ಬಾಲಾಕೋಟ್ ಏರ್ ಸ್ಟ್ರೈಕ್‌ನಲ್ಲಿ ೩೦೦ ಜಿಹಾದಿ ಭಯೋತ್ಪಾದಕರು ಸಾವನ್ನಪ್ಪಿದ್ದು ನಿಜ !

ಭಾರತವು ಫೆಬ್ರವರಿ ೨೬, ೨೦೧೯ ರಂದು ಬೆಳಗ್ಗೆ ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜಿಹಾದಿ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದಿನ ತರಬೇತಿ ನೆಲೆಯ ಮೇಲೆ ನಡೆಸಿದ ವಾಯುದಾಳಿಯಲ್ಲಿ (ಏರ್ ಸ್ಟ್ರೈಕ್‌ನಲ್ಲಿ) ೩೦೦ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಜಿ ರಾಜಕೀಯ ಅಧಿಕಾರಿ ಆಗಾ ಹಿಲಾಲಿ ಇವರು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾಮದಲ್ಲಿ ಅಲ್ಪಸಂಖ್ಯಾರ ಮೇಲಿನ ಅತ್ಯಾಚಾರದ ಬಗ್ಗೆ ಮಾಹಿತಿಯನ್ನು ನೀಡುವ ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತ ರಾಹತ ಆಸ್ಟಿನ್ ಇವರ ಮೇಲೆ ಮಾರಣಾಂತಿಕ ಹಲ್ಲೆ

ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿರುವ ವಕೀಲರಾದ ರಹತ್ ಆಸ್ಟಿನ್ ಅವರ ಮೇಲೆ ಮತಾಂಧರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

೨೦೨೦ ರಲ್ಲಿ ಬಾಂಗ್ಲಾದೇಶದಲ್ಲಿ ೧೪೯ ಹಿಂದೂಗಳ ಹತ್ಯೆ ಹಾಗೂ ೨೬೨೩ ಹಿಂದೂಗಳು ಮತಾಂತರ

೨೦೨೦ ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಒಟ್ಟು ೧೪೯ ಹಿಂದೂಗಳ ಹತ್ಯೆ ಮಾಡಲಾಗಿದ್ದರೆ, ೭೦೩೬ ಹಿಂದೂಗಳು ಗಾಯಗೊಂಡಿದ್ದಾರೆ. ಅಲ್ಲದೆ ೨ ಸಾವಿರ ೬೨೩ ಹಿಂದೂಗಳನ್ನು ಮತಾಂತರಗೊಳಿಸಿ ಅವರನ್ನು ಮುಸಲ್ಮಾನರನ್ನಾಗಿಸಲಾಯಿತು. ‘ಜಟಿಯಾ ಹಿಂದೂ ಮಹಾಜೋತ’ ಎಂಬ ಸಂಘಟನೆಯು ಪತ್ರಿಕಾಗೋಷ್ಠಿಯಲ್ಲಿ ಈ ಅಂಕಿ ಅಂಶಗಳನ್ನು ಬೆಳಕಿಗೆ ತಂದಿದೆ.

ನೂರಾರು ಮತಾಂಧರಿಂದ ಪಾಕಿಸ್ತಾನದಲ್ಲಿ ‘ಅಲ್ಲಾಹು ಅಕ್ಬರ್’ ಕೂಗುತ್ತಾ ಹಿಂದೂ ದೇವಸ್ಥಾನ ನೆಲಸಮಗೊಳಿಸಿ ಬೆಂಕಿಗಾಹುತಿ !

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ನೂರಾರು ಮತಾಂಧರು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಈ ಹಿಂದೂವಿರೋಧಿ ಕೃತ್ಯವನ್ನು ಮೌಲ್ವಿಯ ನೇತೃತ್ವದಲ್ಲಿ ನಡೆಸಲಾಯಿತು. ಇದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿದೆ.

ಹಂದಿಯ ಅಂಶವಿರುವ ಕೊರೋನಾದ ಲಸಿಕೆಗೆ ‘ಸಂಯುಕ್ತ ಅರಬ ಅಮಿರಾತ ಫತವಾ ಪರಿಷತ್ತ್’ನ ಒಪ್ಪಿಗೆ

ಪರಿಷತ್ತಿನ ಅಧ್ಯಕ್ಷ ಶೇಖ ಅಬ್ದುಲ್ಲಾ ಬಿನ್ ಬಯ್ಯಾ ಅವರು, ಯಾವುದೇ ಪರ್ಯಾಯ ಲಭ್ಯವಿಲ್ಲದಿರುವಾಗ ಹಾಗೂ ಈ ಸಮಯದಲ್ಲಿ ಮನುಷ್ಯನ ಶರೀರದ ರಕ್ಷಣೆ ಮಾಡುವುದು ಹೆಚ್ಚು ಮಹತ್ವದ್ದಾಗಿರುವಾಗ, ಕೊರೋನಾದ ವಿಷಯದಲ್ಲಿ ‘ಪೋರ್ಕ್ ಜಿಲೆಟಿನ್’ ನನ್ನು ‘ಆಹಾರ’ ಎಂದು ತಿಳಿಯದೇ, ಅದು ಔಷಧಿ ಎಂದು ನೋಡಲಾಗುತ್ತದೆ ಎಂದು ಹೇಳಿದರು.

ಶ್ರೀಲಂಕಾದ ವಕಿಲೆಯಿಂದ ಫೇಸ್‌ಬುಕ್ ಮೇಲೆ ಶ್ರೀ ಮಹಾಕಾಳಿ ದೇವಿಯ ಅಶ್ಲೀಲ ಚಿತ್ರದ ಪ್ರಸಾರ

ಇಲ್ಲಿಯ ವಕೀಲೆಯಾದ ಜೀವನೀ ಕರಿಯಾವಸಮ ಇವರು ಶ್ರೀ ಮಹಾಕಾಳಿ ದೇವಿಯ ಅಶ್ಲೀಲ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೃತ್ಯವನ್ನು ಸ್ಥಳೀಯ ಹಿಂದೂ ಸಂಘಟನೆಗಳು ವಿರೋಧಿಸಿದ್ದಾರೆ. ಈ ಸಂಘಟನೆಗಳು ಜೀವನೀ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಅಲ್ಲದೆ, ಕೆಲವು ಸಂಘಟನೆಗಳು ಅವಳನ್ನು ಸೈಬರ್ ಕಾನೂನಿನಡಿಯಲ್ಲಿ ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿವೆ.

ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಹಿಂದೂ ಧರ್ಮ ಮತ್ತು ಜೈನ ಪಂಥದ ಅಧ್ಯಯನಕ್ಕಾಗಿ ಪೀಠದ ಸ್ಥಾಪನೆ !

ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯು ಹಿಂದೂ ಧರ್ಮ ಮತ್ತು ಜೈನ ಪಂಥದ ಅಧ್ಯಯನ ಮಾಡಲು ಪೀಠವನ್ನು ಸ್ಥಾಪಿಸಿದೆ. ಈ ಪೀಠದ ಸ್ಥಾಪನೆಗೆ ೨೪ ಭಾರತೀಯರು ಕೊಡುಗೆ ನೀಡಿದ್ದಾರೆ. ಹಿಂದೂ ಧರ್ಮ ಮತ್ತು ಜೈನ ಪಂಥಗಳ ಬಗ್ಗೆ ಜ್ಞಾನ ಹೊಂದಿರುವ ಓರ್ವ ಪ್ರಾಧ್ಯಾಪಕರನ್ನು ಈ ಪೀಠಕ್ಕೆ ನೇಮಿಸಲಾಗುವುದು.

ಭಾರತವು ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದಲ್ಲಿ ಸಹಾಯ ಮಾಡಬೇಕು ! – ಬಲೂಚ್ ಸಂಘಟನೆಯಿಂದ ಮನವಿ

ಬಲೂಚ್ ನ್ಯಾಶನಲ್ ಮೂವಮೆಂಟ್ ಬ್ರಿಟನ್ ಶಾಖೆಯು ಮತ್ತು ಅದರ ಅಂಗಸಂಸ್ಥೆಗಳು ಪಾಕಿಸ್ತಾನದಲ್ಲಿ ಬಲೂಚ್ ಜನರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಲು ಭಾರತ ಸರಕಾರಕ್ಕೆ ಆಗ್ರಹಿಸಿವೆ. ಈ ಸಂಘಟನೆಯು ಬಲೂಚಿಸ್ತಾನದ ಸ್ವಾತಂತ್ರ್ಯ ಚಳವಳಿಯಲ್ಲಿ ಸಹಾಯಕ್ಕಾಗಿ ಮನವಿ ಮಾಡಿವೆ.

ಭಾರತದ ವಿರುದ್ಧದ ಆಕ್ರಮಣಕಾರಿ ನಿಲುವನ್ನು ನಿಲ್ಲಿಸುವಂತೆ ಅಮೇರಿಕಾದಿಂದ ಚೀನಾಗೆ ಸಲಹೆ

ಅಮೇರಿಕಾದ ಸಂಸತ್ತಿನಲ್ಲಿ ರಕ್ಷಣಾ ಮಸೂದೆಯನ್ನು ಅಂಗಿಕರಿಸಲಾಗಿದ್ದು ಇದರಲ್ಲಿ ಚೀನಾದ ಸರಕಾರದಿಂದ ಪ್ರತ್ಯಕ್ಷ ನಿಯಂತ್ರಣ ರೇಖೆಯ ಬಳಿ ಭಾರತದ ವಿರುದ್ಧ ನಡೆಯುತ್ತಿರುವ ಸೈನ್ಯದ ಆಕ್ರಮಣವನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.

ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂಗಳ ಮನೆಗಳ ಮೇಲೆ ದಾಳಿ

ಪಾಕಿಸ್ತಾನದಲ್ಲಿಯ ಮಾನವ ಹಕ್ಕುಗಳ ಕಾರ್ಯಕರ್ತೆ ರಾಹತ ಆಸ್ಟೀನ್ ಇವರು ಒಂದು ವಿಡಿಯೋವನ್ನು ಪೋಸ್ಟ ಮಾಡಿ ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರು ಹಿಂದೂಗಳ ಮನೆಗಳ ಮೇಲೆ ನಡೆಸಿದ ದಾಳಿಯ ಹಾಗೂ ಲೂಟಿಯ ಮಾಹಿತಿಯನ್ನು ತಿಳಿಸಿದ್ದಾರೆ.