ಸಂಪೂರ್ಣ ಜೋಶಿಮಠ ಗ್ರಾಮದ ಸ್ಥಳಾಂತರ ಮಾಡುವುದು ಅಯೋಗ್ಯ ! – ಸಮೀಕ್ಷಾ ತಂಡ

ನವ ದೆಹಲಿ – ಉತ್ತರಖಂಡದಲ್ಲಿನ ಜೋಶಿಮಠ ಗ್ರಾಮವು ಪ್ರಸ್ತುತ ಭೂಕುಸಿತ ಎದುರಿಸುತ್ತಿದೆ; ಆದರೆ ಸಂಪೂರ್ಣ ಜೋಶಿಮಠ ಗ್ರಾಮವನ್ನೇ ಸ್ಥಳಾಂತರಗೊಳಿಸುವುದು ಸರಿಯಲ್ಲ ಎಂದು ಜೋಶಿಮಠಕ್ಕೆ ಭೇಟಿ ನೀಡಿರುವ ಸಮೀಕ್ಷಾ ತಂಡವು ಅಭಿಪ್ರಾಯ ವ್ಯಕ್ತಪಡಿಸಿದೆ. ಯಾವುದೇ ನಿಖರ ನಿರ್ಣಯದವರೆಗೆ ತಲುಪುವ ಮುನ್ನ ಈ ತಂಡ ಜೋಶಿಮಠದ ಮತ್ತೊಮ್ಮೆ ಸಮೀಕ್ಷೆ ನಡೆಸುವುದು. ಈ ಸಮೀಕ್ಷೆಯ ತಂಡದಲ್ಲಿ ಶ್ರೀನಗರದ ಎಚ್.ಎನ್.ಬಿ. ಗಢವಾಲ್ ಮಧ್ಯವರ್ತಿ ವಿಶ್ವವಿದ್ಯಾಲಯದ ಭೂಗೋಳ ವಿಭಾಗದ ಪ್ರಾ. ಮೋಹನ ಸಿಂಹ ಪನವಾರ , ಭಾರತೀಯ ಭೂವಿಜ್ಞಾನಿಕ ಸಮೀಕ್ಷಾ ವಿಭಾಗದ ಉಪಮಾಹಾ ಸಂಚಾಲಕ ಡಾ. ಸೆಂತಿಎಲ್ ಮತ್ತು ದೆಹಲಿ ವಿದ್ಯಾಪೀಠದ ಪ್ರಾ. ತೇಜವೀರ ರಾಣ ಇವರನ್ನು ಸದಸ್ಯರೆಂದು ನೇಮಕಗೊಳಿಸಲಾಗಿತ್ತು. ಈ ತಂಡದಿಂದ ಜೋಶಿಮಠ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಭೂಮಿ ಕುಸಿತದ ಶಾಸ್ತ್ರೀಯ ಮತ್ತು ಸಾಮಾಜಿಕ ಆಧಾರವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ.

೧. ಪ್ರಾ. ಪನವಾರ ಇವರು, ಸಮೀಕ್ಷೆಯ ದೃಷ್ಟಿಕೋನದಿಂದ ಜೋಶಿಮಠ ಗ್ರಾಮದ ಐದು ವಿಭಾಗವಾಗಿ ವಿಂಗಡಿಸಲಾಗಿದೆ. ಇದರಲ್ಲಿ ಉಚ್ಚ ಪ್ರಭಾವಿತ, ಮಧ್ಯಮ ಪ್ರಭಾವಿತ, ಅಲ್ಪ ಪ್ರಭಾವಿತ, ಸುರಕ್ಷಿತ ಕ್ಷೇತ್ರ ಮತ್ತು ಹೊರ ಕ್ಷೇತ್ರ ಇವುಗಳ ಸಮಾವೇಶವಿದೆ ಎಂದು ಹೇಳಿದರು.

೨. ಕಳೆದ ೫೦ ವರ್ಷಗಳಲ್ಲಿ ಜೋಶಿಮಠ ಈ ಗ್ರಾಮ ಹೇಗೆ ಬದಲಾಯಿತು ?, ಅದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಲಾಗುತ್ತಿದೆ. ಈ ಕಾಲಾವಧಿಯಲ್ಲಿ ಆಗಿದ ಭೂಕುಸಿತದ ಘಟನೆಯ ಅಭ್ಯಾಸ ಮಾಡಲಾಗುತ್ತಿದೆ. ಹಾಗೂ ಕಟ್ಟಡ ಕಾಮಗಾರಿಯ ಅಭ್ಯಾಸ ಮಾಡಲಾಗುತ್ತಿದೆ.

೩. ಜೋಶಿಮಠದಲ್ಲಿನ ಭೂಕುಸಿತಕ್ಕೆ ಕಾರಣವಾಗಿರುವ ಘಟಕಗಳನ್ನು ಹುಡುಕುವುದಕ್ಕಾಗಿ `ರಿಮೋಟ್ ಸೆನ್ಸಿಂಗ್’ನಿಂದ ಉಪಲಬ್ಧ ವಿರುವ ಉಪಗ್ರಹದ ಛಾಯಾಚಿತ್ರದ ಅಭ್ಯಾಸ ಕೂಡ ಮಾಡಲಾಗುತ್ತಿದೆ. ನಂತರ ಸಂಪೂರ್ಣ ವರದಿ ಸಿದ್ದಪಡಿಸಿ ಅದನ್ನು ಸರಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಪ್ರಾ. ಪನವಾರ ಇವರು ಹೇಳಿದರು.