ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಣದೀಪ ಹುಡಾ ನೀಡಿದ ವಿಶೇಷ ಮಾಹಿತಿ !
ಮುಂಬಯಿ – ಕಾಂಗ್ರೆಸ್ಸಿನ ಇತಿಹಾಸ ತಿಳಿಯುವುದಕ್ಕಾಗಿ ನಾನು ‘ ಸ್ವಾತಂತ್ರ್ಯವೀರ ಸಾವರ್ಕರ ‘ ಚಲನಚಿತ್ರ ನಿರ್ಮಿಸಿಲ್ಲ . ಸಾವರ್ಕರರ ಅಂದಿನ ಪರಿಸ್ಥಿತಿ ಮತ್ತು ಅವರ ವಿಚಾರಧಾರೆಯು ಯಾವ ಸನ್ನಿವೇಶಗಳ್ಲಲಿ ವಿಕಸಿತವಾಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುವದಕ್ಕಾಗಿ ನಾನು ಈ ಚಲನಚಿತ್ರ ನಿರ್ಮಿಸಿದ್ದೇನೆ. ಸಶಸ್ತ್ರ ಕ್ರಾಂತಿಯ ಇತಿಹಾಸ ಹೇಳುವಂತಹ ಚಿತ್ರವನ್ನು ನಿರ್ಮಿಸಿದ್ದೇನೆ. ಸಶಸ್ತ್ರ ಕ್ರಾಂತಿಯು ಗಾಂಧೀಜಿಯ ವಿಚಾರಧಾರೆಯ ವಿರುದ್ಧವಾಗಿತ್ತು. ನಾವು ಗಾಂಧೀಜಿ ಮತ್ತು ಕಾಂಗ್ರೆಸ್ ಅನ್ನು ಪ್ರತ್ಯೇಕವಾಗಿಡಬೇಕು ಎಂಬುದು ನನ್ನ ಅನಿಸಿಕೆಯಾಗಿದೆ ಎಂದು ‘ ಸ್ವಾತಂತ್ರ್ಯ ವೀರ ಸಾವರ್ಕರ ‘ ಚಲನಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ನಾಯಕ ರಣದೀಪ ಹುಡಾ ಇವರು ಒಂದು ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇತಿಹಾಸದಲ್ಲಿ ಕ್ರಾಂತಿಕಾರರ ಬಗ್ಗೆ ಅತ್ಯಂತ ಸಂಕ್ಷಿಪ್ತ ಮಾಹಿತಿ !
‘ಸ್ವಾತಂತ್ರ್ಯ ವೀರ ಸಾವರ್ಕರ ‘ ಈ ಚಲನಚಿತ್ರ ನನ್ನ ಬಳಿ ಬಂದಾಗ, ನನಗೆ ಈ ಇತಿಹಾಸ ತಿಳಿದಿದೆ ಎಂದನಿಸಿತ್ತು.ಆದರೆ ಯಾವಾಗ ನಾನು ಅದನ್ನು ಮತ್ತೆ ಓದಲು ಆರಂಭಿಸಿದೆ , ಆಗ ಇತಿಹಾಸದ ಸಂಪೂರ್ಣ ಪುಸ್ತಕದಲ್ಲಿ ಸಶಸ್ತ್ರ ಕ್ರಾಂತಿಯ ಬಗ್ಗೆ ಕೇವಲ ಒಂದೇ ಒಂದು ಪರಿಚ್ಛೇದ ಬರೆದಿದ್ದಾರೆ ಎಂಬ ವಿಷಯ ಅರಿವಾಯಿತು. ವಾಸುದೇವ ಬಲವಂತ ಫಡಕೆ, ತಿಲಕ್, ಚಾಫೆಕರ ಬಂಧು , ಖುದಿರಾಮ್ ಬೋಸ್, ಅನಂತ ಕಾನೇರೆ, ಭಗತಸಿಂಹ, ಚಂದ್ರಶೇಖರ್ ಆಜಾದ್, ನೇತಾಜಿ ಬೋಸ್, ಹೋರಾಟದಲ್ಲಿ ಸಹಭಾಗಿಯಾಗಿದ್ದ ಶಾಮಾಜಿ ವರ್ಮ, ಮೇಡಂ ಕಾಮಾ ಇಂತಹ ಸಾವಿರಾರು ಹೋರಾಟಗಾರರಿಗೆ ಸಶಸ್ತ್ರ ಕ್ರಾಂತಿಯ ಮೇಲೆ ವಿಶ್ವಾಸವಿಟ್ಟಿದ್ದರು, ಆದರೂ ಇವರಿಗೆ ನಮ್ಮ ಇತಿಹಾಸದ ಪುಸ್ತಕದಲ್ಲಿ ಅಷ್ಟೊಂದು ಮಹತ್ವ ಕೊಡಲಾಗಿಲ್ಲ ಏಕೆ? ಅವರ ಬಗ್ಗೆ ಏನನ್ನೂ ಬರೆಯಲಾಗಿಲ್ಲ ಎಂದು ಹುಡಾ ವಿಷಾದ ವ್ಯಕ್ತಪಡಿಸಿದರು.
