ಸೊಪೊರದಲ್ಲಿ ೨ ಭಯೋತ್ಪಾದಕರ ಹತ್ಯೆ

ಇಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಯವರು ೨ ಭಯೋತ್ಪಾದಕರ ಹತ್ಯೆ ಮಾಡಿದ್ದಾರೆ. ಇಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿಯು ಸಿಕ್ಕಿದಾಕ್ಷಣ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದಾಗ ಈ ಚಕಮಕಿ ಆರಂಭವಾಯಿತು.

ನಾಗರಿಕ ಸಹಕಾರಿ ಬ್ಯಾಂಕ್‌ಗಳು ಇನ್ನು ರಿಝರ್ವ್ ಬ್ಯಾಂಕಿನ ನಿಯಂತ್ರಣದಲ್ಲಿ

ಕೇಂದ್ರ ಸಚಿವಸಂಪುಟದ ಸಭೆಯಲ್ಲಿ ನಾಗರಿಕ ಸಹಕಾರಿ ಹಾಗೂ ‘ಮಲ್ಟಿ ಸ್ಟೆಟ್ ಕೊ ಆಪರೇಟಿವ್’ ಈ ಬ್ಯಾಂಕ್‌ಗಳನ್ನು ರಿಝರ್ವ್ ಬ್ಯಾಂಕ್‌ನ ನಿಯಂತ್ರಣದಡಿಯಲ್ಲಿ ತರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಪ್ರಕಾಶ ಜಾವಡೆಕರ ಇವರು ನೀಡಿದರು. ‘ಈ ಬ್ಯಾಂಕಿನಲ್ಲಿರುವ ನಾಗರಿಕರ ಠೇವಣಿಯನ್ನು ಸುರಕ್ಷಿತವಾಗಿಡಲು ಸರಕಾರ ಈ ನಿರ್ಣಯವನ್ನು ತೆಗೆದುಕೊಂಡಿದೆ’, ಎಂದು ಜಾವಡೆಕರ ಇವರು ಹೇಳಿದ್ದಾರೆ.

ದೇವಸ್ಥಾನ ಸರಕಾರಿಕರಣದ ವಿರುದ್ದ ಚಾರಧಾಮದಲ್ಲಿ  ಚಳಿಯಲ್ಲಿ ಅರೆನಗ್ನವಾಗಿ ಆಂದೋಲನ ಮಾಡುವುದಾಗಿ ಅರ್ಚಕರ ಎಚ್ಚರಿಕೆ

ಉತ್ತರಾಖಂಡನ ಭಾಜಪ ಸರಕಾರ ಚಾರಧಾಮ ಹಾಗೂ ೪೭ ದೇವಸ್ಥಾನಗಳ ಸರಕಾರಿಕರಣ ಮಾಡಿದ್ದನ್ನು ವಿರೋಧಿಸಲು ಪುರೋಹಿತರು ಇಲ್ಲಿಯ ಚಳಿಯಲ್ಲಿ ಅರೆನಗ್ನರಾಗಿ ಆಂದೋಲನ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ‘ಒಂದು ವೇಳೆ ಭಾಜಪ ಸರಕಾರ ನಮ್ಮ ಬೇಡಿಕೆಯ ಕಡೆ ದುಲ್ಷಕ್ಷ ಮಾಡುತ್ತಿದ್ದರೆ, ನಾವು ಕೂಡಲೇ ಈ ರೀತಿಯಾಗಿ ಖಂಡಿಸುವೆವು’

ಪಾಣಿಪತ್ (ಹರಿಯಾಣಾ)ದಲ್ಲಿ ೩೫ ಮುಸಲ್ಮಾನರು ಹಿಂದೂ ಧರ್ಮಕ್ಕೆ ಪುನಃ ಪ್ರವೇಶ

ಇಲ್ಲಿಯ ಆಸನ ಊರಿನಲ್ಲಿ ನೆಲೆಸಿದ ಒಂದು ಕುಟುಂಬದ ೩೫ ಮುಸಲ್ಮಾನರು ಪುನಃ ಹಿಂದೂ ಧರ್ಮಕ್ಕೆ ಪ್ರವೇಶಿಸಿದರು. ಅದಕ್ಕಾಗಿ ಅವರಿಗೆ ಹಿಂದೂ ಯುವಾ ವಾಹಿನಿಯವರು ಸಹಾಯ ಮಾಡಿದರು. ‘ನಾವು ಸ್ವೇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇವೆ’, ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಕುಟುಂಬದ ಹಿರಿಯರು ಹರಿದ್ವಾರ ಹಾಗೂ ಗುಗಾ ಮೇಡಿಯಲ್ಲಿಗೆ ಹೋಗಿ ತಪಶ್ಚರ್ಯ ಮಾಡಿದ್ದರು.

ಅಸ್ಸಾಂನಲ್ಲಿ ಮತಾಂಧರಿಂದ ಇನ್ನೊಬ್ಬ ಹಿಂದೂ ಯುವಕನ ಬರ್ಬರವಾಗಿ ಹತ್ಯೆ

ಜೂನ್ ೧೯ ರಂದು ಲೆಜಾಯಿನಲ್ಲಿ ಮತಾಂಧರಿಂದ ಮತ್ತೋರ್ವ ಹಿಂದೂ ಯುವಕನ ಬರ್ಬರವಾಗಿ ಹತ್ಯೆ ಮಾಡಲಾಯಿತು. ಸೌರಭ ದಾಸ ಎಂಬುವನ ಹತ್ಯೆಯಾಗಿದೆ. ಮತಾಂಧರು ಸೌರಭನ ಹತ್ಯೆ ಮಾಡಿದ ನಂತರ ಆತನ ಮೃತದೇಹವನ್ನು ಸೆಸಾ ನದಿಯಲ್ಲಿ ಎಸೆದರು.

