ಕರ್ನಾಟಕದಲ್ಲಿ ಮಹಾವಿದ್ಯಾಲಯದ ಪರಿಸರದ ಸುತ್ತಮುತ್ತ ನೂರಾರು ಹಿಂದೂ ಯುವಕರು ನೆರೆದಿದ್ದಾಗ ಬುರ್ಖಾಧಾರಿ ವಿದ್ಯಾರ್ಥಿಯೊಬ್ಬಳು ‘ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗಿದಳು. ಇದರಿಂದ ಮೂಲಭೂತವಾದಿಗಳು ಪುಳಕಿತಗೊಂಡಿದ್ದು ‘ಜಮಿಯತ್ ಉಲೇಮಾ-ಎ-ಹಿಂದ್ ಎಂಬ ಮತಾಂಧರ ಸಂಸ್ಥೆಯಿಂದ ಆಕೆಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಹೀಗೆ ಮಾಡುವ ಮೂಲಕ ಜಮೀಯತ್ ನಂತಹ ಸಂಘಟನೆಗಳು ವಿದ್ಯಾರ್ಥಿದೆಶೆಯಿಂದಲೇ ಮುಸಲ್ಮಾನ ಮಕ್ಕಳಲ್ಲಿ ಮೂಲಭೂತವಾದವನ್ನು ಕಾಪಾಡಲು ನೇರವಾಗಿ ಪ್ರೋತ್ಸಾಹಿಸುತ್ತಿವೆ. ವಾಸ್ತವದಲ್ಲಿ ಈ ವಿದ್ಯಾರ್ಥಿನಿಯರು ಯಾವುದೇ ಭಯವಿಲ್ಲದೆ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು ? ಅದೇ ಪರಿಸ್ಥಿತಿ ವ್ಯತಿರಿಕ್ತವಾಗಿದ್ದರೆ ? ಅಂದರೆ ಒಂಟಿ ಹಿಂದೂ ಹುಡುಗಿ ಮತ್ತು ಮತಾಂಧ ಹುಡುಗರ ಗುಂಪು ಇದ್ದಿದ್ದರೆ, ಆ ಹುಡುಗಿಗೆ ಏನಾಗಬಹುದಿತ್ತು, ಎಂಬುದರ ವಿಚಾರ ಮಾಡದಿರುವುದೇ ಒಳ್ಳೆಯದು ! ಸಂಬಂಧಪಟ್ಟ ಮತಾಂಧ ಯುವತಿ ರಾತ್ರೋರಾತ್ರಿ ಮತಾಂಧರ ಕೊರಳಿನ ತಾಯಿತವಾದಳು; ಆದರೆ ಈ ಘಟನೆಯ ಎರಡನೇ ಭಾಗವೆಂದರೆ, ಹಿಂದೂ ವಿದ್ಯಾರ್ಥಿಗಳು ಈ ಯುವತಿಯ ಹತ್ತಿರವೂ ಹೋಗಲಿಲ್ಲ ಅಥವಾ ಅವಳನ್ನು ಯಾವುದೇ ರೀತಿಯಲ್ಲಿ ನೋಯಿಸಲಿಲ್ಲ, ಯಾರೂ ಈ ಅಂಶಗಳ ಬಗ್ಗೆ ಯೋಚಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಇಡೀ ಘಟನೆಯು ಹಿಂದೂ ಸಂಸ್ಕೃತಿ ಮತ್ತು ಇಸ್ಲಾಮಿಕ್ ಸಿದ್ಧಾಂತದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಮುಂಬಯಿಯ ಆಜಾದ್ ಮೈದಾನದಲ್ಲಿ ರಾಝಾ ಅಕಾಡೆಮಿಯಿಂದ ನಡೆದ ಗಲಭೆಯಲ್ಲಿ ಹಿಂದೂ ಮಹಿಳಾ ಪೊಲೀಸರ ಮಾನಭಂಗ ಮಾಡಲಾಯಿತು. ಇದನ್ನು ಹಿಂದೂ ಸಮಾಜ ಎಂದಿಗೂ ಮರೆಯುವುದಿಲ್ಲ.
