‘ಭಾರತವು ಚೀನಾದೊಂದಿಗೆ ಸ್ಪರ್ಧಿಸಲು ಮತ್ತೊಂದು ಸ್ವದೇಶಿ ವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆಯಂತೆ !’ – ಗ್ಲೋಬಲ್ ಟೈಮ್ಸ್

  • ಭಾರತದ ಮೂರನೇ ವಿಮಾನವಾಹಕ ನೌಕೆ ನಿರ್ಮಾಣದಿಂದ ಕೆಂಡಾಮಂಡಲಗೊಂಡ ಚೀನಾ ಸರಕಾರ !

  • ಭಾರತದ ವಿಮಾನವಾಹಕ ನೌಕೆಗಳು ಚೀನಾದ ತುಲನೆಯಲ್ಲಿ ತುಂಬಾ ಹಿಂದುಳಿದಿವೆ ಎಂದೂ ಹೇಳಿದೆ !

ಬೀಜಿಂಗ್ (ಚೀನಾ) – ಭಾರತವು ತನ್ನ ನೌಕಾ ಶಕ್ತಿಯನ್ನು ಹೆಚ್ಚಿಸಲು ಮೂರನೇ ವಿಮಾನವಾಹಕ ನೌಕೆಯನ್ನು ನಿರ್ಮಿಸಲಿದೆ. ಇದರಿಂದ ಚೀನಾ ಮತ್ತು ಚೀನಾ ಸರಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಭಾರತದ ವಿರುದ್ಧ ವಾಗ್ದಾಳಿ ನಡೆಸಿದೆ. ಪೇಪರ್ ಡ್ರ್ಯಾಗನ್ ಆಗಿರುವ ಗ್ಲೋಬಲ್ ಟೈಮ್ಸ್, ಚೀನಾದೊಂದಿಗೆ ಸ್ಪರ್ಧಿಸಲು ಭಾರತವು ತನ್ನ ಎರಡನೇ ಸ್ವದೇಶಿ ವಿಮಾನವಾಹಕ ನೌಕೆಯನ್ನು ನಿರ್ಮಿಸಲು ತಯಾರಿ ನಡೆಸುತ್ತಿದೆ ಎಂದು ವರದಿ ಮಾಡಿದೆ. ವಿಮಾನವಾಹಕ ನೌಕೆಯನ್ನು ಸ್ವಂತವಾಗಿ ನಿರ್ಮಿಸಲು ಸಾಧ್ಯವಾಗುವುದು ದೊಡ್ಡ ವಿಷಯ ಎಂದು ಚೀನಾದ ವಿವಿಧ ಮಿಲಿಟರಿ ವಿಶ್ಲೇಷಕರನ್ನು ಉಲ್ಲೇಖಿಸಿದ್ದಾರೆ. ಆದರೆ, ಚೀನಾದೊಂದಿಗೆ ಸ್ಪರ್ಧಿಸುತ್ತಿರುವ ಭಾರತ ತನ್ನ ‘ಸುರಂಗ ದೃಷ್ಟಿ’ಯನ್ನು ತೋರಿಸುತ್ತದೆ. ಭಾರತದ ‘ರಕ್ಷಣಾ ಸ್ವಾಧೀನ ಮಂಡಳಿ’ಯು ಸ್ವದೇಶಿ ವಿಮಾನವಾಹಕ ನೌಕೆಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದಿಸುವ ಸಾಧ್ಯತೆಯಿದೆ. ಇದರ ಬೆಲೆ 4.8 ಬಿಲಿಯನ್ ಡಾಲರ್ (40 ಸಾವಿರ ಕೋಟಿ ರೂಪಾಯಿ) ಇದೆ.

(ಸೌಜನ್ಯ – News Nation)

‘ಭಾರತವು ಎಲ್ಲಿಯವರೆಗೆ ಚೀನಾವನ್ನು ಪ್ರಚೋದಿಸುವುದಿಲ್ಲವೋ ಅಲ್ಲಿಯವರೆಗೆ ಚೀನಾ ಭಾರತದ ಶತ್ರುವಲ್ಲವಂತೆ !’ – ಚೀನಾದ ದರ್ಪದ ಮಾತು

1. ಗ್ಲೋಬಲ್ ಟೈಮ್ಸ್, ವಿಮಾನವಾಹಕ ನೌಕೆಗಳನ್ನು ನಿರ್ಮಿಸುವ ಮೂಲಕ ಭಾರತವು ತನ್ನ ನೌಕಾಪಡೆಯನ್ನು ಅಭಿವೃದ್ಧಿಪಡಿಸಬಹುದು; ಆದರೆ ಅವರ ತಂತ್ರ ಚೀನಾ ಕೇಂದ್ರಿತವಾಗಿದ್ದರೆ ನಾವು ಅವರನ್ನು ವಿರೋಧಿಸುತ್ತೇವೆ. ಚೀನಾ ರಾಷ್ಟ್ರೀಯ ರಕ್ಷಣಾ ನೀತಿಯನ್ನು ಅಳವಡಿಸಿಕೊಂಡಿದೆ, ಅದು ರಕ್ಷಣಾತ್ಮಕವಾಗಿದೆ. ಹಾಗಾಗಿ ಭಾರತ ಚೀನಾವನ್ನು ಪ್ರಚೋದಿಸುವುದಿಲ್ಲವೋ ಅಲ್ಲಿಯವರೆಗೆ ಚೀನಾ ಭಾರತದ ಶತ್ರುವಲ್ಲ ಎಂದು ಹೇಳಿದೆ.

2. ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆ ಇರುವಿಕೆಗೆ ಸಂಬಂಧಿಸಿದಂತೆ, ಚೀನಾ ನಮ್ಮ ಉಪಸ್ಥಿತಿಯು ಭಾರತದ ಮೇಲೆ ಕೇಂದ್ರೀಕರಿಸಲು ಅಲ್ಲ ಎಂದು ಹೇಳಿದೆ. ನಮ್ಮ ಉದ್ದೇಶ ಶಾಂತಿಯುತವಾಗಿದೆ. ಸಮುದ್ರ ಮಾರ್ಗಗಳನ್ನು ರಕ್ಷಿಸುವುದು ಮತ್ತು ಮಾನವೀಯ ನೆರವು ನೀಡುವುದು ನಮ್ಮ ಉದ್ದೇಶವಾಗಿದೆ. ಇದರಿಂದ ಭಾರತಕ್ಕೂ ಲಾಭವಾಗಿದೆ.

3. ಚೀನಾವು ಭಾರತದ ಉದ್ದೇಶಿತ ವಿಮಾನವಾಹಕ ನೌಕೆಯನ್ನು ತನ್ನ ಹೊಸ ವಿಮಾನವಾಹಕ ನೌಕೆ ‘ಫುಜಿಯಾನ್’ ನೊಂದಿಗೆ ಹೋಲಿಸಿದೆ ಮತ್ತು ‘ಫುಜಿಯಾನ್’ ಎರಡನೇ ಸ್ವದೇಶಿ ವಿಮಾನವಾಹಕ ನೌಕೆಯಾಗಿದ್ದು, ಇದನ್ನು ಜೂನ್ 2022 ರಲ್ಲಿಯೇ ನಿಯೋಜಿಸಲಾಗಿದೆ ಎಂದು ಹೇಳಿದೆ. ಇದು 80 ಸಾವಿರ ಟನ್ ನೀರನ್ನು ಸ್ಥಳಾಂತರಿಸುತ್ತದೆ. ಫ್ಯೂಜಿಯಾನ್ ನಲ್ಲಿ ‘ಎಲೆಕ್ಟ್ರೋಮ್ಯಾಗ್ನೆಟಿಕ್ ಕವಣೆಯಂತ್ರ’ ಎಂಬ ವ್ಯವಸ್ಥೆ ಇದ್ದು, ದೊಡ್ಡ ಯುದ್ಧವಿಮಾನಗಳನ್ನು ಹಾರಿಸಲು ಸಾಧ್ಯವಾಗಿಸುತ್ತದೆ. ಭಾರತದ ವಿಮಾನವಾಹಕ ನೌಕೆಗಳು ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿಲ್ಲ, ಆದರೆ ಫ್ಯೂಜಿಯಾನ್ ಅದಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು.

