ಮಹಮ್ಮದ ಅಲಿ ಜಿನ್ನಾರವರು ಭಾರತದ ವಿಭಜನೆಯನ್ನು ಬಯಸಿದ್ದರು ! – ಪಾಕಿಸ್ತಾನಿ ಮೂಲದ ಲೇಖಕನ ಹೇಳಿಕೆ

ಜಿನ್ನಾರವರ ಮೊಂಡುತನದ ಕಾರಣದಿಂದಲೇ ಭಾರತದ ವಿಭಜನೆ ಆಯಿತು, ಎಂದು ಪಾಕಿಸ್ತಾನ ಮೂಲದ ರಾಜ್ಯಶಾಸ್ತ್ರದ ಸಂಶೋಧಕ ಇಶ್ತಿಯಾಕ್ ಅಹಮದ ಇವರು ಹೇಳಿದ್ದಾರೆ. ಇಶ್ತಿಯಾಕ್ ಅಹಮದ ಇವರು ತಮ್ಮ ‘ಜಿನ್ನಾ : ಹಿಸ್ ಸಕ್ಸೆಸ್, ಫೆಲ್ಯೂರ್ ಆಂಡ್ ರೋಲ್ ಇನ್ ಹಿಸ್ಟರಿ’ ಈ ಪುಸ್ತಕದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ದೋಷಾರೋಪಟ್ಟಿಯಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಆಪ್‌ನ ಮಾಜಿ ನಾಯಕ ಯೋಗೇಂದ್ರ ಯಾದವ ಸಹಿತ ಅನೇಕರ ಹೆಸರುಗಳ ಉಲ್ಲೇಖ

ಪೊಲೀಸರು ಫೆಬ್ರವರಿ ೨೦೨೦ ರ ದೆಹಲಿ ಗಲಭೆಯ ಪ್ರಕರಣದಲ್ಲಿ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಆಪ್‌ನ ಮಾಜಿ ಹಾಗೂ ಸ್ವರಾಜ್ಯ ಅಭಿಯಾನದ ಇಂದಿನ ಮುಖಂಡ ಯೊಗೇಂದ್ರ ಯಾದವ ಮುಂತಾದವರು ಇದ್ದಾರೆ.

ಗೌತಮ ಬುದ್ಧ ನಗರ(ಉತ್ತರಪ್ರದೇಶ)ದ ದೇವಸ್ಥಾನದಲ್ಲಿ ಧ್ವನಿವರ್ಧಕ ಹಚ್ಚಿದ್ದರೆಂದು ಹಿಂದೂ ವ್ಯಕ್ತಿಯ ಮೇಲೆ ಹಲ್ಲೆಗೈದ ಮತಾಂಧರು

ದೇವಸ್ಥಾನದಲ್ಲಿ ಧ್ವನಿವರ್ಧಕ ಹಾಕಿದ ಕಾರಣವನ್ನು ನೀಡುತ್ತಾ ಮತಾಂಧರು ಸ್ವರಾಜ ಸಿಂಹ ಎಂಬ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರು. ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಅಚ್ಛೆಜಾ ಎಂಬ ಗ್ರಾಮದಲ್ಲಿ ಈ ಘಟನೆ ಇತ್ತೀಚೆಗೆ ಸಂಭವಿಸಿದೆ. ಈ ಪ್ರಕರಣದ ಬಗ್ಗೆ ಸ್ವರಾಜ ಸಿಂಹ ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಫಝಲ್, ಶರಾಫ್ ಹಾಗೂ ಗುಲಜಾರನನ್ನು ಬಂಧಿಸಿದ್ದಾರೆ.

‘ಸೂಪರ ಶಕ್ತಿ ಮೆಟಾಲಿಕ್ಸ್’ ಸಂಸ್ಥೆಯಿಂದ ದೇವತೆಗಳ ಅವಮಾನವನ್ನು ಮಾಡುವ ಜಾಹೀರಾತು ಜಾಲತಾಣದಲ್ಲಿ ಪ್ರಸಾರ

‘ಸೂಪರ್ ಶಕ್ತಿ ಮೆಟಾಲಿಕ್ಸ್’ ಈ ಸಂಸ್ಥೆಯು ಶ್ರೀ ಇಂದ್ರದೇವ, ಶ್ರೀ ವಿಶ್ವಕರ್ಮ ದೇವ ಹಾಗೂ ಶ್ರೀ ನಾರದಮುನಿಯರ ವಿಡಂಬನೆಯನ್ನು ಮಾಡುವ ಜಾಹೀರಾತು ಈಗ ಜಾಲತಾಣದಲ್ಲಿ ಪ್ರಸಾರ ಮಾಡಲಾಗುತ್ತಿದೆ. ‘ಸೂಪರ ಶಕ್ತಿ ಮೆಟಾಲಿಕ್ಸ್’ ಇದು ಗೃಹನಿರ್ಮಾಣಕ್ಕಾಗಿ ಬೇಕಾಗಿರುವ ‘ಟಿ.ಎಮ್.ಟಿ. ಬಾರ‍್ಸ್’ಗಳನ್ನು ಉತ್ಪಾದನೆ ಹಾಗೂ ಮಾರಾಟ ಮಾಡುವ ಸಂಸ್ಥೆಯಾಗಿದೆ.

ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿದ್ದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾದ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿರುವುದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾಗಳ ಮುಖಂಡರು ಹಾಗೂ ಅನೇಕ ಸಾವಿರಾರು ಕಾರ್ಯಕರ್ತರು ಸಪ್ಟೆಂಬರ್ ೧೦ ರಂದು ಸಂಪೂರ್ಣ ಆಂಧ್ರಪ್ರದೇಶದಲ್ಲಿ ೧೧ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದರು.

‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನ ಅವಹೇಳನೆ ನಡೆಯುತ್ತಲೇ ಇದೆ !

ಕರ್ಪೂರದ ಉತ್ಪಾದನೆ ಹಾಗೂ ಮಾರಾಟ ಮಾಡುವ ರಾಯಗಡ ಜಿಲ್ಲೆಯ ಕುಂಭಿವಲಿಯಲ್ಲಿನ ‘ಮಂಗಲಮ್ ಆರಗ್ಯಾನಿಕ್ಸ್ ಲಿಮಿಟೆಡ್’ ಈ ಸಂಸ್ಥೆಯು ತನ್ನ ‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನು ಸೆಲ್ಫೀ (ಸಂಚಾರವಾಣಿಯಲ್ಲಿ ಸ್ವಂತದ ಫೋಟೊವನ್ನು ಸ್ವತಃ ತೆಗೆಯುವುದು) ತೆಗೆದುಕೊಳ್ಳುತ್ತಿರುವಂತೆ ತೋರಿಸಿ ಪ್ರಭು ಶ್ರೀರಾಮನ ಘೋರ ಅವಹೇಳನೆಯು ಇಂದಿಗೂ ಮುಂದುವರೆದಿದೆ.

ಮಂಡ್ಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ೩ ಅರ್ಚಕರನ್ನು ಹತ್ಯೆ ಮಾಡಿ ದರೋಡೆ

ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರಾಗಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದೇವಾಲಯದ ಆವರಣದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ರಾತ್ರಿ ಸುಮಾರು ೧ ಗಂಟೆಯ ಸಮಯದಲ್ಲಿ ಮೂರುಜನರು ಮಲಗಿರುವಾಗ ಸಂಭವಿಸಿದೆ.

‘ಉತ್ತಮ ಆಹಾರ ಹಾಗೂ ದೈಹಿಕ ಸಂಬಂಧಗಳಿಂದ ಸಿಗುವ ಆನಂದ ದಿವ್ಯವಾಗಿರುತ್ತದೆ (ಯಂತೆ) !’ – ಪೋಪ್ ಫ್ರಾನ್ಸಿಸ್

ಯಾವುದೇ ರೀತಿಯ ಆನಂದ ನಮಗೆ ಪ್ರತ್ಯಕ್ಷವಾಗಿ ದೇವರಿಂದ ಸಿಗುತ್ತಿರುತ್ತದೆ. ಅದು ಕ್ಯಾಥೊಲಿಕ್ ಕ್ರೈಸ್ತ ಅಥವಾ ಇನ್ನಾವುದೇ ಇರುವುದಿಲ್ಲ, ಅದು ಕೇವಲ ದಿವ್ಯವಾಗಿರುತ್ತದೆ. ಉತ್ತಮವಾದ ಬೇಯಿಸಿದ ಆಹಾರ ಹಾಗೂ ದೈಹಿಕ ಸಂಬಂಧದಿಂದಾಗಿ ಸಿಗುವ ಆನಂದ ದಿವ್ಯವಾಗಿರುತ್ತದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಹೇಳಿದ್ದಾರೆ.

ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ ‘ಅಂಡ್ರೈಡ್ ಆಪ್’ಗೆ ಉತ್ತಮ ಪ್ರತಿಕ್ರಿಯೆ

ಶ್ರಾದ್ಧವಿಧಿಯ ಬಗ್ಗೆ ಭಕ್ತರಿಗೆ ಶಾಸ್ತ್ರೀಯ ಮಾಹಿತಿ ಸಿಗಬೇಕೆಂದು ಸನಾತನ ಸಂಸ್ಥೆಯ ವತಿಯಿಂದ ‘ಶ್ರಾದ್ಧವಿಧಿ’ ಈ ‘ಅಂಡ್ರೈಡ್ ಆಪ್’ಅನ್ನು ನಿರ್ಮಿಸಲಾಯಿತು. ಇದರಲ್ಲಿ ಶ್ರಾದ್ಧದ ಮಹತ್ವ, ವಿಧ, ಶ್ರಾದ್ಧದ ಸಂದರ್ಭದಲ್ಲಿನ ಸಂದೇಹ ನಿವಾರಣೆ ಇತ್ಯಾದಿ ಜ್ಞಾನವನ್ನು ನೀಡುವ ಲೇಖನ, ಭಗವಾನ ದತ್ತಾತ್ರೇಯನ ಕುರಿತಾದ ಲೇಖನಗಳು ಹಾಗೂ ದತ್ತಾತ್ರೇಯ ದೇವತೆಯ ನಾಮಜಪದ ಆಡಿಯೋ ಲಭ್ಯವಿದೆ.

ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ ೫೯ ಕೋಟಿ ೫೨ ಲಕ್ಷ ರೂಪಾಯಿ ಜಪ್ತಿ

ರಕ್ಷಣಾ ಸಚಿವಾಲಯದ ೭೪೪೨೬.೮೮೮ ಚದರ ಮೀಟರ್ ಭೂಮಿಯನ್ನು ಕರ್ನಾಟಕ ಸರಕಾರಕ್ಕೆ ಪರಸ್ಪರ ಮಾರಾಟ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (‘ಇ.ಡಿ.’)ಯು ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ (‘ಸಿ.ಎಸ್.ಐ.ಟಿ.ಎ.’ ನಿಂದ) ೫೯ ಕೋಟಿ ೫೨ ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದೆ.