ದೇಶಾದ್ಯಂತ ಹನುಮಾನ ಜಯಂತಿ ಸಂಭ್ರಮದಿಂದ ಆಚರಣೆ !

ಪೊಲೀಸ್ ಭದ್ರತೆ ಅಡಿಯಲ್ಲಿ ದೆಹಲಿ, ಬಿಹಾರ ಮತ್ತು ಬಂಗಾಲದಲ್ಲಿ ಶೋಭಾಯಾತ್ರೆ !

ನವ ದೆಹಲಿ – ದೇಶಾದ್ಯಂತ ಹನುಮಾನ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಯೋಧ್ಯೆಯ ಪ್ರಾಚೀನ ಹನುಮಾನನ ಗಢಿಯಲ್ಲಿ ಸಾಧು ಸಂತರ ಉಪಸ್ಥಿತಿಯಲ್ಲಿ ಹನುಮಾನ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದೇಶಾದ್ಯಂತ ಶೋಭಾಯಾತ್ರೆ ನಡೆಸಲಾಯಿತು. ಶ್ರೀರಾಮನವಮಿ ಶೋಭಾಯಾತ್ರೆಯ ಮೇಲೆ ಮುಸ್ಲಿಂ ಮತಾಂಧರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಹನುಮಾನ ಜಯಂತಿಯ ಮೆರವಣಿಗೆಗೆ ಭದ್ರತಾ ವ್ಯವಸ್ಥೆ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

(ಸೌಜನ್ಯ : India Today)

ಕಳೆದ ವರ್ಷ ದೆಹಲಿಯ ಜಹಾಂಗೀರಪುರಿಯಲ್ಲಿ ನಡೆದ ಹನುಮಾನ ಜಯಂತಿ ಶೋಭಾಯಾತ್ರೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಿದ್ದರಿಂದ ಪೋಲಿಸರು ಸಾಕಷ್ಟು ಷರತ್ತುಗಳು ಹಾಕಿ ಶೋಭಾಯಾತ್ರೆಗೆ ಅವಕಾಶ ಮಾಡಿ ಕೊಟ್ಟಿದ್ದರು. (ಕಲ್ಲು ತೂರಾಟಗಾರರನ್ನು ತಡೆಯುವ ಬದಲು ಹಿಂದೂಗಳ ಶೋಭಾಯಾತ್ರೆಗಳ ಮೆಲೆ ನಿಷೇಧ ಹೇರುವ ಪೊಲೀಸರು ! – ಸಂಪಾದಕರು)

(ಸೌಜನ್ಯ : Times Of India)

ಬಂಗಾಲದಲ್ಲಿ ಕೇಂದ್ರ ಭದ್ರತಾ ಪಡೆಗಳ ಸಮ್ಮುಖದಲ್ಲಿ ಶೋಭಾಯಾತ್ರೆಗಳನ್ನು ನಡೆಸಲಾಯಿತು. ಹೂಗ್ಲಿಯಲ್ಲಿ ನಡೆದ ಗಲಭೆಯ ಹಿನ್ನಲೆಯಲ್ಲಿ ಪೊಲೀಸರು ಹಿಂದಿನ ದಿನ ಧ್ವಜಾರೋಹಣವನ್ನು ಆಯೋಜಿಸಿದ್ದರು.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಮೆರವಣಿಗೆಗಳು ಮಾತ್ರ ಹಿಂಸಾಚಾರದ ಕರಿನೆರಳಿನಲ್ಲಿ ನಡೆಸಬೇಕಾಗುತ್ತದೆ, ಇದು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !