ಪಾಕಿಸ್ತಾನ ಸರ್ಕಾರದ ಕೂಗಾಟ

ಒಂದೆಡೆ ಜಗತ್ತು ಕೊಕರೋನದ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಹಿಂದುತ್ವದ ನೀತಿಯನ್ನು ಮುನ್ನಡೆಸಲು ಪ್ರಯತ್ನಿಸುತ್ತಿವೆ. ಬಾಬರಿ ಮಸೀದಿಯ ಸ್ಥಳದಲ್ಲಿ ಮಂದಿರ ನಿರ್ಮಾಣ, ಇದು ಈ ದಿಕ್ಕಿನಲ್ಲಿ ಮಾಡುತ್ತಿರುವ ಪ್ರಯತ್ನದ ಒಂದು ಭಾಗವಾಗಿದೆ. ಇದನ್ನು ಪಾಕಿಸ್ತಾನ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ,

ಆನ್‌ಲೈನ್ ವೆಬ್‌ಸಿರೀಸ್ ಮೇಲೆ ನಿಯಂತ್ರಣವಿಡಲು ಸೆನ್ಸರ್ ಬೋರ್ಡನಂತಹ ವ್ಯವಸ್ಥೆ ರೂಪಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ಅನುಷ್ಕಾ ಶರ್ಮಾ ಪ್ರೊಡಕ್ಶನ್ ಮೂಲಕ ‘ಪಾತಾಲ್ ಲೋಕ್’ ವೆಬ್‌ಸಿರೀಸ್ ಸಂಪೂರ್ಣವಾಗಿ ಹಿಂದೂವಿರೋಧಿ ನಿಲುವಿನಿಂದ ತಯಾರಿಸಿದ್ದು ಅದರಲ್ಲಿ ಅತ್ಯಂತ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ಇದರಲ್ಲಿ ಒಂದು ಹೆಣ್ಣು ನಾಯಿಗೆ ‘ಸಾವಿತ್ರಿ’ ಎಂದು ಹೆಸರಿಡಲಾಗಿದೆ; ದೇವಸ್ಥಾನದಲ್ಲಿ ಅರ್ಚಕರು ಮಾಂಸ ಬೇಯಿಸಿ ತಿನ್ನುವಂತೆ ತೋರಿಸಲಾಗಿದೆ;

ಯುದ್ಧಕ್ಕಾಗಿ ಸನ್ನದ್ಧರಾಗಿರಿ – ಚೀನಾದ ಸೈನ್ಯಕ್ಕೆ ಕ್ಸಿ ಜಿನ್‌ಪಿಂಗ್ ಆದೇಶ

ಭೂಮಿಯ ಬಗ್ಗೆ ಭಾರತದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದ್ದಕ್ಕಿದ್ದಂತೆ ತನ್ನ ಸೈನಿಕರಿಗೆ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಆದೇಶಿಸಿದ್ದಾರೆ. ಅವರು ‘ಸೆಂಟ್ರಲ್ ಮಿಲಿಟರಿ ಕಮಿಶನ್’ನ ಸಭೆಯಲ್ಲಿ ಮಾತನಾಡುತ್ತಿದ್ದರು. ಜಿನಪಿಂಗ್ ತಮ್ಮ ಮಾತನ್ನು ಮುಂದುವರೆಸುತ್ತ, ‘ಅತೀ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಯುದ್ಧಕ್ಕೆ ಸಿದ್ಧರಾಗಬೇಕಾಗಿದೆ” ಎಂದು ಅವರು ಹೇಳಿದರು.

‘ಕ್ರೈಸ ಮಿಷನರಿಗಳು ಹಿಂದೂಗಳನ್ನು ಮತಾಂತರಿಸುತ್ತಾರೆ, ಹಾಗಾಗಿ ನಾನು ಏನು ಮಾಡಲಿ (ಯಂತೆ) ?’

ಮಿಷನರಿಗಳು ಹಣದ ಬಲದಿಂದ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದರೆ, ಅದಕ್ಕೆ ನಾನು ಏನು ಮಾಡಲಿ, ಎಂದು ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಸಂಸದ ರಘು ಕೃಷ್ಣ ರಾಜು ಇವರು ಅತ್ಯಂತ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡಿದ್ದಾರೆ. ಅವರು ಮೇ ೨೫ ರಂದು ‘ಟೈಮ್ಸ್ ನೌ’ ಈ ವಾರ್ತಾವಾಹಿನಿಯಲ್ಲಿ ನಡೆದ ಒಂದು ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.

ತಿರುಪತಿ ದೇವಸ್ಥಾನದ ೫೦ ಆಸ್ತಿಗಳನ್ನು ಮಾರಾಟ ಮಾಡುವ ನಿರ್ಣಯವು ಆಂಧ್ರಪ್ರದೇಶ ಸರ್ಕಾರದಿಂದ ವಜಾ

ರಾಜ್ಯ ಸರಕಾರವು ಧರ್ಮನಿಷ್ಠ ಹಾಗೂ ಭಕ್ತರ ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿಕ್ಕನ್ನು ನಿರ್ಧರಿಸಲಾಗುವುದು ! ಇದು ಹಿಂದೂಗಳು ಒಟ್ಟಾಗಿ ವಿರೋಧಿಸಿದ್ದರ ಗೆಲುವಾಗಿದೆ ! ಹಿಂದೂಗಳು ಇದೇ ರೀತಿ ಸಂಘಟನೆಯನ್ನು ತೋರಿಸುವ ಮೂಲಕ ದೇವಾಲಯಗಳನ್ನು ಸರಕಾರಿಕರಣದ ಅಪಾಯದಿಂದ ಮುಕ್ತಗೊಳಿಸಬೇಕು ! ‘ಹಿಂದೂ ದೇವಸ್ಥಾನಗಳಲ್ಲಿನ ಹಣವು ಹಿಂದೂ ಧರ್ಮದ ಆಸ್ತಿ ಯಾಗಿದೆ ಮತ್ತು ಅದನ್ನು ಹಿಂದೂ ಧರ್ಮದ ಉನ್ನತಿಗಾಗಿ ಖರ್ಚು ಮಾಡಬೇಕು’, ಎಂಬ ಕಾನೂನನ್ನುಕೇಂದ್ರದ ಸರಕಾರವು ರೂಪಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ ! ತಿರುಪತಿ (ಆಂಧ್ರಪ್ರದೇಶ) – ಕರೋನಾ ಮಹಾಮಾರಿಯಿಂದಾಗಿ … Read more

ಭಾರತ ಮತ್ತು ಚೀನಾ ನಡುವಿನ ೬ ಸುತ್ತುಗಳ ಮಾತುಕತೆಯ ನಂತರವೂ ಲಡಾಖ್‌ನಲ್ಲಿ ಮುಂದುವರಿದ ಗಡಿ ವಿವಾದ

ಲಡಾಖ್‌ನ ಗಾಲ್ವಾನ್ ಕಣಿವೆಯ ಕುರಿತು ಚೀನಾ ಮತ್ತು ಭಾರತ ನಡುವೆ ಆರು ಸುತ್ತಿನ ಮಾತುಕತೆ ನಡೆಸಿದ ನಂತರ ಸೂಕ್ತ ನಿರ್ಣಯ ಬಂದಿಲ್ಲ. ಆದ್ದರಿಂದ ಈಗ ಭಾರತ ಅಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲು ಪ್ರಾರಂಭಿಸಿದೆ. ಈ ಪ್ರದೇಶದಲ್ಲಿ ಚೀನಾವು ೫,೦೦೦ ಸೈನಿಕರನ್ನು ನೇಮಿಸಿದ್ದು ೧೦೦ ಕ್ಕೂ ಹೆಚ್ಚು ಡೇರೆಗಳನ್ನು ಸ್ಥಾಪಿಸಲಾಗಿದೆ.

ಅಸ್ಸಾಂನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಐವರು ಮತಾಂಧರು ಮಾಡಿದ ಮಾರಣಾಂತಿಕ ಹಲ್ಲೆಯಲ್ಲಿ ಹಿಂದೂ ತರಕಾರಿ ಮಾರಾಟಗಾರನ ಹತ್ಯೆ

ಅಸ್ಸಾಂ ನ ಮನಾಹಕುಚಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಫೈಜುಲ್ ಅಲಿ, ಲಾಜಿಲ್ ಅಲಿ, ಶಬ್ಬೀರ್ ಅಲಿ, ಯೂಸುಫ್ ಅಲಿ ಮತ್ತು ಫರ್ಜಾನ್ ಅಲಿ ಇವರು ಸನಾತನ ಡೆಕಾ ಎಂಬ ತರಕಾರಿ ಮಾರಾಟಗಾರನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ಆತನ ಹತ್ಯೆ ಮಾಡಿದರು. ಸನಾತನ ಡೆಕಾ ಇವರು ಬೈಸಿಕಲ್‌ನಲ್ಲಿ ತರಕಾರಿಗಳನ್ನು ಮಾರುವ ವ್ಯವಸಾಯವನ್ನು ಮಾಡುತ್ತಿದ್ದರು.

