ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ ‘ಅಂಡ್ರೈಡ್ ಆಪ್’ಗೆ ಉತ್ತಮ ಪ್ರತಿಕ್ರಿಯೆ

ಕೇವಲ ೧ ವಾರದಲ್ಲೇ ೫ ಸಾವಿರಕ್ಕಿಂತಲೂ ಹೆಚ್ಚು ಬಾರಿ ಡೌನ್‌ಲೋಡ್

‘ಆಪ್’ಗೆ ೫ ಕ್ಕೆ ೫(ಅತ್ಯುನ್ನತ್ತ) ಮೌಲ್ಯಾಂಕನ

ಮುಂಬಯಿ – ಶ್ರಾದ್ಧವಿಧಿಯ ಬಗ್ಗೆ ಭಕ್ತರಿಗೆ ಶಾಸ್ತ್ರೀಯ ಮಾಹಿತಿ ಸಿಗಬೇಕೆಂದು ಸನಾತನ ಸಂಸ್ಥೆಯ ವತಿಯಿಂದ ‘ಶ್ರಾದ್ಧವಿಧಿ’ ಈ ‘ಅಂಡ್ರೈಡ್ ಆಪ್’ಅನ್ನು ನಿರ್ಮಿಸಲಾಯಿತು. ಇದರಲ್ಲಿ ಶ್ರಾದ್ಧದ ಮಹತ್ವ, ವಿಧ, ಶ್ರಾದ್ಧದ ಸಂದರ್ಭದಲ್ಲಿನ ಸಂದೇಹ ನಿವಾರಣೆ ಇತ್ಯಾದಿ ಜ್ಞಾನವನ್ನು ನೀಡುವ ಲೇಖನ, ಭಗವಾನ ದತ್ತಾತ್ರೇಯನ ಕುರಿತಾದ ಲೇಖನಗಳು ಹಾಗೂ ದತ್ತಾತ್ರೇಯ ದೇವತೆಯ ನಾಮಜಪದ ಆಡಿಯೋ ಲಭ್ಯವಿದೆ. ಕನ್ನಡ, ಹಿಂದಿ, ಮರಾಠಿ ಹಾಗೂ ಆಂಗ್ಲ ಹೀಗೆ ೪ ಭಾಷೆಗಳಲ್ಲಿ ಲಭ್ಯವಿರುವ ಈ ‘ಅಂಡ್ರೈಡ್ ಆಪ್’ ೨ ಸೆಪ್ಟೆಂಬರ ೨೦೨೦ ರಂದು ಅಂದರೆ ೧ ವಾರದ ಹಿಂದೆ ‘ಪ್ಲೇಸ್ಟೋರ್’ ನಲ್ಲಿ ಒದಗಿಸಲಾಗಿತ್ತು. ಕೇವಲ ೧ ವಾರದ ಕಾಲಾವಧಿಯಲ್ಲಿ ಇದು ೫ ಸಾವಿರಕ್ಕಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ಆದ್ದರಿಂದ ಅನೇಕರಿಗೆ ಈ ‘ಆಪ್’ ಇಷ್ಟವಾಗಿರುವುದರ ಪಾವತಿ ಸಿಕ್ಕಂತಾಗಿದೆ. ‘ಪ್ಲೇಸ್ಟೋರ್’ನಲ್ಲಿ ಇಲ್ಲಿಯವರೆಗೆ ೧೫೧ ಜನರು ಮೌಲ್ಯಾಂಕನ ನೀಡಿದ್ದಾರೆ. ವಿಶೇಷವೆಂದರೆ ಎಲ್ಲರೂ ಈ ‘ಆಪ್’ಗೆ ೫ ರ ಪೈಕಿ ೫(ಅತ್ಯುನ್ನತ) ಮೌಲ್ಯಾಂಕನ ನೀಡಿದ್ದಾರೆ.

ವಾಚಕರ ಕೆಲವು ಆಯ್ದ ಅಭಿಪ್ರಾಯಗಳು

ಬೇಲೂರು ಪ್ರಕಾಶ ಶ್ರೀನಾಥ : ಪಿತೃಪಕ್ಷದ ನಿಮಿತ್ತ ಆಗುವ ಧಾರ್ಮಿಕ ವಿಧಿಗಳ ಬಗ್ಗೆ ಸೂಕ್ತ ಮಾಹಿತಿ ಇರುವ ಬಹುಪಯೋಗಿ ‘ಆಪ್.’ ಸನಾತನ ಸಂಸ್ಥೆಗೆ ಆಭಾರಿಯಾಗಿದ್ದೇನೆ.

ಅನಘಾ ಸಾದಗಲೆ : ಇದರಲ್ಲಿ ಪಿತೃಪಕ್ಷದ ಬಗ್ಗೆ ಶಾಸ್ತ್ರೀಯ ಮಾಹಿತಿ ಇದೆ. ಶ್ರಾದ್ಧದ ಬಗ್ಗೆ ಎಲ್ಲಕ್ಕಿಂತ ಉತ್ತಮವಾದ ‘ಆಪ್’ ಆಗಿದೆ. ಶ್ರಾದ್ಧದ ಬಗ್ಗೆ ಏನು ಹಾಗೂ ಹೇಗೆ ಮಾಡಬೇಕು ? ಎಂಬುದು ತಿಳಿಯಿತು.

‘ಆಪ್’ ಡೌನ್‌ಲೋಡ್ ಮಾಡಲು ಲಿಂಕ್ : https://www.sanatan.org/shraddha-app