ದೇಶಾದ್ಯಂತ ಖಾಸಗಿ ಶಾಲೆಯ ಶುಲ್ಕದಲ್ಲಿ ಶೇಕಡಾ ೧೫ ರಷ್ಟು ಹೆಚ್ಚಳ !

ನವ ದೆಹಲಿ – ದೆಹಲಿ, ಕರ್ನಾಟಕ, ರಾಜಸ್ಥಾನ, ಪಂಜಾಬ, ಉತ್ತರ ಪ್ರದೇಶ, ಕಾಶ್ಮೀರ, ಜಾರ್ಖಂಡ್, ಈ ರಾಜ್ಯಗಳ ಸಹಿತ ಅನೇಕ ರಾಜ್ಯಗಳಲ್ಲಿ ಖಾಸಗಿ ಶಾಲೆಗಳು ಶೇಕಡ ೧೦ ರಿಂದ ೧೫ ರಷ್ಟು ಶುಲ್ಕ ಹೆಚ್ಚಿಸಿದ್ದಾರೆ. ಇದರಲ್ಲಿ ಅನೇಕ ರಾಜ್ಯಗಳಲ್ಲಿನ ಪೋಷಕರು ವಿರೋಧಿಸಿದ್ದಾರೆ. ಅನೇಕ ಖಾಸಗಿ ಶಾಲೆಗಳು ಸರಕಾರದ ಭೂಮಿಯಲ್ಲಿ ಕಟ್ಟಿದ್ದಾರೆ. ಆದ್ದರಿಂದ ಸರಕಾರದ ಅನುಮತಿ ಇಲ್ಲದೆ ಈ ಶಾಲೆಯ ಆಡಳಿತ ಮನಸ್ಸಿನಂತೆ ಶುಲ್ಕ ಹೆಚ್ಚಿಸಲು ಸಾಧ್ಯವಿಲ್ಲ, ಹೀಗೆ ಇದ್ದರೂ ಮನಸ್ಸಿಗೆ ಬಂದಂತೆ ಶುಲ್ಕ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ೧ ಸಾವಿರ ೭೦೦ ಖಾಸಗಿ ಶಾಲೆಗಳು ಇವೆ. ಅದರಲ್ಲಿನ ೩೯೪ ಶಾಲೆಗಳು ಸರಕಾರಿ ಭೂಮಿಯ ಮೇಲೆ ಕಟ್ಟಲಾಗಿದೆ. ಕೆಲವು ಖಾಸಗಿ ಶಾಲೆಗಳಿಗೆ ಸರಕಾರಿ ಅನುದಾನ ಸಿಗುವುದಿಲ್ಲ. ಹೀಗೆ ಇದ್ದರೂ ಅವರಿಗೆ ಶುಲ್ಕ ಹೆಚ್ಚಿಸುವಾಗ ಸರಕಾರದ ಗಮನಕ್ಕೆ ಅದರ ಮಾಹಿತಿ ನೀಡುವುದು ಹಾಗೂ ಶಾಲೆಯ ವಾರ್ಷಿಕ ಆಯವ್ಯಯ ಸರಕಾರಕ್ಕೆ ಪ್ರಸ್ತುತಪಡಿಸುವುದು ಅವಶ್ಯಕವಾಗಿದೆ; ಆದರೆ ಬಹಳಷ್ಟು ಖಾಸಗಿ ಶಾಲೆಗಳು ಹೀಗೆ ಮಾಡುವುದಿಲ್ಲ.

ಸಂಪಾದಕರ ನಿಲುವು

ಭಾರತದಲ್ಲಿನ ತಥಾಕಥಿತ ಶಿಕ್ಷಣ ಸಾಮ್ರಾಟರು ಶಿಕ್ಷಣದ ಮಾರುಕಟ್ಟೆ ನಡೆಸುತ್ತಿದ್ದು ಅದರಿಂದ ಸಾಮಾನ್ಯ ಮತ್ತು ಬಡ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮವಾಗುತ್ತಿದೆ. ಈಗ ಸರಕಾರ ಇದರಲ್ಲಿ ಹಸ್ತಕ್ಷೇಪ ನಡೆಸಿ ಮನಬಂದಂತೆ ವರ್ತಿಸುವ ಖಾಸಗಿ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !