ವೇದಜ್ಞಾನದ ಪ್ರಸಾರ

ವಿಶ್ವಹಿತ ಸಾಧಿಸುವ ವೇದಪರಂಪರೆಗಳ ರಕ್ಷಣೆ ಮತ್ತು ಪ್ರಸಾರವೇ ಮನುಕುಲದ ಸುಖಸಮೃದ್ಧಿಯ ಮೂಲವಾಗಿದೆ !

ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿಯವರನ್ನು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇತ್ತೀಚೆಗೆ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಆ ಸಂದರ್ಭದಲ್ಲಿ ಅವರು ‘ವೇದರಕ್ಷಣೆಯ ಪರಂಪರೆ ವಿಸ್ತಾರವಾಗಬೇಕು’ ಎಂದು ಉದ್ಗರಿಸಿದರು. ಆಗ ಮಾತನಾಡಿದ ಅವರು, “ಸನಾತನ ಧರ್ಮದ ಉನ್ನತಿಗೆ ಇದು ಸಕಾಲವಾಗಿದೆ. ಭಾರತ ಇಡೀ ಜಗತ್ತಿಗೆ ಧರ್ಮದ ಜ್ಞಾನವನ್ನು ನೀಡಲಿದೆ. ಈಗಲೂ ನಮಗೆ ವೇದಗಳ ಬಗ್ಗೆ ಸಂಪೂರ್ಣ ಜ್ಞಾನವಿಲ್ಲ. ವಿದೇಶಿಯರ ಆಕ್ರಮಣಗಳಿಂದ ವೈದಿಕ ಜ್ಞಾನಕ್ಕೆ ಹಾನಿಯಾಯಿತು. ಆದರೂ ಕೆಲವು ಅನುಯಾಯಿಗಳು ಯುಗಯುಗಾಂತರಗಳಿಂದ ಅದನ್ನು ರಕ್ಷಿಸಿದ್ದಾರೆ”, ಎಂದು ಹೇಳಿದರು.

ಬ್ರಹ್ಮದೇವನಿಂದ ನಾದಬ್ರಹ್ಮ, ಶಬ್ದಬ್ರಹ್ಮ, ಓಂಕಾರ ಮತ್ತು ಅದರಿಂದ ವೇದಗಳ ರಚನೆಯಾಗಿದೆ. ಸತ್ಯಯುಗಕ್ಕಿಂತ ಮೊದಲೇ ಸೃಷ್ಟಿಯಾಗಿರುವ ಕಾರಣ ಅದು `ಅನಾದಿ’ಯಾಗಿದೆ. ಆದಿ ಶಂಕರಾಚಾರ್ಯರು ‘ವೇದಗಳಿಂದ ಸೃಷ್ಟಿಯ ರಚನೆಯಾಗಿದೆ’ ಎಂದು ಹೇಳಿದ್ದಾರೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ, ಸೃಷ್ಟಿಯ ನಿರ್ಮಿತಿಯಾಗಿ 42,03,35,99,994 ವರ್ಷಗಳು ಆಗಿವೆ. ಇದರಿಂದ ವೇದಗಳ ಸೃಷ್ಟಿಯ ಕಾಲ ಗಮನಕ್ಕೆ ಬರಬಹುದು. ಆರಂಭದಲ್ಲಿ ಒಂದು ವೇದವಿತ್ತು. ವೇದಗಳ ಜ್ಞಾನವನ್ನು ಅರ್ಥಮಾಡಿಕೊಳ್ಳಲು, ವ್ಯಾಸಮುನಿಗಳು ದ್ವಾಪಾರಯುಗದ ಕೊನೆಯಲ್ಲಿ ಅದನ್ನು ಸ್ಪಷ್ಟವಾಗಿ 4 ಭಾಗಗಳಾಗಿ ವಿಂಗಡಿಸಿದರು. ಮುಂದೆ ಅದು ಉಪವೇದಗಳಾದವು. ನಂತರದ ಅವಧಿಯಲ್ಲಿ, ವೇದಗಳ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಸಂಹಿತೆ, ಬ್ರಾಹ್ಮಣಗಳು, ಅರಣ್ಯಕಗಳು, ದರ್ಶನಗಳು, ವೇದಾಂಗಗಳು ಮುಂತಾದ ರೂಪದಲ್ಲಿ ವಿಫುಲ ಗ್ರಂಥ ಸಂಪತ್ತು ನಿರ್ಮಾಣವಾಯಿತು. ಇವುಗಳಿಂದ ವೇದಗಳ ಶ್ರೇಷ್ಠತೆ ಯಾರಿಗೂ ಗಮನಕ್ಕೆ ಬರಬಹುದು. ವಿಜ್ಞಾನದಿಂದ ಆತ್ಮಜ್ಞಾನದ ವರೆಗೆ ಜಗತ್ತಿನ ಕಣಕಣದ ಅಂದರೆ ಬ್ರಹ್ಮಾಂಡದ ಜ್ಞಾನವನ್ನು ಒಳಗೊಂಡಿರುವ ನಮ್ಮ ವೇದಶಾಸ್ತ್ರಸಂಪನ್ನ ಸಂಸ್ಕೃತಿಯಾಗಿರುವುದರಿಂದ ಭಾರತ ಒಂದು ಕಾಲದಲ್ಲಿ ವಿಶ್ವಗುರುವಾಗಿತ್ತು ಮತ್ತು ಭೂಮಿಯನ್ನು ಆಳಿತ್ತು. ಕಾಲ ಮಹಿಮೆಗನುಸಾರ ವೇದಗಳ ಜ್ಞಾನ ಲುಪ್ತವಾಗಿದೆ; ಆದರೆ ಕಲಿಯುಗಾಂತರ್ಗತ ಸತ್ಯಯುಗ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಂತರು ಹೇಳುತ್ತಿರುವುದರಿಂದ ಮತ್ತೊಮ್ಮೆ ವೇದಗಳ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಸಮಯ ಪ್ರಾರಂಭವಾಗಿದೆ. ಸರಸಂಘಚಾಲಕರ ಮೇಲೆ ನೀಡಿರುವ ಹೇಳಿಕೆಯು ಅದರ ದ್ಯೋತಕವಾಗಿದೆ.

