ವಿಶ್ವವಿದ್ಯಾಲಯದಲ್ಲಿ ದೇಶಭಕ್ತಿಯನ್ನು ನಿರ್ಮಾಣ ಮಾಡಲು ಕಾರ್ಯನಿರತವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಜುಲೈ 9 ರಂದು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ತನ್ನಿಮಿತ್ತ …

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ(ಅಭಾವಿಪ) ಸ್ಥಾಪನೆ ಜುಲೈ 9, 1949 ರಂದು ಆಯಿತು. ರಾಷ್ಟ್ರವಾದಿ ಮತ್ತು ಹಿಂದುತ್ವನಿಷ್ಠ ವಿಚಾರಸರಣಿ ಹೊಂದಿರುವ ಈ ಸಂಘಟನೆ ಕಳೆದ ಅನೇಕ ದಶಕಗಳಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಈ ಸಂಘಟನೆ ಈ ವರ್ಷ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಡಾ. ಯಾಜ್ಞವಲ್ಕ ಶುಕ್ಲಾರೊಂದಿಗೆ ನಮ್ಮ ಪ್ರತಿನಿಧಿ ಸಂದರ್ಶನ ನಡೆಸಿದರು. ಸಂದರ್ಶನದ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.

1.ವಿಶ್ವವಿದ್ಯಾಲಯಗಳಲ್ಲಿ ದೇಶಭಕ್ತಿಯನ್ನು ನಿರ್ಮಾಣ ಮಾಡುವ `ಅಭಾವಿಪ’ ಕಾರ್ಯ

ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ದೇಶವಿರೋಧಕ್ಕೆ ಸ್ವಲ್ಪವೂ ಸ್ಥಾನವಿಲ್ಲ. ಮೂಲದಲ್ಲಿ ನಮ್ಮ ದೇಶದ ಯಾವುದೇ ವಿಶ್ವವಿದ್ಯಾಲಯಗಳು ಭಾರತವಿರೋಧಿಯಿಲ್ಲ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಭಾರತವಿರೋಧಿ ಹೇಳಿಕೆ ನೀಡುವ ಜನರಿದ್ದು, ಅವರು ಪ್ರಸಾರ ಮಾಧ್ಯಮಗಳಲ್ಲಿ ಅಧಿಕ ಪ್ರಸಿದ್ಧಿ ಪಡೆಯುತ್ತಾರೆ. ಇಂತಹವರ ಸಂಖ್ಯೆ ಕೈಬೆರಳೆಣಿಕೆಯಷ್ಟಿದ್ದು, ಜನರು ಅವರನ್ನು ಯಾವತ್ತೂ ತಿರಸ್ಕರಿಸಿದ್ದಾರೆ. ಅವರಿಗೆ ಯಾರೂ ಸ್ಥಾನ ಕೊಡುತ್ತಿಲ್ಲ. ಅವರ ಅಂಗಡಿ ಮುಚ್ಚುತ್ತಿದೆ. ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆ.ಎನ್.ಯೂ) ಇಂದಿಗೂ ದೊಡ್ಡ ಪ್ರಮಾಣದಲ್ಲಿ ದೇಶಭಕ್ತ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆಂದು ನಾನು ಹೇಳಬಯಸುತ್ತೇನೆ. `ಸಾಮ್ಯವಾದಿ(ಕಮ್ಯುನಿಸ್ಟ) ಸಂಘಟನೆಗಳ ಧೋರಣೆಯೇ ಭಾರತದ ಸರಕಾರಿ ಸಂಸ್ಥೆಗಳನ್ನು ನಿರಾಕರಿಸುವುದಾಗಿದೆ, ಭಾರತೀಯ ಸೈನ್ಯವನ್ನು ನಿರಾಕರಿಸುವುದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ನಿರಾಕರಿಸುವುದು’ ಆಗಿದೆ. ಅವರ ಆದರ್ಶ ಮಾರ್ಕ್ಸ ಮತ್ತು ಲೆನಿನ್ ಆಗಿದ್ದಾರೆ. ಈ ಕಾರಣದಿಂದ ಸಾಮ್ಯವಾದಿಗಳು (ಕಮ್ಯುನಿಸ್ಟರು) ದಾರಿತಪ್ಪಿದ್ದಾರೆ. ಇಂತಹುದರಲ್ಲಿ `ಅಭಾವಿಪ’ ವಿಶ್ವವಿದ್ಯಾಲಯಗಳಲ್ಲಿ ದೇಶಭಕ್ತಿಯನ್ನು ನಿರ್ಮಾಣ ಮಾಡುವ ಕಾರ್ಯವನ್ನು ಮಾಡುತ್ತಿದೆ.

ಡಾ.ಯಾಜ್ಞವಲ್ಕ ಶುಕ್ಲಾ

2.ಯುವಪೀಳಿಗೆಯನ್ನು ವ್ಯಸನಿಗಳನ್ನಾಗಿ ಮಾಡಲು ಅಂತರರಾಷ್ಟ್ರೀಯ ಸಂಚು

ಇಂದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಭಾರತೀಯ ಯುವ ಪೀಳಿಗೆಯ ಪ್ರತಿಭೆಗೆ ಹೆದರುತ್ತಿವೆ. `ಜಗತ್ತಿನ ಅನೇಕ ಕ್ಷೇತ್ರಗಳು ಭಾರತೀಯ ಯುವ ಪೀಳಿಗೆಯ ಪ್ರಭುತ್ವದಡಿ ಒಳಪಡುತ್ತವೆ’ ಎಂದು ಅವರಿಗೆ ಹೆದರಿಕೆಯೆನಿಸುತ್ತಿದೆ. ಇದರಿಂದಲೇ ಅವರು ಭಾರತದ ಯುವಪೀಳಿಗೆಯ ವಿರುದ್ಧ ದೊಡ್ಡ ಸಂಚನ್ನು ರೂಪಿಸುತ್ತಿದ್ದಾರೆ. ಇಂದು ಭಾರತೀಯ ಯುವ ಪೀಳಿಗೆಯು ಮೊಬೈಲ್ ದಾಸರಾಗಿದ್ದಾರೆ ಎನ್ನುವುದು ವಸ್ತುಸ್ಥಿತಿಯಾಗಿದೆ. ಆದರೆ ಅವರ ಎದುರಿಸುತ್ತಿರುವ ದೊಡ್ಡ ಸವಾಲು ವ್ಯಸನಾಧೀನರಾಗಿರುವುದು. ಯುವ ಪೀಳಿಗೆಯನ್ನು ವ್ಯಸನಿಗಳನ್ನಾಗಿ ಮಾಡುವ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ನಮ್ಮ ನೆರೆಯ ದೇಶಗಳಿಂದ ಅದಕ್ಕಾಗಿ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿರುತ್ತವೆ. ಪಂಜಾಬ, ತ್ರಿಪುರಾಗಳಂತಹ ರಾಜ್ಯಗಳ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳ ಕಳ್ಳಸಾಗಾಣಿಕೆ ನಡೆಯುತ್ತಿರುವುದು ಕಂಡು ಬರುತ್ತದೆ. ನೇಪಾಳ ಮಾರ್ಗದಿಂದ ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ನಡೆಯುತ್ತದೆ. ಇಂದು ಮಾದಕ ವಸ್ತುಗಳ ಸೇವನೆ `ಫ್ಯಾಶನ್’ ಆಗಿದೆ. ಅದರ ಮೂಲಕ ಯುವ ಪೀಳಿಗೆಯನ್ನು ನಷ್ಟಗೊಳಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಇದೇ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆಯೆಂದು ನಾನು ಭಾವಿಸುತ್ತೇನೆ.

3.`ಲವ್ ಜಿಹಾದ’ ಎಂದರೆ ಭಯೋತ್ಪಾದನೆ

ಲವ್ ಜಿಹಾದ್ ಒಂದು ಪಿತೂರಿಯಾಗಿದೆ. ಆಮಿಷ, ಸುಳ್ಳುತನ, ವಂಚನೆ ಮತ್ತು ಮೋಸ ಇವುಗಳ ಮೂಲಕ ಲವ್ ಜಿಹಾದ ನಡೆಸಲಾಗುತ್ತಿದೆ. ` ದಿ ಕೇರಳ ಸ್ಟೋರಿ’ ಚಲನಚಿತ್ರದ ಮೂಲಕ ಸತ್ಯ ಜನರೆದುರಿಗೆ ಬಂದಿದೆ. ಈ ಬಿಕ್ಕಟ್ಟು ಸಾಮಾನ್ಯವಲ್ಲ. ಆ ಮೂಲಕ ಮಾತೃಶಕ್ತಿಯ ಮೇಲೆ ಆಕ್ರಮಣ ನಡೆಸಲಾಗುತ್ತಿದೆ. ಮುಸಲ್ಮಾನ ಯುವಕರಿಗೆ ನಿಜವಾಗಿಯೂ ಪ್ರೀತಿಸುವುದಿದ್ದರೆ, ಅವರು ತಮ್ಮ ಮೂಲ ಮುಸಲ್ಮಾನ ಹೆಸರನ್ನು ಹೇಳಿ ಮಾಡಬೇಕು. ಸುಳ್ಳು ಹೇಳಿ ತಮ್ಮ ಹೆಸರು ಸೋನೂ, ಟೀನೂ ಎನ್ನುವ ಹಿಂದೂ ಅಡ್ಡಹೆಸರುಗಳನ್ನು ಹೇಳಿ ಪ್ರೀತಿ ಮಾಡಬಾರದು. ಹೀಗೆ ಸುಳ್ಳು ಹೇಳಿ, ಮೋಸದಿಂದ ಅವರು ಏಕೆ ಪ್ರೀತಿ ಮಾಡುತ್ತಾರೆ? ಇದು ಪ್ರೀತಿಯಲ್ಲ, ಭಾರತದ ಕುಟುಂಬವ್ಯವಸ್ಥೆಯನ್ನು ನಷ್ಟಗೊಳಿಸುವ ಸುನಿಯೋಜಿತ ಸಂಚು ಆಗಿದೆ. ಇದನ್ನು ತಡೆಯಲು ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ಜಾಗರೂಕತೆ ಮೂಡಿಸುವುದು ಆವಶ್ಯಕವಾಗಿದೆ. ಪೋಷಕರು ತಮ್ಮ ಹುಡುಗಿಯರ ಮೇಲೆ ನಿಗಾ ಇಡಬೇಕು. ಈಗ ಮುಸ್ಲಿಂ ಧರ್ಮಗುರುಗಳು ಸಮಾಜದ ಎದುರಿಗೆ ಬಂದು ಇಸ್ಲಾಂ ಹೆಸರಿನಲ್ಲಿ ನಡೆದಿರುವ ಈ ಪದ್ಧತಿಯನ್ನು ನಿಲ್ಲಿಸುವಂತೆ ಕರೆ ನೀಡಬೇಕು. ಲವ್ ಜಿಹಾದ ಹೊಸ ರೀತಿಯ ಭಯೋತ್ಪಾದಕತೆಯಾಗಿದೆ. ಇಂತಹ ಕೃತ್ಯವನ್ನು ಮಾಡುವವರ ಮೇಲೆ ಸರಕಾರ ರಾಷ್ಟ್ರೀಯ ಭದ್ರತಾ ಕಾನೂನಿನ ಅಡಿಯಲ್ಲಿ ದೂರನ್ನು ದಾಖಲಿಸಬೇಕು ಮತ್ತು ಅವರ ಮೇಲೆ ಅತ್ಯಂತ ಕಠೀಣ ಕ್ರಮಕೈಕೊಳ್ಳಬೇಕು.ಇದೊಂದು ಸಾಮಾಜಿಕ ವಿಪತ್ತು ಆಗಿರುವುದರಿಂದ `ಅಭಾವಿಪ’ ಮಾತ್ರವಲ್ಲ ಸಂಪೂರ್ಣ ಸಮಾಜವೇ ಎಚ್ಚರಗೊಳ್ಳುವ ಆವಶ್ಯಕತೆಯಿದೆ.

