Europe Recognizes Palestine As Country: ಸ್ಪೇನ್, ನಾರ್ವೆ ಮತ್ತು ಐರ್ಲೆಂಡ್ನಿಂದ ಪ್ಯಾಲೆಸ್ಟೈನ್ ಒಂದು ‘ದೇಶ’ ಎಂದು ಮಾನ್ಯತೆ; ಇಸ್ರೇಲ್ ಅಸಮಾಧಾನ !

ಇಸ್ರೇಲ್ ಮೂರು ದೇಶಗಳ ರಾಯಭಾರಿಗಳನ್ನು ಕರೆಸಿಕೊಂಡಿತು !

ತೆಲ್ಅವಿವ್ (ಇಸ್ರೇಲ್) – ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಡಿವಾಣ ಹಾಕಲು ನಾರ್ವೆ, ಐರ್ಲೆಂಡ್ ಮತ್ತು ಸ್ಪೇನ್ ಈ ಯುರೋಪಿಯನ್ ದೇಶವು ಪ್ಯಾಲೆಸ್ಟೈನಗೆ `ದೇಶ’ ಎಂದು ಮಾನ್ಯತೆ ನೀಡುವುದಾಗಿ  ಔಪಚಾರಿಕವಾಗಿ ಘೋಷಿಸಿದೆ. ಈ ದೇಶಗಳಿಂದ ಮೇ ತಿಂಗಳ ಕೊನೆಯ ವಾರದಲ್ಲಿ ಈ ವಿಷಯದ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಇಸ್ರೇಲ್ ಆಕ್ರೋಶಗೊಂಡಿದ್ದು, ಅದು ಆ ದೇಶಗಳಿಂದ ತನ್ನ ರಾಯಭಾರಿಗಳನ್ನು ಮರಳಿ ಕರೆಸಿಕೊಂಡಿದೆ.

ಪ್ಯಾಲೆಸ್ಟೈನಗೆ ಮಾನ್ಯತೆಯೆಂದರೆ, ಭಯೋತ್ಪಾದನೆಗೆ ಸಹಕಾರ ನೀಡಿದಂತೆ ! – ಇಸ್ರೇಲ್

ಈ ನಿರ್ಣಯದಿಂದ ಇಸ್ರೇಲ್ ನ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಮಾತನಾಡಿ, ಪ್ಯಾಲೆಸ್ಟೈನ್ ಗೆ ನಾರ್ವೆ ಮತ್ತು ಐರ್ಲೆಂಡ್ಗಳಂತಹ ದೇಶಗಳು ಮಾನ್ಯತೆ ನೀಡುವುದು ಎಂದರೆ ಭಯೋತ್ಪಾದನೆಗೆ ಸಹಕಾರ ನೀಡಿದಂತಾಗಿದೆ. ನಮ್ಮ ಸಾರ್ವಭೌಮತ್ವದ ಧಿಕ್ಕರಿಸುವವರ ವಿರುದ್ಧ ಇಸ್ರೈಲ್ ಸುಮ್ಮನಿರುವುದಿಲ್ಲ ಎಂದು ಹೇಳಿದರು.

ಕಾಟ್ಜ್ ತಮ್ಮ ಮಾತನ್ನು ಮುಂದುವರಿಸಿ, ಪ್ಯಾಲೆಸ್ಟೈನ್ ಗೆ ಮಾನ್ಯತೆ ನೀಡುವ ನಿರ್ಣಯದಿಂದ ಗಾಝಾದಲ್ಲಿ ಒತ್ತೆಯಾಳುಗಳನ್ನು ಮರಳಿಸುವ ಪ್ರಯತ್ನಗಳಿಗೆ ಮತ್ತು ಯುದ್ಧ ಕೈದಿಗಳಿಗೆ ಹಾನಿಯಾಗಬಹುದು ಎಂದು ಹೇಳಿದರು. ನಮ್ಮ ನಾಗರಿಕರ ಭದ್ರತೆಯನ್ನು ಕಾಪಾಡುವುದು, ಹಮಾಸ ಅನ್ನು ಬುಡಸಮೇತ ಕಿತ್ತೆಸೆಯುವುದು ಮತ್ತು ಒತ್ತೆಯಾಳುಗಳ ಬಿಡುಗಡೆ ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

ಪ್ಯಾಲೆಸ್ಟೈನಗೆ ವಿಶ್ವದ 140 ನೇ ದೇಶಗಳ ಮಾನ್ಯತೆ !

ಪ್ಯಾಲೆಸ್ಟೈನಗೆ ವಿಶ್ವದ 140 ಕ್ಕೂ ಹೆಚ್ಚು ದೇಶಗಳು ಮಾನ್ಯತೆ ನೀಡಿದೆ. ಆದರೆ ಹಲವು ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೇರಿಕ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಕಾರಣದಿಂದಾಗಿ, ವಿಶ್ವಸಂಸ್ಥೆಯ ಶಾಶ್ವತ ಸದಸ್ಯನಾಗಲು ಸಾಧ್ಯವಾಗಲಿಲ್ಲ. ಭಾರತ ಪ್ಯಾಲೆಸ್ಟೈನ್ನ ವಿಶ್ವಸಂಸ್ಥೆಯ ಶಾಶ್ವತ ಸದಸ್ಯತ್ವವನ್ನು ಬೆಂಬಲಿಸಿದೆ.