ವಿದ್ಯಾರ್ಥಿಗಳಿಗೆ ವಿಷ ನೀಡಿರುವವರಿಗೆ ಗಲ್ಲು ಶಿಕ್ಷೆ ನೀಡಿರಿ – ಅಯಾತುಲ್ಲಾ ಖೊಮೆನಿ

ಇರಾನ್ ನಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ವಿಷ ನೀಡಿರುವ ಪ್ರಕರಣ

ಇರಾನ ಮುಖಂಡ ಅಯಾತುಲ್ಲಾ ಖೊಮೆನಿ

ತೆಹರಾನ (ಇರಾನ) – ಇರಾನ್ ನಲ್ಲಿರುವ 230 ಶಾಲೆಯ ಸುಮಾರು 4 ಸಾವಿರ ವಿದ್ಯಾರ್ಥಿಗಳಿಗೆ ವಿಷ ನೀಡಿರುವ ದೂರಿನ ಕುರಿತು ಇರಾನ ಮುಖಂಡ ಅಯಾತುಲ್ಲಾ ಖೊಮೆನಿಯವರು ಮಾತನಾಡುತ್ತಾ, ‘ಒಂದು ವೇಳೆ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕವಾಗಿ ವಿಷವನ್ನು ನೀಡಿದ್ದರೆ, ಅದು ಅಕ್ಷಮ್ಯ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು.’ ಎಂದು ಹೇಳಿದ್ದಾರೆ. ವಿಷ ಸೇವಿಸಿದ್ದರಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಪ್ರಕರಣದ ಬಗ್ಗೆ ಇರಾನ್ ನಲ್ಲಿ ಆಂದೋಲನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿಷವನ್ನು ಯಾರು ಮತ್ತು ಏಕೆ ನೀಡಿದ್ದಾರೆ?’, ಎನ್ನುವುದು ಇಂದಿಗೂ ಸ್ಪಷ್ಟವಾಗಿಲ್ಲ.