4. ದೇಶಕ್ಕಾಗಿ ಒಂದು ಆಂದೋಲನ

`ರಾಷ್ಟ್ರದ ಪುನರ್ನಿರ್ಮಾಣ’ ಇದು ನಮ್ಮ ಉದ್ದೇಶವಾಗಿದೆ. ಎಲ್ಲರ ಪ್ರಗತಿಯಾಗಬೇಕು. ದೇಶದಲ್ಲಿ ಬಡತನ ಮತ್ತು ಭೇದಭಾವವಿರಬಾರದು. ದೇಶದ ಎಲ್ಲ ಸಮಾಜದ ಪ್ರಗತಿಯೇ ಭಾರತದ ಅಭಿವೃದ್ಧಿಯಾಗಿದೆ. ಯುವ ಪೀಳಿಗೆ ಸುಶಿಕ್ಷಿತರಾಗಬೇಕು ಮತ್ತು ಅವರಿಗೆ ಉದ್ಯೋಗ ಸಿಗಬೇಕು. ಆತ್ಮಗೌರವವಿರುವ ಯುವಪೀಳಿಗೆಯ ನಿರ್ಮಾಣವಾಗಬೇಕು. `ಅಭಾವಿಪ’ ದ 75ನೇ ವರ್ಷವು ಭಾರತದ ಅಭಿವೃದ್ಧಿ ಮತ್ತು ಭಾರತೀಯ ನಾಗರಿಕರಿಗೆ ಸಮರ್ಪಿತವಾಗಿದೆ. ಇದಕ್ಕಾಗಿ `ದೇಶಕ್ಕಾಗಿ ಒಂದು ಆಂದೋಲನ’ ಇದು ನಮ್ಮ ಯೋಜನೆಯಾಗಿದೆ. ಯುವ ಪೀಳಿಗೆಯ ಭರವಸೆಯ ಮೇಲೆಯೇ ಭಾರತ ವಿಶ್ವಗುರುವಾಗಲಿದೆ ಭಾರತದ ಆಗುಹೋಗುಗಳಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ, ವಿಜ್ಞಾನ-ತಂತ್ರಜ್ಞಾನ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಪ್ರತಿಭಾವಂತ ಯುವ ಪೀಳಿಗೆ ಕಾರ್ಯನಿರತವಾಗಿದೆ.ಯುವಕರಲ್ಲಿ ಕೆಲಸ ಮಾಡುವ ವೇಗ ಮತ್ತು ಅಪರಿಮಿತ ಉತ್ಸಾಹವಿರುತ್ತದೆ. ಇಂದಿನ ಯುವಪೀಳಿಗೆ ಕೇವಲ ಸಮಸ್ಯೆಗಳ ಮೇಲೆ ಚರ್ಚೆ ಮಾಡುತ್ತ ಕುಳಿತುಕೊಳ್ಳುವುದಿಲ್ಲ. ಅದು ಅದರ ಮೇಲೆ ಉಪಾಯವನ್ನು ಕಂಡು ಹಿಡಿಯುತ್ತದೆ. ಆದಾಗ್ಯೂ ಅವರು ದಾರಿತಪ್ಪದಂತೆ ಅವರ ಎದುರಿಗೆ ಯೋಗ್ಯ ಆದರ್ಶವನ್ನು ಇಡಬೇಕು. ಹಾಗೆಯೇ ಅವರಿಗೆ ಆಯಾ ಸಮಯದಲ್ಲಿ ಮಾರ್ಗದರ್ಶನ ಮಾಡಬೇಕು; ಕಾರಣ ಯುವ ಪೀಳಿಗೆಯ ಭರವಸೆಯ ಮೇಲೆಯೇ ಭಾರತ ವಿಶ್ವಗುರುವಾಗಲಿದೆ.