ಭಾರತದ ಉದ್ದೇಶಿತ ವಿಮಾನವಾಹಕ ನೌಕೆಯ ಸಾಮರ್ಥ್ಯ !

ಭಾರತದ ಪ್ರಸ್ತಾವಿತ ವಿಮಾನವಾಹಕ ನೌಕೆಯು ಫ್ರಾನ್ಸ್ ನ ‘ರಫೇಲ್’ ಯುದ್ಧ ವಿಮಾನ ಸೇರಿದಂತೆ ಕನಿಷ್ಠ 28 ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಈ ವಿಮಾನವಾಹಕ ನೌಕೆ 45 ಸಾವಿರ ಟನ್‌ಗಳಷ್ಟು ನೀರನ್ನು ಸ್ಥಳಾಂತರಿಸುತ್ತದೆ.

4. ‘ಗ್ಲೋಬಲ್ ಟೈಮ್ಸ್’ ಭಾರತದ ಮೊದಲ ವಿಮಾನವಾಹಕ ನೌಕೆ, ವಿಕ್ರಾಂತ್’ ನಮ್ಮ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ‘ಶೆಡೊಂಗ’ ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ತಲುಪಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ ವಿಕ್ರಾಂತ್ ನಿರ್ಮಾಣವು ಶೆಡೊಂಗಗಿಂತ ಮುಂಚೆಯೇ ಪ್ರಾರಂಭವಾಯಿತು. ಶೆಡೊಂಗ ಈ ವರ್ಷ ಪಶ್ಚಿಮ ಪೆಸಿಫಿಕ್‌ನಲ್ಲಿ ಹಲವಾರು ದೀರ್ಘ-ಸಮುದ್ರದ ವ್ಯಾಯಾಮಗಳಲ್ಲಿ ತನ್ನ ಯುದ್ಧ ಸಾಮರ್ಥ್ಯಗಳನ್ನು ಪ್ರದರ್ಶಿಸಿತು. ಆದಾಗ್ಯೂ, ‘ಗ್ಲೋಬಲ್ ಟೈಮ್ಸ್’ “ಚೀನಾ ತನ್ನ ಮೊದಲ ವಿಮಾನವಾಹಕ ನೌಕೆಯನ್ನು ಉಕ್ರೇನ್‌ನಿಂದ ಸ್ಕ್ರ್ಯಾಪ್ ಖರೀದಿಸುವ ಮೂಲಕ ಮತ್ತು ರಷ್ಯಾದ ತಂತ್ರಜ್ಞಾನವನ್ನು ಕದಿಯುವ ಮೂಲಕ ಅಭಿವೃದ್ಧಿಪಡಿಸಿತು” ಎಂದು ಮರೆತುಬಿಟ್ಟಿದೆ.

ಸಂಪಾದಕೀಯ ನಿಲುವು

‘ಒಂದು ದೇಶದ ಉದಯವು ನಮಗೆ ತೊಂದರೆ ಉಂಟುಮಾಡಬಹುದು’, ಎಂಬ ಭಯದೊಂದಿಗೆ ಅದನ್ನು ಹೋಲಿಸಿ ಅದನ್ನು ಕೀಳಾಗಿ ನೋಡಲು ಪ್ರಯತ್ನಿಸುತ್ತದೆ, ಎಂದು ಸೈಕಾಲಜಿ ಹೇಳುತ್ತದೆ. ಭಾರತದ ಭಯದಿಂದ ಚೀನಾ ತತ್ತರಿಸಿಹೋಗುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !