ವೈಷ್ಣೋದೇವಿ ಯಾತ್ರೆ ಪ್ರಾರಂಭ: ಪ್ರತಿದಿನ ೨ ಸಾವಿರ ಭಕ್ತರಿಗೆ ಭೇಟಿ ನೀಡಲು ಅನುಮತಿ

ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆಯನ್ನು ಜಮ್ಮು ಕಾಶ್ಮೀರ ಆಡಳಿತದ ಅನುಮತಿಯೊಂದಿಗೆ ಆಗಸ್ಟ್ ೧೬ ರಂದು ಪುನರಾರಂಭಿಸಲಾಯಿತು. ಪ್ರತಿದಿನ ೨ ಸಾವಿರ ಭಕ್ತರಿಗೆ ಯಾತ್ರೆಗೆ ಅವಕಾಶ ಕಲ್ಪಿಸಲಾಗುವುದು. ಅವರಲ್ಲಿ ೧ ಸಾವಿರದ ೯೦೦ ಭಾರತೀಯ ಮತ್ತು ೧೦೦ ವಿದೇಶಿ ಭಕ್ತರಿಗೆ ಅವಕಾಶ ನೀಡಲಾಗುವುದು.

ಪಂಜಾಬ್‌ನ ’ರೋಜಾ ಷರೀಫ್’ ದರ್ಗಾದಿಂದ ೩ ಮತಾಂಧ ಯುವಕರ ಬಂಧನ

ಉತ್ತರ ಭಾರತದ ಮುಖ್ಯ ಧಾರ್ಮಿಕಸ್ಥಳವಾದ ಫತೇಹಗಡನ ’ರೋಜಾ ಷರೀಫ್’ ದರ್ಗಾದಿಂದ ಮೂವರು ಮತಾಂಧ ಯುವಕರನ್ನು ಬಂಧಿಸಲಾಗಿದೆ. ಅವರ ಹೆಸರುಗಳು ಸೊಹೇಲ್ ಖಾನ್, ಇಮ್ರಾನ್ ಖಾನ್ ಮತ್ತು ಕಮ್ರಾನ್ ಖಾನ್ ಇದ್ದು ಅವರೆಲ್ಲರೂ ಸಹೋದರರಿದ್ದು ಭಯೋತ್ಪಾದಕರೊಂದಿಗೆ ಅವರ ನಂಟಿದೆ ಎಂದು ಶಂಕಿಸಲಾಗಿದೆ.

‘ಗುಂಜನ ಸಕ್ಸೆನಾ – ದಿ ಕಾರಗಿಲ್ ಗರ್ಲ್’ ಚಲನಚಿತ್ರವನ್ನು ತಕ್ಷಣ ನಿಷೇಧಿಸಿ ! – ರಾಷ್ಟ್ರೀಯ ಮಹಿಳಾ ಆಯೋಗ

ಭಾರತೀಯ ವಾಯುಸೇನೆಯ ಬಗ್ಗೆ ಅಯೋಗ್ಯ ಚಿತ್ರಣವನ್ನು ಮೂಡಿಸುವ ವಿವಾದಿತ ‘ಗುಂಜನ ಸಕ್ಸೆನಾ – ದಿ ಕಾರಗಿಲ್ ಗರ್ಲ್’ ಈ ಹಿಂದಿ ಭಾಷೆಯ ಚಲನಚಿತ್ರದ ಬಗ್ಗೆ ಈಗ ರಾಷ್ಟ್ರೀಯ ಮಹಿಳಾ ಆಯೋಗವೂ ಆಕ್ಷೇಪವೆತ್ತಿದೆ. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಚಲನಚಿತ್ರವನ್ನು ‘ನೆಟ್‌ಫ್ಲಿಕ್ಸ್’ನಲ್ಲಿ ಇತ್ತೀಚೆಗಷ್ಟೆ ಪ್ರದರ್ಶಿಸಲಾಗಿದೆ.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಇವುಗಳ ಹೆಸರನ್ನು ಪ್ರಸ್ತಾಪಿಸಿದರೆ ಗೌರಿ ಲಂಕೇಶ ಮಾದರಿಯಲ್ಲಿ ಹತ್ಯೆ ಮಾಡುತ್ತೇವೆ !