ಈಗ ವಿದೇಶಿಯರಿಂದಲಾದರೂ ಕಲಿಯಿರಿ!

ಜರ್ಮನಿಯು ವೇದಗಳನ್ನು ಆಳವಾಗಿ ಅಧ್ಯಯನ ಮಾಡಿ ಅನೇಕ ಸಂಶೋಧನೆಗಳನ್ನು ನಡೆಸಿದೆ ಮತ್ತು ಇಂದು ಅದು ವಿಜ್ಞಾನದ ಹೆಸರಿನಲ್ಲಿ ಹೆಸರುವಾಸಿಯಾಗುತ್ತಿದೆ. ಇದೇ ಕೆಲಸವನ್ನು ಭಾರತ ಮಾಡಬಹುದಿತ್ತಲ್ಲವೇ? ದುರದೃಷ್ಟವಶಾತ್ ಕಪಟಿ ಆಂಗ್ಲ ಆಡಳಿತಗಾರರು ಮತ್ತು ಅವರ ಅನುಯಾಯಿಗಳಾದ ಹಿಂದೂದ್ವೇಷಿ ನೆಹರು ಇದನ್ನು ಮಾಡಲು ಬಿಡಲಿಲ್ಲ. ಈಗ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಈ ಕುರಿತು ಅಭ್ಯಾಸವರ್ಗಗಳು ಪ್ರಾರಂಭವಾಗಿವೆ. ನಾಶಿಕನ ಎಂಬಿಎ ಅಭ್ಯಾಸ ಮಾಡುತ್ತಿರುವ ಸೌರಭ ಹರದಾಸ ವೇದಗಳ ಅಧ್ಯಯನವನ್ನು ಮಾಡಿದ್ದಾನೆ. ‘ಮಾರ್ಕೆಟಿಂಗ್’ ಜಗತ್ತಿನಲ್ಲಿ ವೇದಗಳನ್ನು ಹೇಗೆ ಉಪಯೋಗವಾಗುತ್ತದೆಯೆಂದು ಅವನು ಹೇಳುತ್ತಾನೆ. ಇಂದು ಜಗತ್ತು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ದರೂ ಎಲ್ಲದಕ್ಕೂ ವೇದಗಳೇ ಮೂಲವಾಗಿದೆ ಎಂದು ಅವನು ಹೇಳಿದ್ದಾನೆ. ನೌಕಾಯಾನದಿಂದ ವಿಮಾನ ನಿರ್ಮಾಣದವರೆಗೆ, ಜ್ಯೋತಿಷ್ಯದಿಂದ ಖಗೋಳಶಾಸ್ತ್ರದ ವರೆಗೆ ಮತ್ತು ಭ್ರೂಣದ ಬೆಳವಣಿಗೆಯಿಂದ ‘ಟೆಸ್ಟ್ ಟ್ಯೂಬ್ ಬೇಬಿ’ವರೆಗೆ ಎಲ್ಲ ಜ್ಞಾನವೂ ವೇದಗಳಲ್ಲಿ ಲಭ್ಯವಿರುವುದರಿಂದ, ‘ಈ ಜ್ಞಾನದ ಪುನರುಜ್ಜೀವನವಾಗಬೇಕು’ ಎಂದು ಸರಸಂಘಚಾಲಕರ ಹೇಳಿಕೆಯ ತಾತ್ಪರ್ಯವಾಗಿದೆ. ಅಥರ್ವವೇದದಲ್ಲಿ ವಿಮಾನ ನಿರ್ಮಾಣದ ಬಗ್ಗೆ ಆಳವಾದ ಜ್ಞಾನವಿರುವಾಗ ಇಂದು ಅದರ ಶ್ರೇಯಸ್ಸು ‘ರೈಟ್’ ಸಹೋದರರಿಗೆ ಕೊಡಲಾಗುತ್ತಿದೆ. ಹೀಗೆ ಎಲ್ಲ ವಿಷಯಗಳಲ್ಲಿಯೂ ನಡೆಯುತ್ತಿದೆ. ಶಿಲ್ಪಕಲೆ, ಮಾಹಿತಿ ತಂತ್ರಜ್ಞಾನ, ಕಲೆ, ಯುದ್ಧಶಾಸ್ತ್ರ, ಕೃಷಿ, ಸಸ್ಯಶಾಸ್ತ್ರ, ಶರೀರರಚನಾಶಾಸ್ತ್ರ, ಔಷಧಶಾಸ್ತ್ರ, ನೇಯ್ಗೆ, ಮರಗೆಲಸ, ಕಮ್ಮಾರ, ಗಣಿಗಾರಿಕೆ, ಆಭರಣ ನಿರ್ಮಾಣ, ತೈಲ ಹೊರತೆಗೆಯುವಿಕೆ ಇತ್ಯಾದಿಗಳೆಲ್ಲವುಗಳ ಮೂಲವು ವೇದಗಳಲ್ಲಿದೆ.

2013 ರಲ್ಲಿ ಗೋವಾದಲ್ಲಿ ನಡೆದ ಪ್ರಾದೇಶಿಕ ವೇದ ಸಮ್ಮೇಳನದಲ್ಲಿ ಮಹಾಮಂಡಲೇಶ್ವರ ಡಾ. ಶಿವಸ್ವರೂಪಾನಂದ ಸರಸ್ವತಿ ಅವರು, “ಮಂಗಳ, ಗುರು ಮುಂತಾದ ಗ್ರಹಗಳಲ್ಲಿ ನೀರು ಮತ್ತು ಜೀವವಿದೆ ಎಂದು ವೇದಗಳಲ್ಲಿ ಬರೆಯಲಾಗಿದೆ. ಅಮೆರಿಕದ ವೈದ್ಯರಿಗೆ ಚೇಳು ಕುಟುಕಿದ ವಿಷವನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಆದರೆ ಕೇವಲ ವೇದ ಮಂತ್ರಗಳನ್ನು ಪಠಿಸುವ ಮೂಲಕ ನಮ್ಮ ಭಾರತದಲ್ಲಿ ಅವಿದ್ಯಾವಂತರೂ ಚೇಳು ಕುಟುಕಿದ ವಿಷವನ್ನು ಇಳಿಸಬಲ್ಲರು. ವೇದಗಳಲ್ಲಿ ಶ್ರೇಷ್ಠ ಮಂತ್ರವಿಜ್ಞಾನವಿದೆ. ವಿದೇಶಿ ಆಕ್ರಮಣಗಳು ಮತ್ತು ನಮ್ಮ ನಿರ್ಲಕ್ಷ್ಯದಿಂದಾಗಿ ವೇದಾಧ್ಯಯನ ಕ್ಷೀಣಿಸಿದೆ’, ಎಂದಿದ್ದರು

… ಮತ್ತೆ ಬರಲಿದೆ ಸುವರ್ಣಯುಗ!

`ವೇದಗಳ ಜ್ಞಾನವು ಪರಿಪೂರ್ಣವಾಗಿದೆ, ಯಾವುದೇ ದುಷ್ಪರಿಣಾಮಗಳನ್ನು ನಿರ್ಮಾಣ ಮಾಡುವುದಿಲ್ಲ ಮತ್ತು ಎಲ್ಲಾ ಮಾನವಕುಲವನ್ನು ಒಳಗೊಂಡಂತೆ ಸೃಷ್ಟಿಯ ಕಲ್ಯಾಣಕ್ಕೆ ಸಂಬಂಧಿಸಿದೆ’ ಎಂಬುದನ್ನು ನಾವು ಗಮನಿಸಬೇಕು. ವಿಜ್ಞಾನದ ತಳಹದಿಯಾಗಿರುವ ವೇದಗಳ ಜ್ಞಾನವನ್ನು ಎಲ್ಲರವರೆಗೆ ತಲುಪಿಸಿ, ಅದನ್ನು ಪಾಲಿಸಿದರೆ, ದೇಶದಲ್ಲಿ ಪುನಃ ಸುವರ್ಣಯುಗ ಬರುವುದು. ನಮ್ಮ ಋಷಿಮುನಿಗಳು ‘ಮನುಷ್ಯ ಹೇಗೆ ಬದುಕಬೇಕು?’ ಎಂದು ಹೇಳುವ ಸರ್ವೋತ್ತಮ ಸಂಪತ್ತನ್ನು ಅತ್ಯುತ್ತಮ ಗ್ರಂಥವನ್ನು ಸಂಪೂರ್ಣ ವಿಶ್ವಕ್ಕಾಗಿ ನಮ್ಮಲ್ಲಿ ಇಟ್ಟಿದ್ದಾರೆ. ಅದರ ಅನುಯಾಯಿಗಳಾಗಿರುವ ವರೆಗೆ, ನಾವು ಉನ್ನತ ಸ್ಥಾನದಲ್ಲಿದ್ದೆವು. ಆದ್ದರಿಂದ ಈಗ ಮತ್ತೊಮ್ಮೆ ವೇದಗಳ ಅನುಯಾಯಿಗಳಾಗುವ ಸಮಯ ಬಂದಿದೆ ಎನ್ನುವುದನ್ನು ಸರಸಂಘಚಾಲಕರ ಹೇಳಿಕೆಯಿಂದ ಗಮನಿಸಬೇಕಾಗಿದೆ. ನಾವು ಯಾವುದೇ ಕೆಲಸವನ್ನು ಮಾಡುವಾಗ ವೇದಪ್ರಮಾಣ ಎಂದು ಹೇಳಿದಾಗ, ಸಾಕ್ಷಾತ್ ದೇವರು ನಮಗೆ ಆಶೀರ್ವಾದ ನೀಡುತ್ತಾರೆ. ಇದರಿಂದ ವೇದಗಳ ಮಹತ್ವದ ಅರಿವಾಗುತ್ತದೆ. ‘ವೇದಪ್ರಮಾಣ’ ಇದೇ ನಿಜವಾದ ಮಂತ್ರವಾಗಿದೆ. ‘ವೇದಪ್ರಮಾಣ’ ಎಂದು ಹೇಳಿದರೂ ಭಗವಂತನ ಕೃಪೆಯಾಗಿ ರಕ್ಷಣೆಯಾಗುತ್ತದೆ. ಭಕ್ತರಿಗೆ ಈ ರೀತಿಯ ಅನುಭವವಾಗುತ್ತದೆ.

