ಇರಾನ್ ನಲ್ಲಿ ೯೦೦ ರಕ್ಕು ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಷ ನೀಡಿದ ಪ್ರಕರಣ
ತೆಹರಾನ್ (ಇರಾನ್) – ಇರಾನನಲ್ಲಿ ಶಾಲೆಯ ಶಿಕ್ಷಣ ಪಡೆಯುವ ೯೦೦ ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿನಿಗಳಿಗೆ ವಿಷ ನೀಡಿರುವ ಪ್ರಕರಣ ಹೆಚ್ಚು ಜಟಿಲವಾಗುತ್ತಿದೆ. ದೇಶದ ಕೆಲವು ಸ್ಥಳದಲ್ಲಿ ಈ ಪ್ರಕರಣಲ್ಲಿ ವಿದ್ಯಾರ್ಥಿನಿಯರ ಪೋಷಕರು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಅವರು ‘ಅವರಿಗೆ ವಿಷಬಾಧೆ ನೀಡುವವರು ಇಸ್ಲಾಮಿಕ್ ಸ್ಟೇಟ್ ನಂತೆ ಇದ್ದಾರೆ’, ಈ ಹಿಂದೆ ಮಾರ್ಚ್ ೩ ರಂದು ಇರಾನ್ ರಾಷ್ಟ್ರಪತಿ ಇಬ್ರಾಹಿಂ ರಯಿಸ್ ಇವರು, ವಿಷ ನೀಡುವ ಕಾರ್ಯ ಇರಾನಿನ ಶತ್ರು ರಾಷ್ಟ್ರ ಮಾಡಿದ್ದು ಈ ಮೂಲಕ ದೇಶದಲ್ಲಿ ಭಯ ಮತ್ತು ಅಸುರಕ್ಷಕತೆಯ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನವಾಗಿದೆ ಎಂದು ದಾವೆ ಮಾಡಿದ್ದಾರೆ. ಇರಾನಿನ ಗೃಹ ಸಚಿವರು ಈ ಪ್ರಕರಣದ ವಿಚಾರಣೆ ನಡೆಸಲು ಆದೇಶ ನೀಡಿದ್ದಾರೆ.
Protests break out in Iran over schoolgirl illnesses https://t.co/18Y2UEA6mw pic.twitter.com/KM1IFa9lNh
— Reuters (@Reuters) March 4, 2023
೧. ವಿಷಬಾಧೆಯ ಹಿಂದೆ ದೇಶದಲ್ಲಿನ ಇಸ್ಲಾಮಿ ಕಟ್ಟರವಾದಿಗಳ ಕೈವಾಡವಿರುವುದೆಂದು ವಿರೋಧಿ ಪಕ್ಷ ಹೇಳುತ್ತಿದೆ.
೨. ಓರ್ವ ಹಿರಿಯ ಮೌಲ್ವಿ (ಇಸ್ಲಾಮಿನ ಧಾರ್ಮಿಕ ನಾಯಕ)ಯು, ಸರಕಾರದ ಹೇಳಿಕೆಯಿಂದ ಜನರಲ್ಲಿ ಸರಕಾರದ ಬಗೆಗಿನ ವಿಶ್ವಾಸ ಕುಂದಿದೆ. ಇದರಿಂದ ಜನರಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
೩. ಜಿನೇವಾದಲ್ಲಿ ಇತ್ತಿಚೆಗೆ ನಡೆದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿತ್ತು. ಇರಾನ್‌ನ ಶಿಕ್ಷಣದ ಕುರಿತು ಉಪಮಂತ್ರಿ ಆ ಸಮಯದಲ್ಲಿ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಯಲು ಇದನ್ನು ಮಾಡಲಾಗಿದೆ ಎಂದು ಒಪ್ಪಿಕೊಂಡರು. ಇದಾದ ಬಳಿಕ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.
೪. ವಿದ್ಯಾರ್ಥಿನಿಯರಿಗೆ ವಿಷಯ ನೀಡಿರುವ ಪ್ರಕರಣ ಮೊದಲು ಕಳೆದ ವರ್ಷ ನವೆಂಬರ್ ೩೦ ರಂದು ಬಹಿರಂಗವಾಗಿತ್ತು, ಆಗ ಕೊಮ್ ನಗರದ ೫೦ ಕ್ಕು ಹೆಚ್ಚಿನ ವಿದ್ಯಾರ್ಥಿನಿಯರಿಗೆ ವಿಷ ಬಾಧೆ ಆಗಿತ್ತು. ಅದರಲ್ಲಿನ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ‘ರೈಟರ್ಸ್ ‘ಈ ಅಂತರರಾಷ್ಟ್ರೀಯ ವಾರ್ತಾ ವಾಹಿನಿಯ ಪ್ರಕಾರ ದೇಶದಲ್ಲಿ ೩೧ರಲ್ಲಿ ೧೦ ಪ್ರಾಂತಗಳಲ್ಲಿ ೩೦ ಶಾಲೆಯಲ್ಲಿನ ವಿದ್ಯಾರ್ಥಿನಿಯರಿಗೆ ವಿಷ ನೀಡಲಾಗಿತ್ತು ಎಂದು ಹೇಳಿದೆ.