ರಾಜಸ್ಥಾನದಲ್ಲಿ ಮೃತ್ಯುವಿನ ನಂತರ ಹದಿಮೂರನೇಯ ದಿನದಂದು ಊಟದ ಆಯೋಜನೆ ಮಾಡಿದರೆ ಶಿಕ್ಷಿಸಲಾಗುವುದು ಪೋಲೀಸರಿಂದ ಫತ್ವಾ

ರಾಜಸ್ಥಾನದಲ್ಲಿ ಮೃತ ವ್ಯಕ್ತಿಯ ಹದಿಮೂರನೇಯ ದಿನದ ಭೋಜನವನ್ನು ಆಯೋಜಿಸಿದರೆ ಸಂಬಂಧಪಟ್ಟವರಿಗೆ ೧ ವರ್ಷದ ಸೆರೆಮನೆವಾಸ ಹಾಗೂ ೧ ಸಾವಿರ ರೂಪಾಯಿಗಳ ದಂಡ ಎಂಬ ಶಿಕ್ಷೆ ವಿಧಿಸಲಾಗುವುದು. ಪೊಲೀಸರು ಎಲ್ಲಾ ಪೊಲೀಸ ಠಾಣೆಗಳಿಗೆ ಈ ಆದೇಶವನ್ನು ಹೊರಡಿಸಿದ್ದಾರೆ.

ಅಮೇರಿಕಾದಲ್ಲಿ ಆಕ್ರೋಶಿತ ಹಿಂದೂಗಳಿಂದ ‘ಬ್ರಹ್ಮಾ’ ಬಿಯರ್ ಅನ್ನು ನಿರ್ಮಿಸುವ ಕಂಪನಿಗೆ ಬಿಯರ್ ಹೆಸರನ್ನು ಬದಲಾಯಿಸುವಂತೆ ಒತ್ತಾಯ

ಲೆವೆನ್ಹನ್(ಬೆಲ್ಜಿಯಮ್) ಇಲ್ಲಿ ಪ್ರಧಾನ ಕಛೇರಿ ಇರುವ ಹಾಗೂ ಜಗತ್ತಿನ ಎಲ್ಲಕ್ಕಿಂತ ದೊಡ್ಡದಾದ ಬಿಯರ್ ಉತ್ಪಾದಿಸುವ ‘ಅನ್ಹುಏಸರ-ಇನಬೇವ’ ಕಂಪನಿಯು ತನ್ನ ಬಿಯರ್ ಉತ್ಪಾದನೆಗೆ ‘ಬ್ರಹ್ಮಾ’ ಎಂದು ಹಿಂದೂ ದೇವತೆಯ ಹೆಸರನ್ನು ಇಡಲಾಗಿದೆ. ಆದ್ದರಿಂದ ಆಕ್ರೋಶಗೊಂಡ ಜನರು ಅಮೇರಿಕಾದ ಸಂಸ್ಥೆಗೆ ‘ಬ್ರಹ್ಮಾ’ ಎಂದು ಬರೆದಿರುವ ಬಿಯರ್‌ನ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.

ಘೋರ ಆಪತ್ಕಾಲದಲ್ಲಿ ಹೊಸ ಹೊಸ ಆಧ್ಯಾತ್ಮಿಕ ಉಪಾಯ ಪದ್ಧತಿಗಳನ್ನು ಶೋಧಿಸಿ ಮನುಕುಲದ ಕಲ್ಯಾಣಕ್ಕಾಗಿ ಕಾರ್ಯನಿರತರಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಸಾಧನೆಯನ್ನು ಆರಂಭಿಸಿದ ನಂತರ ನನಗೆ ‘ಕಾಯಿಲೆಗಳ ಕಾರಣಗಳು ಕೇವಲ ಶಾರೀರಿಕ ಹಾಗೂ ಮಾನಸಿಕವಾಗಿರದೆ ಆಧ್ಯಾತ್ಮಿಕ ಕೂಡ ಆಗಿರುತ್ತವೆ, ಎಂಬುದು ಜಿಜ್ಞಾಸೆಯಿಂದಾಗಿ ತಿಳಿಯಿತು. ಆಗ ನನಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರ ಮಹತ್ವ ತಿಳಿಯಿತು; ಏಕೆಂದರೆ ಅವುಗಳನ್ನು ನಿರ್ಮೂಲನೆ ಮಾಡುವುದರಿಂದ ವ್ಯಕ್ತಿ ಸಾತ್ತ್ವಿಕನಾಗುತ್ತಾನೆ ಮತ್ತು ಸಾತ್ತ್ವಿಕನಾದ ನಂತರ ಅವನ ಹೆಚ್ಚಿನ ಮಾನಸಿಕ ತೊಂದರೆಗಳು ದೂರವಾಗುತ್ತವೆ.

ಹಿಂದೂಗಳೇ, ನೀವು ನಿಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಸಂಪೂರ್ಣ ಜಗತ್ತು ನಿಮ್ಮನ್ನು ಗೌರವಿಸುತ್ತದೆ, ನೀವು ಇದನ್ನು ಅರಿತುಕೊಳ್ಳಿರಿ ! – ಫ್ರಾನ್ಸುಆ ಗೋತಿಎ

‘ಗಾಡ್ ಫಿಯರಿಂಗ್’ ಈ ಶಬ್ದವನ್ನು ಉಪಯೋಗಿಸುವುದನ್ನು ದಯವಿಟ್ಟು ನಿಲ್ಲಿಸಿರಿ. ಹಿಂದೂಗಳಿಗೆ ದೇವರ ಬಗ್ಗೆ ಎಂದಿಗೂ ಹೆದರಿಕೆ ಆಗುವುದಿಲ್ಲ. ನಮಗಾಗಿ ಈಶ್ವರನು ಸರ್ವವ್ಯಾಪಿ ಆಗಿದ್ದಾನೆ ಹಾಗೂ ನಾವು ಈಶ್ವರನು ಅಂಶವಾಗಿದ್ದೇವೆ. ನಮಗೆ ದೇವರ ಬಗ್ಗೆ ಹೆದರಿಕೆಯಾಗಲು ಅವನು ನಮಗಾಗಿ ಬೇರೆಯಾಗಿಲ್ಲ. ನಾವು ಒಂದೇ ಆಗಿದ್ದೇವೆ

ಕೊರೋನಾದ ಕಾಲದಲ್ಲಿ ಶ್ರೀಮದ್ಭಗವದ್ಗೀತೆಯಿಂದ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು !- ಅಮೇರಿಕಾದ ಭಾರತ ಮೂಲದ ಸಂಸದೆ ತುಲಸೀ ಗಬಾರ್ಡ್

ಕೊರೋನಾದಂತಹ ಸಂಕಟದ ಸಮಯದಲ್ಲಿ ನಾಳೆ ಏನಾಗುವುದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಕೇವಲ ಶ್ರೀಮದ್ಭಗವದ್ಗೀತೆಯಿಂದ ಖಂಡಿತವಾಗಿಯೂ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು. ನಮಗೆ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಕಲಿಸಿಕೊಟ್ಟಿರುವ ಭಕ್ತಿಯೋಗ ಹಾಗೂ ಕರ್ಮಯೋಗದ ಪಾಲನೆಯಿಂದಲೇ ಸಾಮರ್ಥ್ಯ ಹಾಗೂ ಶಾಂತಿ ಸಿಗಲು ಸಾಧ್ಯವಾಯಿತು,

‘ತಿಬೇಟ್ ಚೀನಾದ ಆಂತರಿಕ ಪ್ರಶ್ನೆಯಾಗಿರುವುದರಿಂದ ಭಾರತವು ಅದರತ್ತ ಗಮನ ಹರಿಸುವುದು ಬೇಡ(ವಂತೆ) ! – ಭಾರತಕ್ಕೆ ಚೀನಾದ ಬೆದರಿಕೆ

ಭಾರತದಲ್ಲಿ ಕೆಲವರು, ಅದೇ ರೀತಿ ಪ್ರಸಾರ ಮಾಧ್ಯಮಗಳು, ಭಾರತವು ಚೀನಾದೊಂದಿಗೆ ಉದ್ವಿಗ್ನತೆಯ ಸಮಯದಲ್ಲಿ ತಿಬೇಟಿನ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಇದರಿಂದ ಲಾಭವಾಗುವುದು, ಎಂದು ಕೆಲವರು ವಿಚಾರ ಮಾಡುತ್ತಿದ್ದಾರೆ ಆದರೆ ಈ ವಿಚಾರ ಒಂದು ಭ್ರಮೆಯಾಗಿದೆ. ತಿಬೇಟ್ ಇದು ಚೀನಾದ ಒಂದು ಆಂತರಿಕ ಪ್ರಶ್ನೆಯಾಗಿದೆ ಹಾಗೂ ಅದರಲ್ಲಿ ಭಾರತವು ಗಮನ ಹರಿಸುವುದು ಬೇಡ,

ಲಾತೆಹರ್ (ಝಾರಖಂಡ್)ನಲ್ಲಿ ಭಾಜಪದ ಮುಖಂಡನ ಕೊಲೆಯ ವಿರುದ್ಧ ನೂರಾರು ಜನರ ಆಂದೋಲನ

ಜುಲೈ ೫ ರಂದು ಭಾಜಪದ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಯವರ್ಧನ ಸಿಂಹ (ವಯಸ್ಸು ೫೦ ವರ್ಷ)ಯವರನ್ನು ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ಜುಲೈ ೭ ರಂದು ಬರವಾಡೀಹ ಬಾಝಾರಿನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದರು.

