ಚೀನಾ ತನ್ನ ಎರಡನೇಯ ಬೇಹುಗಾರಿಕೆ ನಡೆಸುವ ಹಡಗನ್ನು ಹಿಂದೂ ಮಹಾಸಾಗರಕ್ಕೆ ಕಳುಹಿಸಿದೆ !

ಭಾರತ ತನ್ನ ಕ್ಷಿಪಣಿ ಪರೀಕ್ಷಣೆ ನಡೆಸಲಿದೆ

ಬೀಜಿಂಗ (ಚೀನಾ) – ಚೀನಾ ಹಿಂದೂ ಮಹಾಸಾಗರದಲ್ಲಿ ತನ್ನ ಎರಡನೇಯ ಬೇಹುಗಾರಿಕೆ ನಡೆಸುವ ಹಡಗನ್ನು ಕಳುಹಿಸಿದೆ. ಈ ಹಿಂದೆಯೂ ಚೀನಾ ಬೇಹುಗಾರಿಕೆ ಹಡಗನ್ನು ಕಳುಹಿಸಿದ್ದರಿಂದ ಭಾರತವು ಬಂಗಾಳ ಉಪಸಾಗರದಲ್ಲಿ ನಡೆಸಲು ನಿಯೋಜಿಸಲಾಗಿದ್ದ ಅಗ್ನಿ ಕ್ಷಿಪಣಿಯ ಪರೀಕ್ಷಣೆಯನ್ನು ರದ್ದು ಪಡಿಸಿತ್ತು. ಈಗ ಭಾರತವು ಪುನಃ ಮತ್ತೊಮ್ಮೆ ಈ ಪರೀಕ್ಷಣೆಯನ್ನು ನಡೆಸಲು ಸಿದ್ಧತೆ ನಡೆಸುತ್ತಿರುವುದು ಗಮನಕ್ಕೆ ಬಂದ ಕೂಡಲೇ ಚೀನಾ ಎರಡನೇಯ ಬೇಹುಗಾರಿಕೆ ಹಡಗನ್ನು ಕಳುಹಿಸಿದೆ. ಚೀನಾ ಈ ಹಿಂದೆಯೂ ‘ಯೂಆನ ವಾಂಗ ೬’ ಈ ಹಡಗನ್ನು ಹಿಂದೂ ಮಹಾಸಾಗರಕ್ಕೆ ಕಳುಹಿಸಿತ್ತು. ಈಗ ‘ಯೂಆನ ವಾಂಗ-೫’ ಈ ಹಡಗನ್ನು ಕಳುಹಿಸಿದೆ.

ಭಾರತ ನವೆಂಬರ ೨೩ ಅಥವಾ ೨೫ ರಂದು ಅಗ್ನಿ ಕ್ಷಿಪಣಿ ಪರೀಕ್ಷಣೆಯನ್ನು ನಡೆಸುವ ಸಾಧ್ಯತೆಯಿದೆ. ಈ ಕ್ಷಿಪಣಿಯ ಕ್ಷಮತೆ ೨ ಸಾವಿರ ಕಿಲೋಮೀಟರಗಳಷ್ಟು ಇರುವುದಾಗಿ ಹೇಳಲಾಗಿದೆ. ಈ ಕ್ಷಿಪಣಿಯಾಸ್ತ್ರವನ್ನು ಜಲಾಂತರ್ಗಾಮಿ ನೌಕೆಯಿಂದ ಗುರಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಂಪಾದಕೀಯ ನಿಲುವು

ಇಂತಹ ಕಪಟಿ ಚೀನಾದೊಂದಿಗೆ ಸರಕಾರ ಎಲ್ಲ ರೀತಿಯ ಸಂಬಂಧವನ್ನು ಕಡಿದುಕೊಂಡು ಅದರೊಂದಿಗೆ ಶತ್ರುವಿನಂತೆ ನಡೆದುಕೊಳ್ಳಬೇಕು ಮತ್ತು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಪಾಠ ಕಲಿಸಬೇಕು !