ಚೀನಾದೊಂದಿಗಿನ ಚರ್ಚೆ ವಿಫಲಗೊಂಡರೆ ಸೇನಾ ಕಾರ್ಯಾಚರಣೆಯ ಬಗ್ಗೆ ವಿಚಾರ ಮಾಡುವೆವು ! – ಸಿ.ಡಿ.ಎಸ್. ಬಿಪಿನ್ ರಾವತ್‌ರಿಂದ ಚೀನಾಗೆ ಎಚ್ಚರಿಕೆ

ಲಡಾಖನಲ್ಲಿ ಚೀನಾದ ಸೈನಿಕರಿಗೆ ಹಿಂದೆ ಸರಿಯಲು ವಿವಿಧ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ; ಆದರೆ ಸೇನೆ ಹಾಗೂ ರಾಜತಾಂತ್ರಿಕ ಚರ್ಚೆ ವಿಫಲವಾದರೆ, ಸೇನಾ ಕಾರ್ಯಾಚರಣೆಯ ವಿಚಾರ ಮಾಡಲಾಗುವುದು, ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿ.ಡಿ.ಎಮ್.) ಜನರಲ್ ಬಿಪಿನ ರಾವತ್ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ಒಂದು ವಾರ್ತಾವಾಹಿಯಲ್ಲಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ್’ ರಾಜ್ಯದ ಬೇಡಿಕೆ

೧೯೨೧ ನೇ ಇಸವಿಯಲ್ಲಿ ನಡೆದ ತಥಾಕಥಿತ ‘ಮೊಪಲಾ ಕಾಂಡಾ’ದ (ಯಾವುದನ್ನು ತಥಾಕಥಿತ ಇತಿಹಾಸಕಾರರ ಮತ್ತು ರಾಜಕಾರಣಿಗಳ ಒಂದು ಗುಂಪು ‘ಖಿಲಾಪತ ಚಳುವಳಿ’ ಎಂದು ಹೆಸರು ನೀಡಿದೆ) ೯೯ ನೇ ವರ್ಷದ ನಿಮಿತ್ತ ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ’ ರಾಜ್ಯದ ಬೇಡಿಕೆಯು ತೀವ್ರವಾಗತೊಡಗಿದೆ.

ದಾವಣಗೆರೆಯಲ್ಲಿ ದೇಶವಿರೋಧಿ ಪೋಸ್ಟ್ ಮಾಡಿದ ಸನಾವುಲ್ಲಾ ಈ ಪೊಲೀಸ್ ಪೇದೆಯ ವಿಚಾರಣೆ ಮಾಡುವಂತೆ ಆದೇಶ !

ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ದೇಶವಿರೋಧಿ ಪೋಸ್ಟ್ ಪ್ರಸಾರ ಮಾಡಿದ ಪ್ರಕರಣದಲ್ಲಿ ಇಲ್ಲಿಯ ಬಸವನಗರ ಪೊಲೀಸ್ ಠಾಣೆಯ ಪೇದೆ ಸನಾವುಲ್ಲಾನ ವಿಚಾರಣೆಯನ್ನು ಮಾಡುವಂತೆ ಆದೇಶ ನೀಡಲಾಗಿದೆ. ಸನಾವುಲ್ಲಾನನ್ನು ಇದೇ ರೀತಿಯಲ್ಲಿ ೨೦೧೪ ರಲ್ಲಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಅಮಾನತ್ತು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಕೈಲಾಸ ಮಾನಸರೋವರ ಪ್ರದೇಶದಲ್ಲಿ ಚೀನಾದಿಂದ ಕ್ಷಿಪಣಿ ನೆಲೆಯ ನಿರ್ಮಾಣ

ಟಿಬೆಟ್‌ನಲ್ಲಿಯ ಮಾನಸರೋವರ ಪ್ರದೇಶದಲ್ಲಿ ಚೀನಾದಿಂದ ಭೂಮಿಯಿಂದ ಗಾಳಿಯಲ್ಲಿ ಹೊಡೆದುರುಳಿಸುವ ಕ್ಷಿಪಣಿ ನೆಲೆಯನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದೆ. ಉಪಗ್ರಹದ ಮೂಲಕ ತೆಗೆಯಲಾಗಿದ್ದ ಛಾಯಾಚಿತ್ರದ ವಿಶ್ಲೇಷಣೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.