(ಸೌಜನ್ಯ – Zee Music Company)
‘ಸಾವರ್ಕರ್ ಅವರು ಶೂರ ಸ್ವಾತಂತ್ರ್ಯ ಸೈನಿಕರಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ದೊಡ್ಡ ಕೊಡುಗೆಯೇ ಇದೆ’ ಇಂದು ಇಂದಿರಾ ಗಾಂಧಿ ಹೇಳಿದ್ದರು !
ಸಾವರ್ಕರ್ ಇವರನ್ನು ‘ ಮಾಫಿ ವೀರ ‘ ಎಂದು ಹೇಳುತ್ತಾರೆಂದು ಈ ಬಗ್ಗೆ ಹುಡಾ ಅವರನ್ನು ಪ್ರಶ್ನಿಸಿದಾಗ, ” ಇದು ನನಗೆ ತುಂಬಾ ನೋವನ್ನುಂಟುಮಾಡುತ್ತದೆ. ನಾನು ಈ ಹಿಂದೆ ಒಂದು ಸಂದರ್ಶನದಲ್ಲಿ ಹೇಳಿದಂತೆ, ಸಾವರ್ಕರ್ ಅವರ ಬಗ್ಗೆ ಇಂತಹ ಮಾತನ್ನಾಡಿದವರ ಕಪಾಳಕ್ಕೆ ಎರಡು ಬಾರಿಸಬೇಕು ಎಂದನಿಸುತ್ತದೆ.” ‘ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿನ ವೀರರಾಗಿರಲಿಲ್ಲವೇ? ‘ಅಂತಹ ಮಾತನ್ನು ನೀವು ಹೇಗೆ ಹೇಳುತ್ತೀರಿ? ಅವರ (ರಾಹುಲ್ ಗಾಂಧಿ ಅವರ) ಅಜ್ಜಿ (ಇಂದಿರಾ ಗಾಂಧಿ) ಅವರು ಸಾವರ್ಕರ್ ಅವರ ಮೃತ್ಯುವಿನ ನಂತರ ಸಾವರ್ಕರ್ ಅವರು ಬಹಳ ಶೂರ ಸ್ವಾತಂತ್ರ್ಯ ಸೈನಿಕರಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಬಹಳ ದೊಡ್ಡದಾಗಿದೆ. ಅವರ ವಿಚಾರ ಮುಂದಿನ ಪೀಳಿಗೆಯನ್ನು ರೂಪಿಸುವುದು” ಎಂದು ಇಂದಿರಾ ಗಾಂಧಿ ಅವರು ಸಾವರ್ಕರರ ಮೃತ್ಯುವಿನ ನಂತರ ಹೇಳಿದ್ದರು. ಅದಲ್ಲದೇ, ಸಾವರ್ಕರ್ ಅವರ ಹೆಸರಿನ ಒಂದು ಪೋಸ್ಟ್ ಸ್ಟ್ಯಾಂಪ್ ಅನ್ನು ಕೂಡ ಬಿಡುಗಡೆಗೊಳಿಸಿದ್ದರು. ಹಾಗಾದರೆ, ರಾಹುಲ್ ಗಾಂಧಿ ಅವರಿಗೆ ತಮ್ಮ ಅಜ್ಜಿಗಿಂತಲೂ ಹೆಚ್ಚು ತಿಳಿದಿದೆಯೇ?
