ಜಯಪುರ – ಮುಖ್ಯ ನ್ಯಾಯಾಧೀಶರಾದ ಎನ್. ವಿ. ರಮಣಾರವರು ಇಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಮೇಲೆ ಟೀಕಿಸುತ್ತ ‘ದೇಶದಲ್ಲಿನ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ನೈತಿಕತೆಯ ಅಧಃಪತನವು ಚಿಂತಾಜನಕವಾಗಿದೆ. ಹಿಂದೆ ಸರಕಾರ ಹಾಗೂ ವಿರೋಧಿ ಪಕ್ಷಗಳಿಗೆ ಪರಸ್ಪರರ ಮೇಲೆ ಗೌರವವಿತ್ತು. ದುರ್ದೈವದಿಂದ ಈಗ ವಿರೋಧಕರಿಗೆ ವಿಶೇಷ ಸ್ಥಾನ ಉಳಿದಿಲ್ಲ’ ಎಂದು ಹೇಳಿದರು.
ಮುಖ್ಯ ನ್ಯಾಯಾಧೀಶರು ಮುಂದುವರಿದು, ಆಳವಾದ ಚರ್ಚೆ ಹಾಗೂ ಪರಿಶೀಲನೆ ಮಾಡದೇ ಕಾನೂನುಗಳನ್ನು ರಚಿಸಲಾಗುತ್ತಿದೆ. ಈಗ ಅಧಿಕಾರದಲ್ಲಿರುವ ಪಕ್ಷವು ವಿರೋಧಿಗಳನ್ನು ತುಳಿಯುವ ವಿಚಾರ ಮಾಡುತ್ತದೆ. ಸರಕಾರದ ವಿರುದ್ಧ ಮಾತನಾಡಿದರೆ ವಿರೋಧಕರು ಸರಕಾರದಲ್ಲಿರುವವರ ಶತ್ರುಗಳೇ ಆಗುತ್ತಾರೆ. ಈ ಸಂಗತಿಯು ದೇಶದಲ್ಲಿನ ಪಾರದರ್ಶಕ ಪ್ರಜಾಪ್ರಭುತ್ವಕ್ಕೆ ಉತ್ತಮ ಸಂಕೇತವನ್ನು ನೀಡುತ್ತಿಲ್ಲ.