‘ಸಾಂಕ್ರಾಮಿಕ ಮತ್ತು ಮಾಲಿನ್ಯಗಳಿಗೆ ಉಪಾಯ : ಸನಾತನ ಪರಂಪರೆ ಕುರಿತಾದ ವಿಶೇಷ ಚರ್ಚಾಕೂಟದಲ್ಲಿ ಗಣ್ಯರ ಸಹಭಾಗ

ಮಾಘ ಮಕರ ಸಂಕ್ರಾಂತಿಯ ನಂತರ ಸೂರ್ಯ ಮಕರರಾಶಿಗೆ ಹೋಗುತ್ತದೆ. ಮಕರ ರೇಖೆಯು ಪ್ರಯಾಗ ರಾಜಗೆ ಎಲ್ಲಕ್ಕಿಂತ ಹೆಚ್ಚು ಹತ್ತಿರದಲ್ಲಿದೆ. ಆದ್ದರಿಂದ ಈ ಸಮಯದಲ್ಲಿ ಗಂಗಾ ನದಿಯಲ್ಲಿ ಬೀಳುವ ಸೂರ್ಯನ ಕಿರಣಗಳಲ್ಲಿ ಅತೀ ನೀಲ ಕಿರಣಗಳು ಹೆಚ್ಚು ಇರುತ್ತದೆ. ಅದರಿಂದ ಲಾಭವಾಗಿ ಅದರಲ್ಲಿ ಸ್ನಾನ ಮಾಡುವವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಿಂದೂ ಜನಜಾಗೃತಿ ಸಮಿತಿಯು ಮಾಡಿದ ಪ್ರಭೋಧನೆ ಸಂದ ಯಶಸ್ಸು !

ಈ ಅವಧಿಯಲ್ಲಿ ಈ ಪ್ರದೇಶದ ಅನೇಕ ನಾಗರಿಕರು, ಹಿಂದುತ್ವನಿಷ್ಠ, ಧರ್ಮಪ್ರೇಮಿ ಹಾಗೂ ವಿತರಕರು ವಿವಿಧ ಮಾಧ್ಯಮಗಳಿಂದ ‘ಸುಂದರ್ ಇಂಡಸ್ಟ್ರೀಸ್ ಸಂಸ್ಥೆಗೆ ‘ಹಲಾಲ್ ಮುದ್ರೆ ಹೊಂದಿರುವ ಉತ್ಪಾದನೆಗಳು ನಮಗೆ ಬೇಡವೇ ಬೇಡ, ಎಂದು ತಿಳಿಸಿದರು.

ಕಾಶಿ ಮತ್ತು ಮಥಾರಾದಲ್ಲಿನ ದೇವಸ್ಥಾನಗಳ ವಿವಾದ

ಕಾಶಿಯ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣನ ದೇವಸ್ಥಾನ ವಿಷಯದ ವಿವಾದದ ಬಗ್ಗೆ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಪುರೋಹಿತರ ಸಂಘಟನೆ ಯಾದ ‘ವಿಶ್ವ ಭದ್ರಾ ಪೂಜಾರಿ ಪುರೋಹಿತ ಮಹಾಸಂಘ’ದ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಲಕ್ಷ್ಮಣಪುರಿ (ಉತ್ತರಪ್ರದೇಶ)ಯಲ್ಲಿ ಮತಾಂಧರಿಂದ ತ್ರಿವರ್ಣ ಧ್ವಜ ಸುಟ್ಟ್ಟು ದೇಶವಿರೋಧಿ ಘೋಷಣೆ !

ಇಲ್ಲಿಯ ಬಾಜಾರಖಾಲಾ ಪ್ರದೇಶದಲ್ಲಿ ೪ ಮತಾಂಧರು ತ್ರಿವರ್ಣ ಧ್ವಜವನ್ನು ಸುಟ್ಟು ದೇಶವಿರೋಧಿ ಘೋಷಣೆ ಕೂಗಿದ ಘಟನೆ ಬಹಿರಂಗವಾಗಿದೆ. ಇದಕ್ಕೆ ವಿರೋಧಿಸಿದವರ ಮೇಲೆ ಮತಾಂಧರು ಹಲ್ಲೆ ಮಾಡಿದ್ದಾರೆ. ಈ ಘಟನೆ ಜೂನ್ ೨೧ ರಂದು ಸಂಜೆ ನಡೆದಿದೆ. ಮತಾಂಧರು ಈ ಕೃತ್ಯದ ‘ಟಿಕ್ ಟಾಕ್ ವಿಡಿಯೋ’ ಮಾಡಿ ಅದರ ಪ್ರಸಾರ ಮಾಡುವವರಿದ್ದರು.

ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ, ಒಬ್ಬ ಸೈನಿಕ ಹುತಾತ್ಮ

ಇಲ್ಲಿ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಯು ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ, ಇದರಲ್ಲಿ ಕೇಂದ್ರೀಯ ಮೀಸಲು ಪಡೆಯ ಸೈನಿಕ ಸುನೀಲ್ ಕಾಳೆಯವರು ಹುತಾತ್ಮರಗಿದ್ದಾರೆ. ಅವರು ಸೊಲ್ಲಾಪುರದ ಪಾನಗಾವನಲ್ಲಿ ನಿವಾಸಿಯಾಗಿದ್ದರು.