‘ಫ್ಲಿಪಕಾರ್ಟ್’ನ ಜಾಹಿರಾತಿನ ಮೂಲಕ ಆಗುತ್ತಿದ್ದ ಶ್ರೀ ಗಣೇಶನ ಅವಮಾನವನ್ನು ಹಿಂದೂಗಳು ಸಂಘಟಿತರಾಗಿ ಮಾಡಿದ ವಿರೋಧದಿಂದಾಗಿ ತಡೆಗಟ್ಟಲು ಜಯ ಸಿಕ್ಕಿತು

ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಫಿಪ್‌ಕಾರ್ಟ್’ ಈ ಸಂಸ್ಥೆಯು ಶ್ರೀ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಒಂದು ಬ್ಯಾಂಕಿನ ವಿಷಯದಲ್ಲಿ ರಿಯಾಯತಿಯನ್ನು ನೀಡುವ ಜಾಹೀರಾತನ್ನು ಪ್ರಸಾರ ಮಾಡಿದ್ದರು. ಈ ಜಾಹೀರಾತಿನಲ್ಲಿ ಭಗವಾನ ಶ್ರೀ ಗಣೇಶನ ಸೊಂಡಲಿನಲ್ಲಿ ಸಂಚಾರವಾಣಿ ಹಿಡಿದಿರುವಂತೆ ತೋರಿಸಲಾಗಿತ್ತು.

ಅಮೆರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೊ ಬಾಯಡೆನ್ ಇವರಿಂದ ಜಗತ್ತಿನಾದ್ಯಂತ ಭಾರತೀಯರಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯ!

‘ಅಮೆರಿಕಾ, ಭಾರತ ಮತ್ತು ಜಗತ್ತಿನಾದ್ಯಂತ ಹಿಂದೂಗಳ ಉತ್ಸವ ಗಣೇಶ ಚತುರ್ಥಿಯನ್ನು ಆಚರಿಸುವ ಪ್ರತಿಯೊಬ್ಬರ ಸಕಲ ಸಮಸ್ಯೆಗಳು ನಿವಾರಣೆಯಾಗಬೇಕು ಮತ್ತು ಹೊಸ ಆರಂಭದತ್ತ ಮಾರ್ಗ ಕ್ರಮಿಸುವಂತಾಗಲಿ, ಎಂಬ ಶಬ್ದಗಳಲ್ಲಿ ಬಾಯಡೇನ ಇವರು ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳನ್ನು ನೀಡಿದ್ದಾರೆ.

‘ವಂದೇ ಭಾರತ’ ರೈಲಿನ ಗುತ್ತಿಗೆ ರದ್ದು, ಚೀನಾದ ಕಂಪನಿಗೆ ಆಘಾತ

ಕೇಂದ್ರ ಸರಕಾರದಿಂದ ೪೪ ಸೆಮಿ ಹೈ ಸ್ಪೀಡ್ ‘ವಂದೇ ಭಾರತ’ ಈ ರೈಲಿನ ಗುತ್ತಿಗೆಯನ್ನು ರದ್ದುಪಡಿಸಿದೆ ಎಂದು ರೈಲ್ವೆ ಸಚಿವಾಲಯದಿಂದ ಮಾಹಿತಿ ಸಿಕ್ಕಿದೆ, ರೇಲ್ವೆಯಿಂದ ಮುಂದಿನ ೧ ವಾರಗಳಲ್ಲಿ ಹೊಸದಾಗಿ ಗುತ್ತಿಗೆಯನ್ನು ನೀಡಲಿದ್ದು ಅದರಲ್ಲಿ ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ ಅಂತರ್ಗತದಲ್ಲಿ ಆದ್ಯತೆಯನ್ನು ನೀಡಲಾಗುವುದು.

ದೆಹಲಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕನ ಬಂಧನ; ಸ್ಫೋಟಕಗಳು ಜಪ್ತಿ

ಪೊಲೀಸರ ವಿಶೇಷ ಪಡೆಯು ಇಲ್ಲಿಯ ಧೌಲಾ ಕುಂವಾ ರಿಂಗ್ ರೋಡ್ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್‌ನ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನನ್ನು ಬಂಧಿಸಿದೆ. ಅಬ್ದುಲ್ ಯುಸುಫ್‌ನನ್ನು ಬಂಧಿಸಿದ್ದು ಆತನಿಂದ ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು.

‘ಸಾವರಕರ ಇವರಿಗೆ ೧೯೨೪ ರಲ್ಲಿ ಬ್ರಿಟೀಶರಿಂದ ಪ್ರತಿ ತಿಂಗಳು ೬೦ ರೂಪಾಯಿ ಏಕೆ ಸಿಗುತ್ತಿತ್ತು ?’

‘೧೯೨೪ ರಲ್ಲಿ ಸಾವರಕರ ಇವರಿಗೆ ಆಂಗ್ಲರಿಂದ ಪ್ರತಿ ತಿಂಗಳು ೬೦ ರೂಪಾಯಿ ಪೆನ್ಶನ್ ಏಕೆ ಸಿಗುತ್ತಿತ್ತು ? ಎಂಬುದರ ಬಗ್ಗೆ ಯಾರಾದರು ಹೇಳಬಹುದೇ ?, ಎಂದು ಕಾಂಗ್ರೆಸ್ ನಾಯಕಿ ಅರ್ಚನಾ ದಾಲಮಿಯಾ ಇವರು ‘ಟ್ವೀಟ್’ ಮಾಡಿ ಪ್ರಶ್ನಿಸಿದ್ದಾರೆ.

ಗಲಭೆಪೀಡಿತ ಪ್ರದೇಶಗಳಲ್ಲಿ ಸಂಚಾರ ನಿಷೇಧ ತೆಗೆಯಿರಿ ಒಂದು ವೇಳೆ ಅಲ್ಲಿ ಮತ್ತೇನಾದರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ! – ಮೌಲ್ವಿಗಳಿಂದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ‘ಮನವಿ’

ಇಲ್ಲಿಯ ಗಲಭೆಯ ಪ್ರಕರಣದಲ್ಲಿ ಶಾಂತಿನಗರದ ಕಾಂಗ್ರೆಸ್‌ನ ಶಾಸಕ ಹ್ಯಾರಿಸ್‌ನೊಂದಿಗೆ ಮೌಲ್ವಿಯು ಪೊಲೀಸ್ ಆಯುಕ್ತ ಕಮಲ ಪಂತ ಇವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಆ ಸಮಯದಲ್ಲಿ ಮೌಲ್ವಿಗಳು ಆರೋಪಿಯ ಸಂದರ್ಭದಲ್ಲಿ ಆಯುಕ್ತರಲ್ಲಿ ‘ಗಲಭೆ ಪೀಡಿತ ಪ್ರದೇಶಗಳಲ್ಲಿ ಸಂಚಾರ ನಿಷೇಧ ತೆಗೆಯಿರಿ. ಅಲ್ಲಿ ಮತ್ತೇನಾದರೂ ಅನಾಹುತವಾದರೆ, ಅದಕ್ಕೆ ನಾವು ಜವಾಬ್ದಾರರಲ್ಲ’, ಎಂದು ಹೇಳಿದ್ದಾರೆ.