* ಹಾಸಿಗೆ, ಕಪಾಟು, ಬಟ್ಟೆ, ವಿದ್ಯುತ್ ಸಂಪರ್ಕವಿಲ್ಲದ ಕೂಲರ್‌ಗಳಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ !* ವಾರದಲ್ಲಿ ೧೧ ಬಾರಿ ಬೆಂಕಿ ! |
ಹಲ್ದವಾನಿ (ಉತ್ತರಾಖಂಡ) – ಇತ್ತೀಚೆಗೆ ನಡೆದ ಚಂದ್ರಗ್ರಹಣದ ನಂತರ ಇಲ್ಲಿ ಮಹಾನಗರಪಾಲಿಕೆಯ ಸಮೀಪದಲ್ಲಿರುವ ಕಮಲ ಪಾಂಡೆ ಇವರ ಮನೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಅವರ ಕುಟುಂಬದವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪಾಂಡೆ ಇವರ ಮನೆಯಲ್ಲಿ ಕಳೆದ ವಾರದಿಂದ ಎಲ್ಲಿಯಾದರೂ, ಯಾವಾಗಲಾದರೂ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ. ಒಂದು ಬಾರಿ ಮನೆಯಲ್ಲಿರುವ ಮುಚ್ಚಿರುವ ಬೀರುವಿನಲ್ಲಿ ಬೆಂಕಿ ಹೊತ್ತಿಕೊಂಡರೆ ವ್ಯಕ್ತಿಯು ಮಲಗಿರುವ ಮಂಚದಿಂದ ಹೊಗೆ ಬರತೊಡಗುತ್ತದೆ, ಇನ್ನೂ ಕೆಲವು ಬಾರಿ ಒಣಗಿಸಲು ಹಾಕಿರುವ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಬೆಂಕಿ ಹೊತ್ತಿಕೊಳ್ಳುವ ಈ ಘಟನೆಗಳಿಂದಾಗಿ ಈ ಕುಟುಂಬದವರೆಲ್ಲರೂ ಒಟ್ಟಿಗೆ ಮಲಗುವ ಪರಿಸ್ಥಿತಿ ಉಂಟಾಗಿದೆ.
ಮನೆಯಲ್ಲಿನ ವಿದ್ಯುತ್ ವಯರಿಂಗ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದ ನಂತರವೂ ಏನೂ ಪ್ರಯೋಜನವಾಗಿಲ್ಲ !
ಪ್ರಾರಭದಲ್ಲಿ ಪಾಂಡೆ ಕುಟುಂಬದವರು, ‘ಅರ್ಥಿಂಗ್’ನಿಂದ ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿರಬಹುದು ಎಂದು ಭಾವಿಸಿದರು. ಆದ್ದರಿಂದ ವಿದ್ಯುತ್ ಇಲಾಖೆಯವರು ಅವರ ಮನೆಯಲ್ಲಿ ಅರ್ಥಿಂಗ್‌ನ ಕೆಲಸವನ್ನು ಮಾಡಿದರು. ಹಳೆಯ ವಿದ್ಯುತ್ ಜೋಡಣೆಯನ್ನು ಕತ್ತರಿಸಿದರು. ಇದರೊಂದಿಗೆ ಮನೆಯಲ್ಲಿನ ಸಂಪೂರ್ಣ ವಿದ್ಯುತ್ ವಯರಿಂಗ್ ಅನ್ನೂ ಬದಲಾಯಿಸಿದರು; ಆದರೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳೂ ನಿಲ್ಲಲಿಲ್ಲ.