Director, producer, and actor @RandeepHooda announces ‘#SwatantryaveerSavarkar‘, a film depicting the history of armed revolution.#WhoKilledHisStory#VeerSavarkarOn22March #वीर_सावरकरpic.twitter.com/a85KRBUk3P
— Sanatan Prabhat (@SanatanPrabhat) March 18, 2024
ರಿಚರ್ಡ್ ಆಟನಬರೋ ಅವರ ‘ ಗಾಂಧಿ ‘ ಚಲನಚಿತ್ರದಲ್ಲಿ ಸಾವರ್ಕರರನ್ನು ತೋರಿಸಿರಲಿಲ್ಲ !
‘ಸ್ವಾತಂತ್ರ್ಯ ವೀರ ಸಾವರ್ಕರ್ ‘ಚಲನಚಿತ್ರದ ಟ್ರೈಲರ್ ಬಿಡುಗಡೆಗೊಂಡ ನಂತರ ಅದರಲ್ಲಿ ಮ.ಗಾಂಧಿ ಅವರನ್ನು ಅವಮಾನಿಸಲಾಗಿದೆ, ಎಂದು ಟೀಕಿಸಲಾಗಿದೆ. ಇದರ ಬಗ್ಗೆ ಹುಡಾ ಮಾತನಾಡಿ, ನಾನು ಗಾಂಧೀಜಿಯವರನ್ನು ಅವಮಾನಿಸುತ್ತಿಲ್ಲ ; ಆದರೆ ಇದು ಸಾವರ್ಕರರ ಕುರಿತಾದ ಚಲನಚಿತ್ರವಾಗಿರುವುದರಿಂದ ನನಗೆ ಅವರ ವಿಚಾರಧಾರೆಯನ್ನು ತಿಳಿಸಬೇಕಿದೆ. ರಿಚರ್ಡ್ ಆಟನಬರೋ ಅವರ ‘ಗಾಂಧಿ’ ಚಲನಚಿತ್ರದಲ್ಲಿ ಸಾವರ್ಕರ್ ಅವರ ಉಲ್ಲೇಖ ಇರಲಿಲ್ಲ. ನಾನು ಬಹಳ ಜಾಗರೂಕತೆಯಿಂದ ವಿಚಾರ ಮಾಡಿ ಈ ಚಿತ್ರ ನಿರ್ಮಿಸಿದ್ದೇನೆ. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿನ ಸ್ವಾತಂತ್ರ್ಯ ಸೈನಿಕರಿಗೆ ಒಬ್ಬ ವ್ಯಕ್ತಿಯಲ್ಲಿನ ಕೆಲ ವಿಷಯ ಒಳ್ಳೆಯದೆನಿಸಿದರೆ, ಅದೇ ವ್ಯಕ್ತಿಯ ಕೆಲ ದೃಷ್ಟಿಕೋನದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ಭಗತಸಿಂಹ ಗಾಂಧೀಜಿಗಿಂತ ಭಿನ್ನವಾಗಿದ್ದರು, ಗಾಂಧೀಜಿ ಸುಭಾಷ್ ಚಂದ್ರ ಬೋಸ್ ಅವರಿಗಿಂತ ಭಿನ್ನವಾಗಿದ್ದರು. ಸುಭಾಷಜಿ ಇತರರಗಿಂತಲೂ ಭಿನ್ನವಾಗಿದ್ದರು. ಹಾಗಾಗಿ ಅವರಲ್ಲಿ ಒಂದಲ್ಲ ಒಂದು ಮತಭೇದಗಳಿದ್ದವು ; ಆದರೆ ಅವರಲ್ಲಿನ ಕೆಲವು ವಿಚಾರಧಾರೆಯು ಸಮಾನವಾಗಿದ್ದವು .