ಹಿಂದೂಗಳ ವಿರೋಧದ ನಂತರ ಕ್ರೈಸ್ತ ಮಿಷನರಿಗಳ ಒತ್ತಡದಿಂದ ಕನ್ಯಾಕುಮಾರಿಯಲ್ಲಿ ಇರುವ ಭಾರತಮಾತೆಯ ಮುಚ್ಚಿದ್ದ ಮೂರ್ತಿಯನ್ನು ತೆಗೆಯಲಾಯಿತು

ಕ್ರೈಸ್ತ ಮಿಷನರಿಗಳು ಮಾಡಿದ ವಿರೋಧದಿಂದಾಗಿ ಭಾರತಮಾತೆಯ ಮೂರ್ತಿಯನ್ನು ಜಿಲ್ಲಾಡಳಿತ ವತಿಯಿಂದ ಮುಚ್ಚಿಡಲಾಗಿತ್ತು. ಆಡಳಿತದ ಈ ಕ್ರಮವನ್ನು ದೇಶಪ್ರೇಮಿಗಳು ವಿರೋಧಿಸಿದ ನಂತರ ಮೂರ್ತಿಯ ಮೇಲಿನ ಹೊದಿಕೆಯನ್ನು ತೆಗೆದುಹಾಕಲಾಯಿತು. ಈ ಬಗ್ಗೆ ಬಿಜೆಪಿ ಮಾಜಿ ಸಂಸದ ತರುಣ್ ವಿಜಯ್ ಟ್ವೀಟ್ ಮಾಡಿದ್ದಾರೆ. ಮೂರ್ತಿಯನ್ನು ಇಲ್ಲಿನ ಅಮ್ಮನ್ ದೇವಸ್ಥಾನದಲ್ಲಿ ಸ್ಥಾಪಿಸಲಾಗಿತ್ತು.

ಕರೋನದ ಬಿಕ್ಕಟ್ಟು ಇರುವಾಗಲೇ ಈಗ ದೇಶದಲ್ಲಿ ಮಿಡತೆಯ ದಾಳಿ !

ಭಾರತದಲ್ಲಿ ಕರೋನಾ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವಾಗಲೇ, ಮತ್ತೊಂದು ದೊಡ್ಡ ಬಿಕ್ಕಟ್ಟು ಎದುರಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ, ಬೆಳೆದ ಬೆಳೆಯ ಮೇಲೆ ಮಿಡತೆಗಳು ದಾಳಿ ಮಾಡಿವೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಬೆಳೆಗಳ ಮೇಲೆ ದಾಳಿ ಮಾಡಿದ ನಂತರ ಈ ಮಿಡತೆಗಳು ಈಗ ಉತ್ತರ ಪ್ರದೇಶದತ್ತ ಸಾಗುತ್ತಿವೆ.

‘ಭಾರತ ನಮ್ಮ ವಿರುದ್ಧ ಏನಾದರೂ ಮಾಡಲು ಧೈರ್ಯ ಮಾಡಿದರೆ, ನಾವು ತಕ್ಕಪ್ರತ್ಯುತ್ತರಿಸುತ್ತೇವೆ(ಯಂತೆ) !’ – ಪಾಕ್‌ನ ದರ್ಪ

ಪಾಕ್‌ಗೆ ಕಿವಿ ಹಿಂಡಿದ ಮಾಲ್ಡೀವ್ಸ್, ಪಾಕಿಸ್ತಾನದ ಈ ಆರೋಪಗಳನ್ನು ಮಾಲ್ಡೀವ್ಸ್ ಬಲವಾಗಿ ಖಂಡಿಸಿದೆ. ‘ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶವಾಗಿದ್ದು, ಭಾರತದಲ್ಲಿ ೨೦ ಕೋಟಿಕ್ಕಿಂತಲೂ ಹೆಚ್ಚು ಮುಸಲ್ಮಾನರು ವಾಸಿಸುತ್ತಿದ್ದಾರೆ. ಆದ್ದರಿಂದ ಭಾರತದ ವಿರುದ್ಧ ಇಂತಹ ಆರೋಪ ಮಾಡುವುದು ಅಯೋಗ್ಯವಾಗಿದೆ. ಇಂತಹ ಆರೋಪ ಹೊರಿಸುವುದು, ಇದು ದಕ್ಷಿಣ ಏಷ್ಯಾ ಪ್ರದೇಶದ ಧಾರ್ಮಿಕ ಏಕತೆಗೆ ಮಾರಕವಾಗಿದೆ.