ಗೂಂಡಾ ವಿಕಾಸ ದುಬೆಗೆ ೨೦೦ ಕ್ಕೂ ಹೆಚ್ಚು ಪೊಲೀಸರಿಂದ ಸಹಾಯ ಸಿಗುತ್ತಿರುವುದರ ಸಂದೇಹ

ಕೆಲವು ದಿನಗಳ ಹಿಂದೆ ಕುಖ್ಯಾತ ಗೂಂಡಾ ವಿಕಾಸ ದುಬೆ ಹಾಗೂ ಆತನ ಸಹಚರರು ಮಾಡಿದ ದಾಳಿಯಿಂದಾಗಿ ೮ ಪೊಲೀಸರ ಹತ್ಯೆಯಾಗಿತ್ತು. ತದನಂತರ ಪರಾರಿಯಾದ ವಿಕಾಸ ದುಬೆಯನ್ನು ಹಿಡಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗಲಿಲ್ಲ. ಈ ಪ್ರಕರಣದಲ್ಲಿ ಚೌಬೆಪುರ ಪೊಲೀಸ ಠಾಣೆಯ ಅಧಿಕಾರಿ ವಿನಯ ತಿವಾರಿಯು ದುಬೆಗೆ ಸಹಾಯ ಮಾಡಿದ್ದಾರೆಂಬ ಪ್ರಕರಣದಲ್ಲಿ ಅಮಾನತ್ತು ಮಾಡಲಾಗಿದ್ದು ಆತನ ವಿರುದ್ಧ ಅಪರಾಧವನ್ನು ನೊಂದಾಯಿಸಲಾಗಿದೆ.

ಚೀನಾದ ವಿರುದ್ಧ ನಮ್ಮ ಸೈನ್ಯವು ಭಾರತಕ್ಕೆ ಸಹಾಯ ಮಾಡಲಿದೆ ! – ಅಮೇರಿಕಾ

ನಮ್ಮ ಸೈನಿಕರು ಚೀನಾದ ವಿರುದ್ಧ ದೃಢವಾಗಿ ನಿಂತಿದ್ದು ಭವಿಷ್ಯದಲ್ಲಿಯೂ ಇರಲಿದೆ. ಅದು ಭಾರತ ಹಾಗೂ ಚೀನಾದ ಘರ್ಷಣೆಯಿರಲಿ ಅಥವಾ ಇತರ ದೇಶ ಇರಲಿ, ಎಂದು ಹೇಳುವ ಮೂಲಕ ಅಮೇರಿಕಾದ ವೈಟ್ ಹೌಸ್‌ನ ‘ಚೀಫ್ ಆಫ್ ಸ್ಟಾಫ್’ ಮಾರ್ಕ್ ಮೆಡೊಜ ಇವರು ಚೀನಾದೊಂದಿಗಿನ ಘರ್ಷಣೆಯಲ್ಲಿ ಭಾರತಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಕುವೈತ್‌ನಲ್ಲಿನ ೮ ಲಕ್ಷ ಭಾರತೀಯರಿಗೆ ದೇಶ ಬಿಡಬೇಕಾಗಿ ಬರುವ ಸಾಧ್ಯತೆ

ಕುವೈತ್‌ನ ಸಂಸತ್ತಿನಲ್ಲಿ ವಿದೇಶಿ ಕೆಲಸಗಾರರಿಗೆ ಸಂಬಂಧಪಟ್ಟ ಅಪ್ರವಾಸಿ ಕೋಟಾ ವಿಧೇಯಕ ಮಸೂದೆಗೆ ಸಮ್ಮತಿ ನೀಡಲಾಗಿದೆ. ಒಂದು ವೇಳೆ ಈ ಸಮೂದೆ ಏನಾದರೂ ಕಾಯಿದೆಯಾಗಿ ರೂಪಾಂತರಗೊಂಡರೆ ಕುವೈತ್‌ನಲ್ಲಿರುವ ೮ ಲಕ್ಷ ಭಾರತೀಯ ಕೆಲಸಗಾರರು ಕುವೈತ್ ಅನ್ನು ಬಿಡಬೇಕಾಗಿ ಬರುತ್ತದೆ.