Indian diaspora roots for Savarkar !
An inquisitive thread…
We are sure that the phenomenal film #SwatantryaVeerSavarkar would shake the very pillars of Indian secularism.
🔥Indian diaspora worldwide has been reaching out to @RandeepHooda ji & associated teams.@parullxx… pic.twitter.com/mMvXWopjbO
— Sanatan Prabhat (@SanatanPrabhat) March 18, 2024
ವೀರ ಸಾವರ್ಕರ್ ಮತ್ತು ಇತರ ಕ್ರಾಂತಿಕಾರರ ಬಗ್ಗೆ ಇನ್ನಷ್ಟು ಚಲನಚಿತ್ರಗಳು ನಿರ್ಮಾಣವಾಗುವುದು ! – ರಣಜಿತ ಸಾವರ್ಕರ
ಸ್ವಾತಂತ್ರ್ಯವೀರ ಸಾವರ್ಕರ್ ಅವರ ಮೊಮ್ಮಗ ಮತ್ತು ‘ ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ‘ ಅಧ್ಯಕ್ಷ ಶ್ರೀ. ರಣಜಿತ ಸಾವರ್ಕರ್ ಅವರು ರಣದೀಪ ಹುಡಾ ಅವರ ಈ ಚಲನಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸ್ವಾತಂತ್ರ್ಯವೀರ ಸಾವರ್ಕರ್ ‘ ಈ ಚಲನಚಿತ್ರದ ಪ್ರಯುಕ್ತ ರಣದೀಪ ಅವರ ಜೊತೆಗೆ ಅನೇಕ ಬಾರಿ ನನ್ನ ಚರ್ಚೆ ನಡೆದಿದೆ. ಅವರು ಸ್ವತಃ ಮನಸಿಟ್ಟು ಈ ಕೆಲಸ ಮಾಡಿದ್ದಾರೆ. ಈ ಪಾತ್ರಕ್ಕಾಗಿ ಅವರು ತಮ್ಮ ೩೦ ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಐತಿಹಾಸಿಕ ಘಟನೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಚಿತ್ರ ಮಹತ್ವದ್ದಾಗಿದೆ. ಯುವಕರಿಗೆ ಇತಿಹಾಸ ತಿಳಿಯಬೇಕು, ಇದಕ್ಕಾಗಿ ವೀರ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಸೈನಿಕರ ಬಗ್ಗೆ ಹೆಚ್ಚು-ಹೆಚ್ಚು ಚಿತ್ರಗಳ ನಿರ್ಮಾಣ ಆಗಬೇಕು. ಚಲನಚಿತ್ರ ಮಾಧ್ಯಮದ ಮೂಲಕ ನಮ್ಮ ಇತಿಹಾಸವನ್ನು ಹೊಸ ಪೀಳಿಗೆಯ ಮುಂದೆ ಪ್ರಸ್ತುತ ಪಡಿಸಲು ಸಾಧ್ಯವಾಗುತ್ತದೆ. ವೀರ ಸಾವರ್ಕರ್ ಅವರ ಜೊತೆಗೆ ಇತರ ಕ್ರಾಂತಿಕಾರಕರ ಬಗ್ಗೆಯೂ ಇನ್ನಷ್ಟು ಚಲನಚಿತ್ರಗಳು ನಿರ್ಮಾಣವಾಗುವುದು ಎಂದು ನನಗೆ ಭರವಸೆ ಇದೆ ಎಂದು ರಣಜಿತ ಸಾವರ್ಕರ್ ನುಡಿದಿದ್ದಾರೆ.
(ಸೌಜನ್ಯ – ANI Bharat)