ನಿಯಮಿತವಾಗಿ ವ್ಯಾಯಾಮ ಮಾಡಲೇಬೇಕು !

ವೈದ್ಯ ಮೇಘರಾಜ ಪರಾಡಕರ್

‘ನಿಯಮಿತ ವ್ಯಾಯಾಮ ಮಾಡುವುದರಿಂದ ಶಾರೀರಿಕ ಕ್ಷಮತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸಿನ ಕ್ಷಮತೆಯೂ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮ ಮಾಡುವವರ ಮನಸ್ಸು ಒತ್ತಡವನ್ನು ಸಹಿಸಲು ಸಕ್ಷಮವಾಗುತ್ತದೆ. ವ್ಯಾಯಾಮ ಮಾಡುವವರಿಗೆ ವಾತಾವರಣದಲ್ಲಿ ಅಥವಾ ಆಹಾರದಲ್ಲಿ ಬದಲಾವಣೆಯಾದಾಗ ಯಾವುದೇ ಪರಿಣಾಮ ಆಗುವುದಿಲ್ಲ. ವ್ಯಾಯಾಮ ಮಾಡಿ ಶರೀರ ಸದೃಢವಾಗಿಟ್ಟುಕೊಂಡರೇ ಸಾಂಕ್ರಾಮಿಕ ರೋಗಗಳನ್ನು ಪ್ರತಿರೋಧಿಸಲು ಸಹಾಯವಾಗುತ್ತದೆ. ವ್ಯಾಯಾಮ ಮಾಡಲು ಯಾವುದೇ ಖರ್ಚು ಬರುವುದಿಲ್ಲ. ರೋಗವನ್ನು ನಿವಾರಿಸುವ ಉಚಿತ ಚಿಕಿತ್ಸೆಯು ಪ್ರತಿಯೊಬ್ಬರಿಗೆ ಸಹಜವಾಗಿ ಸಾಧ್ಯವಿರುವಾಗ ಕೇವಲ ‘ಆಲಸ್ಯ’ ಈ ಸ್ವಭಾವದೋಷದಿಂದಾಗಿ ಅದು ನಿಯಮಿತವಾಗಿ ಮಾಡಲಾಗುತ್ತಿಲ್ಲ ! ಇಂದಿನಿಂದ ನಿಯಮಿತವಾಗಿ ವ್ಯಾಯಾಮ ಮಾಡೋಣ !’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೭.೨೦೨೨)