ಕೇದಾರನಾಥದಲ್ಲಿ ಖಾಸಗಿ ಹೆಲಿಕಾಪ್ಟರ ಪತನ, ಚಾಲಕ ಸಹಿತ ೭ ಜನರ ಸಾವು

ಡೆಹರಾಡೂನ (ಉತ್ತರಾಖಂಡ) – ಕೇದಾರನಾಥದಿಂದ ಗುಪ್ತಕಾಶಿಗೆ ಮರಳುತ್ತಿದ್ದ ಒಂದು ಖಾಸಗಿ ಹೆಲಿಕಾಪ್ಟರ ಪತನಗೊಂಡಿದ್ದು, ಇದರಲ್ಲಿ ಚಾಲಕ ಸಹಿತ ೭ ಜನರು ಸಾವನ್ನಪ್ಪಿದ್ದಾರೆ. ಕೇದಾರನಾಥದಿಂದ ೨ ಕಿ.ಮೀ ಅಂತರದಲ್ಲಿರುವ ಗರುಡಚಟ್ಟಿಯಲ್ಲಿ ಈ ಅಪಘಾತವಾಯಿತು. ಈ ಹೆಲಿಕಾಪ್ಟರ ‘ಆರ್ಯನ ಹೆಲಿ’ ಈ ಖಾಸಗಿ ಕಂಪನಿಯದಾಗಿತ್ತು ಎಂದು ಹೇಳಲಾಗುತ್ತಿದೆ. ಈ ಕಂಪನಿ ಉತ್ತರಕಾಶಿಯದಾಗಿದೆ. ಈ ಕಂಪನಿ ಕೇದಾರನಾಥ ದರ್ಶನಕ್ಕಾಗಿ ಭಕ್ತರನ್ನು ಕರೆದುಕೊಂಡು ಹೋಗುತ್ತದೆ. ಕೆಟ್ಟ ಹವಾಮಾನದ ಕಾರಣದಿಂದ ಈ ಅಪಘಾತವಾಗಿದೆಯೆಂದು ತಿಳಿದು ಬಂದಿದೆ.