೨೦೦೦ ರೂಪಾಯಿಯ ನೋಟಿನಿಂದಾಗಿ ಕಪ್ಪು ಹಣ ಹೆಚ್ಚಾಗಿರುವುದರಿಂದ ಅವುಗಳನ್ನು ಅಮಾನ್ಯೀಕರಣಗೊಳಿಸಬೇಕು

ಭಾಜಪದ ಶಾಸಕರಾದ ಸುಶೀಲ ಮೋದಿಯವರ ಒತ್ತಾಯ

ಭಾಜಪದ ಶಾಸಕರಾದ ಸುಶೀಲ ಮೋದಿ

ನವದೆಹಲಿ – ಅಮೇರಿಕಾ, ಚೀನಾ, ಜಪಾನ್, ಇಂತಹ ವಿಕಸಿತ ದೇಶಗಳಲ್ಲಿ ಎಲ್ಲಿಯೂ ೧೦೦ ರ ಮುಂದಿನ ಚಲನಗಳು ಇಲ್ಲ. ಆದರೆ ಭಾರತದಲ್ಲಿ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಏನಿದೆ? ಭಾರತದಲ್ಲಿ ೧ ಸಾವಿರ ರೂಪಾಯಿ ಚಲಾವಣೆ. ಅಮಾನ್ಯೀಕರಣಗೊಳಿಸಲಾಯಿತು. ಆದ್ದರಿಂದ ಈಗ ೨ ಸಾವಿರ ರೂಪಾಯಿ ನೋಟಿನ ಅವಶ್ಯಕತೆ ಇಲ್ಲ.೨ ಸಾವಿರ ರೂಪಾಯಿ ನೋಟಿನಿಂದ ಕಪ್ಪು ಹಣದಲ್ಲಿ ಹೆಚ್ಚಳವಾಗಿದೆ, ಎಂದು ಭಾಜಪದ ರಾಜ್ಯಸಭೆಯ ಶಾಸಕರಾದ ಸುಶೀಲ ಮೋದಿಯವರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ. ಅವರು ೨ ಸಾವಿರ ರೂಪಾಯಿ ಚಲಾವಣೆ ಅಮಾನ್ಯೀಕರಣಗೊಳಿಸಲು ಒತ್ತಾಯಿಸಿದ್ದಾರೆ.

೧. ಯಾವ ಜನರ ಹತ್ತಿರ ೨ ಸಾವಿರ ರೂಪಾಯಿ ನೋಟುಗಳಿವೆಯೋ, ಅವರು ಬ್ಯಾಂಕಿನಿಂದ ಈ ನೋಟುಗಳನ್ನು ಬದಲಾಯಿಸಿ ಕೊಳ್ಳಲು ಸೌಲಭ್ಯ ಮಾಡಿಕೊಡಬೇಕು ಮತ್ತು ನಿಗದಿತ ಕಾಲಾವಧಿಯ ಬಳಿಕ ಮಾರುಕಟ್ಟೆಯಿಂದ ೨ ಸಾವಿರ ರೂಪಾಯಿ ಚಲಾವಣೆ ಸ್ಥಗಿತಗೊಳಿಸಬೇಕು

೨. ಪ್ರಧಾನಿಮಂತ್ರಿ ಮೋದಿಯವರು ಕಪ್ಪು ಹಣ ನಾಶ ಮಾಡಲು ನವೆಂಬರ್ ೮.೨೦೧೬ ರಂದು ನೋಟನ್ನು ಅಮಾನ್ಯೀಕರಣಗೊಳಿಸಲು ನಿರ್ಣಯ ತೆಗೆದುಕೊಂಡ ನಂತರ ೫೦೦ ರೂಪಾಯಿಯ ಹೊಸ ರೂಪದ ನೋಟು ಮತ್ತು ೨ ಸಾವಿರ ರೂಪಾಯಿಯ ಹೊಸ ನೋಟು ಮುದ್ರಿಸಲಾಯಿತು. ಸರಕಾರ ನೀಡಿರುವ ಮಾಹಿತಿಯನುಸಾರ ಕೆಲವು ಸಮಯದ ನಂತರ ಭಾರತೀಯ ರಿಸರ್ವ ಬ್ಯಾಂಕ್ ೨ ಸಾವಿರ ರೂಪಾಯಿ ನೋಟಿನ ಮುದ್ರಣ ನಿಲ್ಲಿಸಿದೆ.