ರಾಷ್ಟ್ರಪತಿ ಭವನದಲ್ಲಿ ‘ಮೊಘಲ ಗಾರ್ಡನ್’ನ ಹೆಸರು ಈಗ ‘ಅಮೃತ ಉದ್ಯಾನ’ ಎಂದು ಬದಲಾವಣೆ !

ಕೇಂದ್ರದಲ್ಲಿನ ಭಾಜಪ ಸರಕಾರದ ಶ್ಲಾಘನೀಯ ನಿರ್ಣಯ !

ನವದೆಹಲಿ – ಇಲ್ಲಿಯ ರಾಷ್ಟ್ರಪತಿ ಭವನದ ಪರಿಸರದಲ್ಲಿ ನಿರ್ಮಿಸಿರುವ ಮೊಘಲ್ ಗಾರ್ಡನ್ ಹೆಸರು ಬದಲಿಸಿ ಈಗ ಅಮೃತ ಉದ್ಯಾನ ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ಸಾರಿ ಕೂಡ ಈ ಉದ್ಯಾನ ಜನವರಿ ೩೧ ರಿಂದ ಮಾರ್ಚ್ ೨೬ ರ ವರೆಗೆ ಸಾಮಾನ್ಯ ನಾಗರಿಕರಿಗಾಗಿ ತೆರೆಯಲಿದೆ. ಈ ಉದ್ಯಾನದಲ್ಲಿನ ವಿವಿಧ ಪುಷ್ಪಗಳ ಸೌಂದರ್ಯ ನೋಡುವುದಕ್ಕೆ ಪ್ರತಿವರ್ಷ ದೇಶ ವಿದೇಶದ ಜನರು ಇಲ್ಲಿಗೆ ಬರುತ್ತಾರೆ ೧೫ ಎಕರೆ ಪರಿಸರದಲ್ಲಿ ಹರಡಿರುವ ಉದ್ಯಾನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದೆ.

ಅಮೃತ ಉದ್ಯಾನದಲ್ಲಿ ೧೩೮ ರೀತಿಯ ಗುಲಾಬಿ, ೧೦ ಸಾವಿರಕ್ಕಿಂತಲೂ ಹೆಚ್ಚಿನ ಟ್ಯೂಲಿಪ ಮತ್ತು ಇತರ ವಿವಿಧ ಬಗೆಯ ೭೦ ಪುಷ್ಪಗಳ ಗಿಡಗಳು ಇದೆ. ಈ ಉದ್ಯಾನ ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಇವರು ಉದ್ಯಾನ ಸರ್ವಸಾಮಾನ್ಯ ನಾಗರಿಕರಿಗಾಗಿ ತೆರೆದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿವರ್ಷ ವಸಂತ ಋತುವಲ್ಲಿ ಜನತೆಗಾಗಿ ತೆರೆಯುತ್ತಾರೆ.

ಸಂಪಾದಕೀಯ ನಿಲುವು

ಮೊಘಲರ ಯಾವುದೇ ಗುರುತು ಈ ದೇಶದಲ್ಲಿ ಬಾಕಿ ಉಳಿಸಬಾರದು, ಹೀಗೆ ಹಿಂದೂಗಳಿಗೆ ಅನಿಸುತ್ತದೆ !