ವೇದವನ್ನು ಜಾಗೃತಗೊಳಿಸಿರಿ, ದೇಶವನ್ನು ರಕ್ಷಿಸಿ !

ಇಂದು ದೇಶದ ಸ್ಥಿತಿಯನ್ನು ನೋಡಿದರೆ, ರಜ-ತಮ ಎಂಬ ಕಾಳ್ಗಿಚ್ಚು ಹೊತ್ತಿ ಉರಿಯುತ್ತಿರುವುದು ಕಂಡು ಬರುತ್ತದೆ. ಪ್ರತಿಯೊಂದು ರಾಜ್ಯವೂ ತತ್ತರಿಸುತ್ತಿದೆ. ಎಲ್ಲಾ ಹಂತಗಳಲ್ಲಿ ಸಂಘರ್ಷದ ಅಲಗು ಹರಿತವಾಗಿದೆ. ಹಿಂದೆಂದೂ ಇರದಷ್ಟು ಹಿಂದೂ ಅಸ್ಮಿತೆ ಮತ್ತು ಸಂಘಟನೆ, ಅವರಲ್ಲಿರುವ ಕ್ಷಾತ್ರವೃತ್ತಿಯನ್ನು ಬ್ರಹ್ಮತೇಜವನ್ನು ಜಾಗೃತಗೊಳಿಸುವ ಆವಶ್ಯಕತೆ ನಿರ್ಮಾಣವಾಗಿದೆ. ವೇದಗಳಲ್ಲಿ ಐಕ್ಯತೆಯನ್ನು ಸಾಧಿಸಬಹುದಾದ ಈ ಗ್ರಂಥವು ಬಹುದೊಡ್ಡ ಶಕ್ತಿ ಮತ್ತು ಮೌಲ್ಯಗಳಿವೆ. ಎಲ್ಲಾ ಹಿಂದೂಗಳ ನಡುವಿನ ಐಕ್ಯತೆಯ ಕೊಂಡಿ ಸನಾತನ ‘ವೈದಿಕ ಸಂಸ್ಕೃತಿ’ಯಾಗಿದೆ. ಇದರಿಂದ ವೇದ ಮತ್ತು ಸಂಬಂಧಿಸಿದ ಶಾಸ್ತ್ರಗಳು ಸಾಮಾಜಿಕ ಬದಲಾವಣೆಗೆ ಅನುಗುಣವಾಗಿ ಸರಳ ಶಬ್ದಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವುದು, ಶಾಲೆ-ವಿಶ್ವವಿದ್ಯಾಲಯಗಳಲ್ಲಿ ಕಲಿಸುವುದು ಆವಶ್ಯಕವಾಗಿದೆ. ಹಾಗಾದರೆ ಮಾತ್ರ ವೇದಗಳ ಪ್ರಸಾರ ಮಾಡಲು ಬಯಸುತ್ತಿರುವವರಿಗೆ ಅದರ ಹಿಂದಿರುವ ಉದ್ದೇಶವನ್ನು ಸಾಧಿಸಲು ಪ್ರಾರಂಭವಾಗಬಹುದು. ವೇದಗಳ ಶ್ರವಣ-ದೃಶ್ಯ ಪದ್ಧತಿಯಿಂದ ಪ್ರಚಾರವಾದರೆ ಅತ್ಯಲ್ಪ ಮಟ್ಟದಲ್ಲಿ ಮತ್ತು ಗುರು-ಶಿಷ್ಯ ಸಂಪ್ರದಾಯದ ಪ್ರಕಾರ ಅಧ್ಯಯನ ಮಾಡಿದರೆ ಪೂರ್ಣ ಲಾಭ ಸಿಗುತ್ತದೆ. ವೇದಗಳ ರಕ್ಷಣೆಯನ್ನು ಮಾಡಿದರೆ ಅದು ನಮ್ಮನ್ನು (ಮಾನವನ) ಭವಿಷ್ಯದಲ್ಲಿ ರಕ್ಷಿಸುವುದು ಮತ್ತು ಭಾರತದ ಬಳಿ ಅದರ ಮುಖ್ಯ ಜವಾಬ್ದಾರಿ ಇದೆ.