೧೫ ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ‘ಈಡಿ’ ಅಧಿಕಾರಿ ನವಲಕಿಶೋರ ಮೀನಾ ಇವರ ಬಂಧನ !

ಲಂಚ ಪಡೆದ ಆರೋಪಪಿ ನವಲಕಿಶೋರ ಮೀನಾ ಮತ್ತು ಬಾಬುಲಾಲ ಮೀನಾ

ಜಯಪುರ (ರಾಜಸ್ಥಾನ) – ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವು ಜಾರಿ ನಿರ್ದೇಶನಾಲಯದ (‘ಈಡಿ’ಯ) ಅಧಿಕಾರಿ ನವಲಕಿಶೋರ ಮೀನಾ ಇವರನ್ನು ೧೫ ಲಕ್ಷ ರೂಪಾಯಿಗಳ ಲಂಚವನ್ನು ಪಡೆದ ಆರೋಪದಲ್ಲಿ ಬಂಧಿಸಿತು. ನವಲಕಿಶೋರ ಮೀನಾ ಇವರ ಸಹಾಯಕ ಬಾಬುಲಾಲ ಮೀನಾ ಇವರನ್ನೂ ಲಂಚ ಪಡೆಯುವಾಗ ಬಂಧಿಸಿದೆ. ನವಲಕಿಶೋರ ಮೀನಾ ಇವರು ಮಣಿಪುರ ರಾಜ್ಯದ ಇಂಫಾಲ್‌ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳೆಂದು ಕಾರ್ಯನಿರತರಾಗಿದ್ದರು. ಬಾಬುಲಾಲ ಮೀನಾ ಇವರು ನವಲಕಿಶೋರ ಮೀನಾ ಇವರ ಮಧ್ಯವರ್ತಿಯೆಂದು ಲಂಚದ ಬೇಡಿಕೆಯನ್ನು ಇಡುತ್ತಿದ್ದರು, ಎಂದು ಭ್ರಷ್ಟಾಚಾರ ನಿಗ್ರಹ ದಳದ ಮೂಲಗಳು ತಿಳಿಸಿವೆ.

೧. ಮಣಿಪುರದ ಒಂದು ಚಿಟ್‌ಫಂಡ್ ಕಂಪನಿಯ ಪ್ರಕರಣವನ್ನು ಇತ್ಯರ್ಥಗೊಳಿಸುವ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ನೆಪದಲ್ಲಿ ಆರೋಪಿಯು ಕಂಪನಿಯ ಪೀಡಿತ ವ್ಯಕ್ತಿಯ ಬಳಿ ೧೭ ಲಕ್ಷ ರೂಪಾಯಿಗಳ ಬೇಡಿಕೆಯನ್ನಿಟ್ಟಿದ್ದರು; ಆದರೆ ೧೫ ಲಕ್ಷ ರೂಪಾಯಿಗಳನ್ನು ಪಡೆಯುವಾಗ ಅವರನ್ನು ಹಿಡಿಯಲಾಯಿತು. ರಾಜಸ್ಥಾನದ ಅಲವರನಲ್ಲಿ ಈ ಯೋಜನೆಯನ್ನು ರಚಿಸಲಾಗಿತ್ತು.

೨. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಇತ್ತೀಚೆಗಷ್ಟೇ ಮಣಿಪುರದಲ್ಲಿ ಕೆಲವು ಜನರ ವಿರುದ್ಧ ಚಿಟ್‌ಫಂಡ್ ಕಂಪನಿಯ ಮೂಲಕ ವಂಚನೆಗೊಳಗಾದ ಬಗ್ಗೆ ದೂರನ್ನು ನೀಡಿದ್ದರು. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿ ನವಲಕಿಶೋರ ಮೀನಾ ಮತ್ತು ಅವರ ಸಹಾಯಕ ಬಾಬುಲಾಲ ಮೀನಾ ಇವರು ಪೀಡಿತ ವ್ಯಕ್ತಿಯ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕದೇ ಅವರ ಬಳಿ ಹಣದ ಬೇಡಿಕೆಯನ್ನಿಡುತ್ತಿದ್ದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭ್ರಷ್ಟಾಚಾರ ನಿರ್ಮೂಲನೆಯ ಜವಾಬ್ದಾರಿಯಿರುವ ಜಾರಿ ನಿರ್ದೇಶಲಾಯದ ಅಧಿಕಾರಿಗಳೇ ಭ್ರಷ್ಟರಾದರೆ, ಭ್ರಷ್ಟಾಚಾರವು ಕಡಿಮೆಯಾಗುವುದು ಯಾವಾಗ ? ‘ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’, ಎಂದೇ ಜನಸಾಮಾನ್ಯರಿಗೆ ಅನಿಸುತ್ತದೆ !