾಖೆ, ಅಪರಾಧ ತನಿಖಾ ವಿಭಾಗ, ಗಡಿ ಸುರಕ್ಷಾ ದಳ ಭಾರತೀಯ ಸೈನ್ಯ ಮತ್ತು ಸ್ಥಳೀಯ ಪೊಲೀಸರ ಜೊತೆ ಅನೇಕ ತನಿಖಾ ದಳಗಳು ರಿಝವಾನನ ವಿಚಾರಣೆ ನಡೆಸುತ್ತಿದ್ದಾರೆ. ಅವನು ತಹರೀಕ ಏ ಲಾಬ್ಬೈಕ್ ಸಂಘಟನೆಯ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದ ನಂತರ ತನಿಖಾ ದಳಗಳು ಹೆಚ್ಚು ಎಚ್ಚರಿಕೆಯಿಂದಿವೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರಕಾರಕ್ಕೆ ತೊಂದರೆಗೆ ಸಿಲುಕಿಸಿದ, ಮತ್ತು ಅನೇಕ ಹತ್ಯೆಗಳಿಗೆ ಕಾರಣವಾಗಿರುವ ಸಂಘಟನೆ ಇದಾಗಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋದ್ಪಾದಕರು ಮತ್ತು ಅದರ ಆಶ್ರಯತಾಣವಾದ ಪಾಕಿಸ್ತಾನವನ್ನು ನಾಶ ಮಾಡದೇ ಇದ್ದರೆ ಅಲ್ಲಿಯ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ಹಿಂದೂಗಳ ಹತ್ಯೆಯ ಹುನ್ನಾರ ಮಾಡುತ್ತಲೇ ಇರುತ್ತಾರೆ ಎಂಬುವುದನ್ನು ಅರಿಯಬೇಕು.