ನೀವು 24 ಕೋಟಿ ಮುಸಲ್ಮಾನರನ್ನು ಸಮುದ್ರದಲ್ಲಿ ಎಸೆಯುವಿರೋ, ಚೀನಾಕ್ಕೆ ಕಳುಹಿಸುವಿರೋ ?- ಫಾರೂಕ ಅಬ್ದುಲ್ಲಾ

ನ್ಯಾಷನಲ್ ಕಾನ್ಫರೆನ್ಸ್‌ನ ಮುಖಂಡ ಡಾ. ಫಾರೂಕ್ ಅಬ್ದುಲ್ಲ

ನವದೆಹಲಿ – ಕೇಂದ್ರ ಸರಕಾರ ಧಾರ್ಮಿಕ ಬಣ್ಣ ನೀಡಿ ದೇಶವನ್ನು ವಿಭಜಿಸುತ್ತಿದ್ದಾರೆ. ಇದು ನಿಲ್ಲಬೇಕು. ದೇಶದಲ್ಲಿ ಭೀತಿ ಮತ್ತು ದ್ವೇಷದ ರಾಜಕಾರಣ ಹೊಸದಲ್ಲ. ಈ ಜನರು 24 ಕೋಟಿ ಮುಸಲ್ಮಾನರೊಂದಿಗೆ ಏನು ಮಾಡಲಿದ್ದಾರೆ ? ಅವರನ್ನು ಸಮುದ್ರಕ್ಕೆ ಎಸೆಯುತ್ತಾರೋ ಅಥವಾ ಚೀನಾಗೆ ಕಳಿಸುತ್ತಾರೆಯೇ ? ಎಂದು ಜಮ್ಮೂ-ಕಾಶ್ಮೀರದ ನ್ಯಾಶನಲ ಕಾನ್ಫರೆನ್ಸ ಪಕ್ಷದ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ ಅಬ್ದುಲ್ಲಾ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ. ಅವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಭೆಯಲ್ಲಿ ಜಮ್ಮೂ-ಕಾಶ್ಮೀರದಲ್ಲಿ ವಿಧಾನಸಭೆಯ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗವನ್ನು ಭೇಟಿಯಾಗಿ ಕೋರುವುದಾಗಿಯೂ ಈ ಸಭೆಯಲ್ಲಿ ನಿರ್ಧರಿಸಿದ್ದಾರೆ. ಜಮ್ಮೂ-ಕಾಶ್ಮೀರವನ್ನು ರಾಜ್ಯದ ಸ್ಥಾನಮಾನವನ್ನು ನೀಡುವಂತೆಯೂ ಕೋರುವುದಾಗಿ ಅವರು ತಿಳಿಸಿದರು.

1. ಅಬ್ದುಲ್ಲಾ ಮಾತನ್ನು ಮುಂದುವರಿಸುತ್ತಾ, ಗಾಂಧೀಜಿಯವರು ರಾಮರಾಜ್ಯದ ವಿಷಯವನ್ನು ಮಾತನಾಡುತ್ತಿದ್ದರು. ಇದರರ್ಥ ಯಾವುದೇ ಭೇದಭಾವವಿಲ್ಲದೇ ಎಲ್ಲರಿಗೂ ಸಮಾನ ಅಧಿಕಾರ ಸಿಗುವುದಾಗಿದೆ. ನಮಗೆ ಅವರ ಆದರ್ಶದಂತೆ ಮುಂದುವರಿಯಲು ಸಾಧ್ಯವಾಗಬೇಕು. ಒಬ್ಬರಿಗೊಬ್ಬರ ವಿರುದ್ಧ ಯಾರನ್ನೂ ನಿಲ್ಲಿಸುವುದಲ್ಲ. (ಕಾಶ್ಮೀರದ ಮುಸಲ್ಮಾನರು ಗಾಂಧೀಜಿಯವರ ಮಾರ್ಗದಲ್ಲಿ ಯಾವಾಗ ಮುಂದುವರಿಯುವರು ಎಂದು ಫಾರೂಖ ಅಬ್ದುಲ್ಲಾ ಹೇಳಬೇಕು ! – ಸಂಪಾದಕರು)

2. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಫಾರೂಖ ಅಬ್ದುಲ್ಲಾ, ಇಂದು ಜಮ್ಮೂ ಚೇಂಬರ ಆಫ್ ಕಾಮರ್ಸನ ಸರಕು ತೆರಿಗೆಯ ವಿರುದ್ಧ ನಿರ್ಬಂಧಕ್ಕೆ ಕರೆ ನೀಡಿದ್ದರು. ಈ ಸಂದರ್ಭದಲ್ಲಿ ಜನರ ಮೇಲೆ ಲಾಠಿಚಾರ್ಜ ನಡೆಸಲಾಯಿತು. ಇದರಿಂದ, ರಾಜ್ಯದ ಪರಿಸ್ಥಿತಿ ಒಳ್ಳೆಯದಿಲ್ಲ ಎಂಬುದು ಗಮನಕ್ಕೆ ಬಂದಿತು. ಜಮ್ಮೂ- ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ. ನಾವು ದೇಶದವರೇ ಆಗಿರುವಾಗ ನಮ್ಮೊಂದಿಗೆ ಹೀಗೇಕೆ ನಡೆದುಕೊಳ್ಳುತ್ತಿದ್ದಾರೆ ? ನಾವು ರಾಷ್ಟ್ರವಿರೋಧಿಗಳಲ್ಲ. (‘ನೀವು ದೇಶಭಕ್ತರಾಗಿದ್ದೀರಿ’ ಎನ್ನುವ ವಿಷಯದಲ್ಲಿ ಭಾರತೀಯರಿಗೆ ಏಕೆ ಸಂಶಯ ಮೂಡುತ್ತದೆ?, ಈ ವಿಷಯದಲ್ಲಿ ಅವರೇಕೆ ಮಾತನಾಡುವುದಿಲ್ಲ ? – ಸಂಪಾದಕರು)

ಸಂಪಾದಕರ ನಿಲುವು

* `15 ನಿಮಿಷಗಳಿಗೆ ಪೊಲೀಸರನ್ನು ಪಕ್ಕಕ್ಕೆ ಸರಿಸಿ 100 ಕೋಟಿ ಹಿಂದೂಗಳಿಗೆ ಪಾಠ ಕಲಿಸುತ್ತೇವೆ’, ಎಂದು ಹೇಳಿಕೆ ನೀಡುವ ಎಂ.ಐ.ಎಂ. ನಾಯಕ ಅಕ್ಬರುದ್ದೀನ ಓವೈಸಿಯವರ ವಿಷಯದಲ್ಲಿ ಅಬ್ದುಲ್ಲಾ ಏಕೆ ಬಾಯಿ ತೆರೆಯುವುದಿಲ್ಲ ?

* ದೇಶದಲ್ಲಿ ಕಾಶ್ಮೀರದಲ್ಲಿ ಮುಸಲ್ಮಾನರು ಹೆಚ್ಚಾದರೆ ಹಿಂದೂಗಳ ಪರಿಸ್ಥಿತಿ ಏನಾಯಿತು ? ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ, ಈ ವಿಷಯದಲ್ಲಿ ಅಬ್ದುಲ್ಲಾ ಏಕೆ ಮಾತನಾಡುವುದಿಲ್ಲ ?