ವಿದ್ಯುತ್ ಜೋಡಣೆಯಿಲ್ಲದಿರುವ ಕೂಲರ್ ಗೆ ಕೂಡ ಇದ್ದಕ್ಕಿದ್ದಂತೆ ಬೆಂಕಿ ! – ಕಮಲ ಪಾಂಡೆ
ಈ ಬಗ್ಗೆ ಕಮಲ ಪಾಂಡೆ ಇವರ ಪತಿ ಚಂದ್ರಾ ಪಾಂಡೆ ಅವರು, ವಿದ್ಯುತ್ ಜೋಡಣೆ ಇಲ್ಲದಿರುವ ಕೂಲರ್‌ಗೂ ಬೆಂಕಿ ಹೊತ್ತಿಕೊಂಡಿದೆ. ಇದರೊಟ್ಟಿಗೆ ಬಂದ್ ಇರುವ ಬೀರುವಿಗೂ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕಳೆದ ವಾರಗಳಲ್ಲಿ ನಮ್ಮ ಮನೆಯಲ್ಲಿ ಒಂದರ ಹಿಂದೆ ಒಂದು ಹೀಗೆ ೧೧ ಬರಿ ಬೆಂಕಿ ಹೊತ್ತಿಕೊಂಡಿತು. ನಾವು ಕಳೆದ ೭೦ ವರ್ಷಗಳಿಂದ ಈ ಮನೆಯಲ್ಲಿರುತ್ತಿದ್ದೇವೆ; ಆದರೆ ಇಲ್ಲಿಯವರೆಗೆ ಇಂತಹ ಘಟನೆಯು ನಡೆದಿಲ್ಲ. ‘ಇದೇನು ನಡೆಯುತ್ತಿದೆ?’, ಎಂಬುದು ನಮ್ಮಲ್ಲಿ ಯಾರಿಗೂ ತಿಳಿಯುತ್ತಿಲ್ಲ. ಇವೆಲ್ಲ ಘಟನೆಗಳಿಂದ ನಮ್ಮ ಕುಟುಂಬವು ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತಿದೆ. ಇದೆಲ್ಲವನ್ನು ನೋಡಿ ನೆರೆಹೊರೆಯವರಿಗೂ ಆಶ್ಚರ್ಯವೆನಿಸುತ್ತಿದೆ ಎಂದು ಹೇಳಿದರು.
ಚಂದ್ರಗ್ರಹಣದಿಂದ ನಿರಂತರ ನಡೆಯುತ್ತಿರುವ ಘಟನೆಗಳು ! – ದೀಪ್ತಿ ತ್ರಿಪಾಠಿ
ಕಮಲ ಪಾಂಡೆ ಅವರ ಮಗಳು ದೀಪ್ತಿ ತ್ರಿಪಾಠಿ ಅವರು, ಚಂದ್ರಗ್ರಹಣದ ದಿನದಿಂದ ಇದು ನಿರಂತರ ನಡೆಯುತ್ತಿದೆ ಎಂದು ಹೇಳಿದರು. ಕುಟುಂಬದ ಸದಸ್ಯರು ಒಂದು ಕೋಣೆಯಲ್ಲಿನ ಬೆಂಕಿಯನ್ನು ಆರಿಸಲು ಹೋಗುತ್ತಾರೆ, ಅಷ್ಟರಲ್ಲಿ ಮತ್ತೊಂದು ಕೋಣೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿದರು.
ಕಾಲುವೆಯ ಕಾಮಗಾರಿ ಪ್ರಾರಂಭವಾದಾಗಿನಿಂದ ಮನೆಗೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ! – ಪಾಂಡೆ ಕುಟುಂಬದವರು
ಪಾಂಡೆ ಕುಟುಂಬದ ಸದಸ್ಯರಿಗೆ, ಅವರ ಮನೆಯ ಪಕ್ಕದಲ್ಲಿ ಕಾಲುವೆ ಹರಿಯುತ್ತಿದೆ. ಅದರ ಮೇಲೆ ಮುಚ್ಚಳ ಕಾರ್ಯಕ್ಕಾಗಿ ಕೆಲ ದಿನಗಳಿಂದ ಕೆತ್ತುವ ಕೆಲಸ ಮಾಡಲಾಗಿದೆ. ಈ ಕೆತ್ತನೆ ಕೆಲಸ ಪ್ರಾರಂಭವಾದಾಗಿನಿಂದ ಮನೆಗೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ನಡೆಯುತ್ತಿವೆ ಎಂದು ಅವರ ಅಭಿಪ್ರಾಯವಾಗಿದೆ.
ಸಿಟಿ ಮ್ಯಾಜಿಸ್ಟ್ರೇಟ್ ನಿಂದ ಪೊಲೀಸ್ ತನಿಖೆಯ ಆದೇಶ !
ನಿಗೂಢ ರೀತಿಯಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಹಲ್ದವಾನಿ ಸಿಟಿ ಮ್ಯಾಜಿಸ್ಟ್ರೇಟ್ ರಿಚಾ ಸಿಂಗ ಸ್ಥಳಕ್ಕೆ ಆಗಮಿಸಿದರು. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
ಸಂಪಾದಕೀಯ ನಿಲುವುಈ ಘಟನೆಯ ಬಗ್ಗೆ ತಥಾಕಥಿತ ವಿಜ್ಞಾನವಾದಿಗಳು, ಬುದ್ಧಿವಾದಿಗಳು, ಅಂಧಶ್ರದ್ಧಾ ನಿರ್ಮೂಲನೆಯವರು ಇವರೆಲ್ಲರಿಗೂ ಏನು ಹೇಳುವುದಿದೆ ? |