ಬಂಗಾಳದ ಸಿಂಗೂರದಲ್ಲಿ ಟಾಟಾ ಮೋಟಾರ್ಸ್ ಗಾದ ವಿರೋಧದ ಪ್ರಕರಣ
ಮುಂಬಯಿ – ಬಂಗಾಳದ ಸಿಂಗೂರ ಭೂಮಿಯ ವಿವಾದದಲ್ಲಿ ಟಾಟಾ ಸಮೂಹದ ಟಾಟಾ ಮೋಟರ್ಸ್ ಗೆ ೭೬೬ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಪರಿಹಾರ ಸಿಗಲಿದೆ. ಟಾಟಾ ಸಮೂಹವು ಸಿಂಗೂರನಲ್ಲಿದ್ದ ಪ್ರಸ್ತಾಪಿತ ಕಂಪನಿಗೆ ೨೦೦೮ ರಿಂದ ತತ್ಕಾಲಿನ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ವಿರೋಧಿಸಿತ್ತು. ನಂತರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಅದರ ವಿರುದ್ಧ ಕಾನೂನು ಕೂಡ ರೂಪಿಸಿದರು. ಇದರ ವಿರುದ್ಧ ಟಾಟಾ ಮೋಟರ್ಸ್ ನ್ಯಾಯಾಲಯದಲ್ಲಿ ಬಂಡವಾಳ ಹೂಡಿಕೆಯ ಪರಿಹಾರ ನೀಡುವಂತೆ ಬೇಡಿಕೆ ಸಲ್ಲಿಸಿತು. ಈ ಹೋರಾಟದ ತೀರ್ಪು ಈಗ ಟಾಟಾ ಮೋಟರ್ ಪರವಾಗಿ ಬಂದಿದೆ. ಶೇಕಡ ೧೧ ವಾರ್ಷಿಕ ಬಡ್ಡಿ ಸಹಿತ ೭೬೫.೭೮ ಕೋಟಿ ರೂಪಾಯಿ ಪರಿಹಾರ ಪಾವತಿಸುವಂತೆ ಪಶ್ಚಿಮ ಬಂಗಾಳದ ಔದ್ಯೋಗಿಕ ವಿಕಾಸ ಮಹಾಮಂಡಳಕ್ಕೆ ನ್ಯಾಯಾಲಯವು ಆದೇಶ ನೀಡಿದೆ. ಈ ಮಹಾಮಂಡಳಿ ರಾಜ್ಯ ಸರಕಾರದ ವ್ಯಾಪ್ತಿಯಡಿಯಲ್ಲಿ ಬರುತ್ತದೆ.
ಏನು ಈ ಪ್ರಕರಣ ?
೨೦೦೮ : ತತ್ಕಾಲಿನ ಕಮ್ಯುನಿಸ್ಟ್ ಸರಕಾರದಿಂದ ಟಾಟಾ ಮೋಟರ್ಸ್ ನ ನ್ಯಾನೋ ಪ್ಲಾಂಟ್ ನಿರ್ಮಿಸಲು ಅನುಮತಿ ನೀಡಲಾಗಿತ್ತು. ಕಂಪನಿಯಿಂದ ಕೆಲಸ ಆರಂಭವಾದ ನಂತರ ತತ್ಕಾಲಿನ ವಿರೋಧಿ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಇವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ರತನ ಟಾಟಾ ಇವರು ಈ ಯೋಜನೆಯನ್ನು ಬಂಗಾಳದಿಂದ ತೆರವುಗೊಳಿಸಬೇಕಾಯಿತು. ಇದರಿಂದ ಅವರಿಗೆ ಅಪಾರ ನಷ್ಟ ಕೂಡ ಆಯಿತು. ಮುಂದೆ ಮಮತಾ ಬ್ಯಾನರ್ಜಿ ಇವರು ಮುಖ್ಯಮಂತ್ರಿ ಆದ ನಂತರ ಅವರು ಈ ಪ್ರಕರಣಕ್ಕೆ ಕಾನೂನು ರೂಪಿಸಿದರು.
ಜೂನ್ ೨೦೧೧ : ಟಾಟಾ ಮೋಟಾರ್ಸ್ ಇದರ ವಿರುದ್ಧ ರಾಜ್ಯ ಸರಕಾರದ ಕಾನೂನಿಗೆ ಸವಾಲನ್ನು ನೀಡಿತ್ತು. ಕಾನೂನಿನ ಮೂಲಕ ಕಂಪನಿಯಿಂದ ಭೂಮಿ ಕಸಿದುಕೊಳ್ಳಲಾಗಿತ್ತು. ಜೂನ್ ೨೦೧೨ ರಂದು ಕೊಲಕಾತಾ ಉಚ್ಚ ನ್ಯಾಯಾಲಯವು ಸಿಂಗೂರ ಕಾನೂನು ಸಂವಿಧಾನ ಬಾಹಿರವಾಗಿದೆ ಎಂದು ಘೋಷಿಸಿತು ಮತ್ತು ಭೂಮಿ ಬಾಡಿಗೆ ಒಪ್ಪಂದದ ಅಂತರ್ಗತ ಕಂಪನಿಯ ಅಧಿಕಾರವನ್ನು ಪುನರ್ ಸ್ಥಾಪಿಸಿತು.
ಆಗಸ್ಟ್ ೨೦೧೧ : ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು.
೨೦೧೬ : ಸರ್ವೋಚ್ಚ ನ್ಯಾಯಾಲಯವೂ ಟಾಟಾ ಮೋಟರ್ಸ್ ಪರವಾಗಿ ತೀರ್ಪು ನೀಡುತ್ತಾ, ಸರಕಾರದಿಂದ ಭೂಮಿಯನ್ನು ವಶಪಡಿಸಿಕೊಂಡಿರುವುದು ಕಾನೂನುಬಾಹಿರವಾಗಿದೆ ಎಂದು ಘೋಷಿಸುತ್ತಾ ಭೂಮಿಯನ್ನು ಮಾಲೀಕರಿಗೆ ಹಿಂತಿರುಗಿಸುವಂತೆ ಆದೇಶ ನೀಡಿತು.
ಆಗಸ್ಟ್ ೨೦೧೬ ರ ನಂತರ : ಟಾಟಾ ಮೋಟಾರ್ಸ ಭೂಮಿ ಬಾಡಿಗೆ ಒಪ್ಪಂದದ ಒಂದು ಕಲಮಿನ ಆಧಾರ ನೀಡುತ್ತಾ ನಷ್ಟ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತು. ಈ ಸಂಬಂಧ ಕಂಪನಿ ನ್ಯಾಯಾಲಯಕ್ಕೆ ಮೊರೆ ಹೋಯಿತು. ಈಗ ೭ ವರ್ಷದ ನಂತರ ಟಾಟಾ ಮೋಟಾರ್ಸ್ ಗೆ ಜಯ ದೊರೆತಿದೆ.