೧೦ ಆಗಸ್ಟ್ ವರೆಗೆ ನೂಪುರ ಶರ್ಮಾ ಬಂಧನಕ್ಕೆ ತಡೆ

ಹೊಸದೆಹಲಿ – ಭಾಜಪದಿಂದ ಅಮಾನತ್ತುಗೊಂಡಿರುವ ವಕ್ತಾರೆ ನೂಪುರ ಶರ್ಮಾ ಇವರು ಸುದ್ದಿವಾಹಿನಿಯ ಚರ್ಚಾಕೂಟದಲ್ಲಿ ಮಹಮ್ಮದ್ ಪೈಗಂಬರರ ಬಗ್ಗೆ ನೀಡಿರುವ ತಥಾಕಥಿತ ಅವಮಾನಕರ ಹೇಳಿಕೆಯಿಂದ ಅವರ ವಿರುದ್ಧ ದೇಶದ ೯ ಪೋಲಿಸ್ ಠಾಣೆಗಳಲ್ಲಿ ದೂರೂ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಶರ್ಮಾ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಿ ಈ ಎಲ್ಲಾ ದೂರುಗಳನ್ನು ದೆಹಲಿಗೆ ವರ್ಗಾಯಿಸಬೇಕೆಂದು ಕೇಳಿಕೊಂಡಿದ್ದರು. ಈ ಮನವಿಯ ಮೇಲೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಆಗಸ್ಟ್ ೧೦ ರ ವರೆಗೆ ಅವರ ಬಂಧನಕ್ಕೆ ತಡೆ ಹಾಕಿದೆ. ಹಿಂದೊಮ್ಮೆಯೂ ಶರ್ಮಾ ಇವರು ಜುಲೈ ೧ ರಂದು ಇದೇ ರೀತಿಯ ಮನವಿ ದಾಖಲಿಸಿದ್ದರು. ಆದರೆ ನ್ಯಾಯಾಲಯವು ಅದನ್ನು ಕೇಳಲು ನಿರಾಕರಿಸಿತ್ತು. ನ್ಯಾಯಾಲಯವು ‘ನಿಮ್ಮಿಂದ ದೇಶದ ಪರಿಸ್ಥಿತಿ ಹದಗೆಟ್ಟಿದೆ, ನೀವು ತಡವಾಗಿ ಕ್ಷಮೆಯಾಚಿಸಿದ್ದೀರಿ, ಅದೂ ಸಹ ಯಾರದೇ ಭಾವನೆ ನೋವಾಗಿದ್ದಲ್ಲಿ, ನಾನು ಈ ಹೇಳಿಕೆ ಹಿಂಪಡೆಯುತ್ತೇನೆ, ಎಂಬಂತೆ ಕೇಳಿದ್ದೀರಿ. ನೀವು ರಾಷ್ಟ್ರೀಯ ವಾಹಿನಿಗಳ ಮೇಲೆ ಹೋಗಿ ಸಂಪೂರ್ಣ ದೇಶದ ಕ್ಷಮೆ ಯಾಚಿಸಬೇಕು’ ಎಂದು ಹೇಳಿತ್ತು.