ಸೋಶಿಯಲ್ ಡೆಮೊಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ ಹಾಗೂ ಕೆಲವು ಕಾಂಗ್ರೆಸ್ ನಾಯಕರು ಗಲಭೆಗೆ ಪ್ರಚೋದನೆ ನೀಡಿದ ಬಗ್ಗೆ ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರ್ತಾವಾಹಿನಿಯಲ್ಲಿ ಇದರ ವಾರ್ತೆಯನ್ನು ಪ್ರಸಾರ ಮಾಡಲಾಗಿತ್ತು. ಅದರ ನಂತರ ರಕ್ಷತ ಶೆಟ್ಟಿ ಇವರಿಗೆ ಬೆದರಿಕೆ ಬರತೊಡಗಿದವು. ಸಾಮಾಜಿಕ ಮಾಧ್ಯಮಗಳಿಂದಲೂ ರಕ್ಷತ ಶೆಟ್ಟಿ ಇವರಿಗೆ ಬೆದರಿಕೆ ನೀಡುವ ಬರವಣಿಗೆಗಳು ಪ್ರಸಾರವಾಗುತ್ತಿವೆ.

ಚೆನ್ನೈನ ವರಸಿದ್ಧಿ ವಿನಾಯಗರ್ ದೇವಸ್ಥಾನದಲ್ಲಿ ೧೦೮ ತೆಂಗಿನಕಾಯಿ ಒಡೆದಿದ್ದರಿಂದ ಕಮಲಾ ಹ್ಯಾರಿಸ್ ಇವರಿಗೆ ಇಲ್ಲಿಯವರೆಗೆ ಚುನಾವಣೆಯಲ್ಲಿ ಗೆಲುವು

ಅಮೇರಿಕಾದಲ್ಲಿ ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಾಯಡೆನ ಇವರು ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರತೀಯ ಸಂಜಾತೆ ಸಿನೆಟರ ಕಮಲಾ ಹ್ಯಾರಿಸ್‌ನನ್ನು ಆರಿಸಿದ್ದಾರೆ. ಕಮಲಾನ ಬಗ್ಗೆ ಆಕೆಯ ಚಿಕ್ಕಮ್ಮ ಸರಳಾ ಗೋಪಾಲನ್ ಇವರು ಕಮಲಾದ ಇಲ್ಲಿಯವರೆಗಿನ ಚುನಾವಣೆಯಲ್ಲಿನ ಗೆಲುವಿನ ರಹಸ್ಯವನ್ನು ಒಂದು ಸಂದರ್ಶನದಲ್ಲಿ ಹೇಳಿದರು.

ಜಗತ್ತಿನಾದ್ಯಂತ ತಂಬಾಕು ಸೇವನೆಯಿಂದಾಗಿಗುವ ರೋಗಿಗಳ ಪೈಕಿ ಶೇ. ೭೦ ರಷ್ಟು ರೋಗಿಗಳು ಭಾರತದಲ್ಲಿದ್ದಾರೆ

‘ಬಿಎಮ್‌ಸಿ ಮೆಡಿಸಿನ್’ ಈ ನಿಯತಕಾಲಿಕೆಯಲ್ಲಿ ಈ ಶೋಧನೆಯು ಪ್ರಕಟಿಸಿದೆ. ತಂಬಾಕುವಿನ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರುವ ಬಗ್ಗೆ ಸೂಚನೆಯನ್ನು ಈ ಶೋಧನೆಯಲ್ಲಿ ಮಾಡಲಾಗಿದ್ದು ‘ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದರೇ ತಂಬಾಕು ಸೇವಿಸುವ ಪ್ರಮಾಣ ಕಡಿಮೆ ಆಗುವುದು ಹಾಗೂ ಕೊರೋನಾದ ಸೋಂಕು ಹರಡುವುದನ್ನು ತಡೆಗಟ್ಟಬಹುದು’, ಎಂಬುದು ತಿಳಿದುಬಂದಿದೆ.

ಚೀನಾದಲ್ಲಿ ಕೊರೋನಾದಿಂದ ಗುಣಮುಖನಾಗಿದ್ದ ರೋಗಿಗಳಿಗೆ ಪುನಃ ಕೊರೋನಾದ ಸೋಂಕು

ಚೀನಾದ ಹುಬೈ ಪ್ರದೇಶದಲ್ಲಿ ವಾಸವಾಗಿರುವ ೬೮ ವರ್ಷದ ಮಹಿಳೆಯು ೬ ತಿಂಗಳ ಹಿಂದೆಯೇ ಕೊರೋನಾದಿಂದ ಮುಕ್ತವಾಗಿದ್ದರು. ಆಕೆಗೆ ಪುನಃ ಕೊರೋನಾದ ಸೋಂಕು ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಇನ್ನೋರ್ವ ವ್ಯಕ್ತಿಯು ವಿದೇಶದಿಂದ ಮರಳಿದ ನಂತರ ಕೊರೋನಾದ ಸೋಂಕು ತಗಲಿತ್ತು. ನಂತರ ಆತನೂ ಕೊರೋನಾದಿಂದ ಮುಕ್ತರಾಗಿದ್ದರು.

ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ನಿಷೇಧಿಸಲು ಪ್ರಯತ್ನಿಸುವೆವು! – ಉಪಮುಖ್ಯಮಂತ್ರಿ ಅಶ್ವತ ನಾರಾಯಣ

ಇಲ್ಲಿಯ ಗಲಭೆಯ ಪ್ರಕರಣದಲ್ಲಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ೪ ಮುಖಂಡರನ್ನು ಬಂಧಿಸಲಾಗಿದೆ. ಈ ಸಂಘಟನೆಯು ಇತರ ಅಪರಾಧಿ ಕೃತ್ಯಗಳಲ್ಲಿಯೂ ತೊಡಗಿರುವ ಸಾಕ್ಷಿಗಳು ಪತ್ತೆಯಾಗಿವೆ. ಇಂತಹ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಸರಕಾರದಿಂದ ಕಠಿಣ ನಿರ್ಣಯವನ್ನು ಕೈಗೊಳ್ಳಲಾಗುವುದು.

ರಾಷ್ಟ್ರಧ್ವಜದ ‘ಮಾಸ್ಕ್’ ಮಾರಾಟ ಮಾಡುವ ಅಮೇಝಾನ, ಫ್ಲಿಪ್‌ಕಾರ್ಟ್ ಇತ್ಯಾದಿ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ! – ಸುರಾಜ್ಯ ಅಭಿಯಾನ

ರಾಷ್ಟ್ರಧ್ವಜ ಇದು ಶೃಂಗಾರದ ಮಾಧ್ಯಮವಲ್ಲ. ಈ ರೀತಿಯ ಮಾಸ್ಕ್ ಉಪಯೋಗಿಸಿದರೆ ಸೀನುವುದು, ಅದಕ್ಕೆ ಉಗುಳು ತಾಗುವುದು, ಅದು ಅಸ್ವಚ್ಛವಾಗುವುದು, ಅದೇರೀತಿ ಉಪಯೋಗಿಸಿದ ನಂತರ ಕಸದಲ್ಲಿ ಬಿಸಾಡುವುದು ಇತ್ಯಾದಿಗಳಿಂದಾಗಿ ರಾಷ್ಟ್ರಧ್ವಜದ ಅವಮಾನವಾಗುತ್ತದೆ ಹಾಗೂ ಹೀಗೆ ಮಾಡುವುದೆಂದರೆ ಇದು ‘ರಾಷ್ಟ್ರೀಯ ಚಿಹ್ನೆಯ ದುರುಪಯೋಗ ತಡೆ ಕಾನೂನು ೧೯೫೦’, ಕಲಮ್ ೨ ಹಾಗೂ ೫ ಕ್ಕನುಸಾರ; ಅದೇರೀತಿ ‘ರಾಷ್ಟ್ರದ ಘನತೆಯ ಅವಮಾನ ಪ್ರತಿಬಂಧಕ ಅಧಿನಿಯಮ ೧೯೭೧’ರ ಕಲಂ ೨ ಕ್ಕನುಸಾರ ಹಾಗೂ ‘ಬೋಧಚಿಹ್ನೆ ಹಾಗೂ ಹೆಸರು (ದುರುಪಯೋಗ ನಿರ್ಬಂಧ) ಅಧಿನಿಯಮ ೧೯೫೦’ ಈ ಮೂರೂ ಕಾನೂನುಗಳಿಗನುಸಾರ ದಂಡನೀಯ ಅಪರಾಧವಾಗಿದೆ.

ಕಾಂಗ್ರೇಸ್ ಶಾಸಕನ ಸೋದರಳಿಯನ ತಲೆ ಕಡಿಯುವವರಿಗೆ ೫೧ ಲಕ್ಷ ರೂಪಾಯಿಯ ಬಹುಮಾನ ನೀಡುತ್ತೇನೆಂದ ಮತಾಂಧ

ಹಮ್ಮದ ಪೈಗಂಬರರ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಪ್ರಕರಣದಲ್ಲಿ ಬೆಂಗಳೂರಿನ ಕಾಂಗ್ರೆಸ್‌ನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯ ಸೋದರಳಿಯನ ತಲೆ ಕಡಿದವನಿಗೆ ೫೧ ಲಕ್ಷ ರೂಪಾಯಿ ನೀಡುತ್ತೇನೆ ಎಂದು ಘೋಷಿಸಿದ ಮೀರತ್‌ದಲ್ಲಿಯ ಶಾಹಜೇಬ ರಿಝ್ವಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.