‘ಹಿಜಾಬ್ ಧರಿಸುವುದು, ನಮ್ಮ ಹಕ್ಕಾಗಿದೆ, ಎಂದು ಹೇಳುವುದು ಒಂದು ನಿಮಿತ್ತವಾಗಿದ್ದು ನಾಳೆ ಅದೇ ಮೂಲಭೂತವಾದಿಗಳು ಬುರ್ಖಾಕ್ಕಾಗಿ ಒತ್ತಾಯಿಸಬಹುದು, ಮುಂದೆ ಶಾಲೆಯಲ್ಲಿ ನಮಾಜ್‌ಗೆ ಒತ್ತಾಯಿಸುವರು ಮತ್ತು ಇನ್ನೂ ಮುಂದೆ ಹೋಗಿ ಷರಿಯತ ಪ್ರಕಾರ ಎಲ್ಲವನ್ನೂ ಮಾಡಿ, ಎಂದು ಒತ್ತಾಯಿಸಬಹುದು ! ಯಾವುದೇ ದೇಶದಲ್ಲಿ ಮತಾಂಧರ ಸಂಖ್ಯೆ ಹೆಚ್ಚಾದರೆ ಕ್ರಮೇಣವಾಗಿ ಹೇಗೆ ಅವರು ಇತರ ಧರ್ಮಗಳ ಮೇಲೆ ಇಸ್ಲಾಂನ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಾರೆ, ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಸೀರೆ ಹಿಂದೂ ಸಂಸ್ಕೃತಿಯ ಗುರುತು !
ಹಿಜಾಬ್ ಅನ್ನು ಬೆಂಬಲಿಸಿ, ಪ್ರಗತಿಪರರು ‘ಹೇಗೆ ಸೀರೆ ಉಡುವುದು ಅಥವಾ ಕುಂಕುಮ ಹಚ್ಚಿಕೊಳ್ಳುವ ನಡೆಯುತ್ತದೆಯೋ ಅದೇ ರೀತಿಯಲ್ಲಿ ಹಿಜಾಬ್ ಕೂಡಾ ನಡೆಯಬೇಕು, ಎಂದು ಹೇಳಲಾಗುತ್ತಿದೆ. ‘ಹಿಂದೂ ಮಹಿಳೆಯರು ತಮ್ಮ ತಲೆಯ ಮೇಲೆ ಸೆರಗನ್ನು ಹಾಕಿಕೊಳ್ಳುತ್ತಾರೆ, ಅದು ಹೇಗೆ ನಡೆಯುತ್ತದೆ ?, ಅದಕ್ಕೂ ಆಕ್ಷೇಪಿಸುತ್ತ ಬುದ್ಧಿಯ ದಿವಾಳಿ ಮಾಡುತ್ತಿದ್ದಾರೆ. ಇನ್ನು ಮುಂದೆ ಹೋಗಿ ‘ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಸರಿ ಉಡುಪು ಧರಿಸಿ ಮುಖ್ಯಮಂತ್ರಿ ಆಸನದ ಮೇಲೆ ಹೇಗೆ ಕುಳಿತುಕೊಳ್ಳಬಹುದು ? ಮತ್ತು ಸಾಧ್ವಿ ಪ್ರಜ್ಞಾ ಸಿಂಗ್ ಕೂಡ ಕೇಸರಿ ಧರಿಸಿ ವಿಧಾನಸಭೆಗೆ ಹೇಗೆ ಬರುತ್ತಾರೆ ?ಎಂಬ ಪ್ರಶ್ನೆ ಉದ್ದೇಶಪೂರ್ವಕವಾಗಿ ಕೇಳಲಾಗುತ್ತಿದೆ. ಜನರ ಗಮನವನ್ನು ಮೂಲ ವಿಷಯದಿಂದ ಬೇರೆಡೆಗೆ ಸೆಳೆಯಲು ಇಂತಹ ಆಕ್ಷೇಪಣೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ದೇಶದ ಪ್ರಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ ಕಲಾಮ ಆಝಾದ ಇವರೊಬ್ಬರು ಮುಸಲ್ಮಾನ ಆಗಿದ್ದರು. ಅವರಿಗೆ ‘ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗಬೇಕು, ಎಂದೆನಿಸಲಿಲ್ಲ. ಶಿಕ್ಷಕರು ಸೀರೆ ಉಟ್ಟು ಮಕ್ಕಳಿಗೆ ಕಲಿಸುವುದನ್ನು ಅವರು ಎಂದಿಗೂ ವಿರೋಧಿಸಲಿಲ್ಲ. ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಕೂಡ ಸೀರೆ ಉಡುತ್ತಿದ್ದರು. ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕೂಡ ಸೀರೆಯನ್ನು ಉಟ್ಟು ಟಿಕಲಿ ಹಚ್ಚಿಕೊಳ್ಳುತ್ತಿದ್ದರು ಮತ್ತು ಅವರು ಯಾವಾಗಲೂ ತಮ್ಮ ತಲೆಯ ಮೇಲೆ ಸೆರಗನ್ನು ಹಾಕಿಕೊಳ್ಳುತ್ತಿದ್ದರು. ನ್ಯಾಯಾಂಗದಲ್ಲಿ, ಕೆಳ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ವರೆಗೆ, ಅನೇಕ ಮಹಿಳಾ ನ್ಯಾಯಾಧೀಶರು ಸೀರೆಯನ್ನು ಉಡುತ್ತಾರೆ ಮತ್ತು ಟಿಕಲಿಯನ್ನೂ ಹಚ್ಚಿಕೊಳ್ಳುತ್ತಾರೆ. ಅನೇಕ ರಾಜ್ಯಗಳ ಮಹಿಳಾ ಮಂತ್ರಿಗಳು ಸೀರೆಯನ್ನು ಉಡುತ್ತಾರೆ ಮತ್ತು ಟಿಕಲಿಯನ್ನೂ ಹಚ್ಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಸಿಪಿಐ(ಎಂ) ನಾಯಕಿ ವೃಂದಾ ಕರಾತ ಇವರೂ ಕೂಡ ಸೀರೆ ಉಡುತ್ತಾರೆ ಹಾಗೂ ದೊಡ್ಡದಾಗಿ ಟಿಕಲಿಯನ್ನೂ ಹಚ್ಚಿಕೊಳ್ಳುತ್ತಾರೆ. ಭಾರತದಲ್ಲಿನ ಹೆಚ್ಚಿನ ಮಹಿಳಾ ನಾಯಕರು ತಮ್ಮನ್ನು ಹಿಂದುತ್ವನಿಷ್ಠ ಎಂದು ಹೇಳಿಕೊಳ್ಳುವುದಿಲ್ಲ, ಆದರೂ ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಅಂದರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಭೂಮಿಯ ಸಂಸ್ಕೃತಿಯನ್ನು ಅವರು ಸ್ವೀಕರಿಸಿದ್ದಾರೆ. ಆದ್ದರಿಂದ ಹಿಜಾಬ್‌ನ ಚರ್ಚೆಯಲ್ಲಿ ಯಾರಾದರೂ ಕುಂಕುಮ ಮತ್ತು ಸೀರೆಯ ವಿಷಯವನ್ನು ಎತ್ತಿದರೆ ಅದು ಅಸಂಬದ್ಧ ಮತ್ತು ಒಪ್ಪದಿರುವಂತಹದ್ದಾಗುತ್ತದೆ.
ಈಗೇಕೆ ಹಿಜಾಬ್‌ನ ಆಗ್ರಹ ?
ಈ ಬಗ್ಗೆ ೯ ಫೆಬ್ರವರಿ ೨೦೨೨ ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಅವರು ಹಿಜಾಬ್‌ನ ಕುರಿತು ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ, “ನಾನು ಶಾಲೆಯಲ್ಲಿದ್ದಾಗ, ಶಾಲೆಯು ಒಂದೇ ಬಣ್ಣದ್ದಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿಯ ಉಡುಪನ್ನು ಧರಿಸುತ್ತಿದ್ದರು, ಎಂದಿದ್ದರು. ಇದರಿಂದ ಶಿಕ್ಷಕಿ ಅಥವಾ ವಿದ್ಯಾರ್ಥಿನಿಯರ ಕುಂಕುಮ, ಟಿಕಲಿ ಅಥವಾ ಸೀರೆ ಇವುಗಳಿಗೆ ಇಲ್ಲಿಯವರೆಗೆ ವಿರೋಧವಾಗಿಲ್ಲ; ಏಕೆಂದರೆ ಅದು ಭಾರತೀಯ ಸಂಸ್ಕೃತಿಯ ಗುರುತಾಗಿದೆ. ಹಿಜಾಬ್ ಆಕ್ರಮಣಕಾರರ ಸಂಸ್ಕೃತಿಯಾಗಿದೆ. ಇಲ್ಲಿಯವರೆಗೆ, ಭಾರತದಲ್ಲಿ ಮುಸಲ್ಮಾನರು ಅದನ್ನು ಒತ್ತಾಯಿಸಲಿಲ್ಲ. ಈಗ ಅವರು ಅದನ್ನು ಒತ್ತಾಯಿಸುತ್ತಿದ್ದಾರೆ; ಏಕೆಂದರೆ ಅವರು ಭಾರತೀಯ ಸಂಸ್ಕೃತಿಯನ್ನು ಬದಲಿಸಲು ಮತ್ತು ಈ ಮಣ್ಣಿನಲ್ಲಿ ಇಸ್ಲಾಮಿಕ್ ಸಂಸ್ಕೃತಿಯನ್ನು ಅಚ್ಚು ಮೂಡಿಸಲು ಬಯಸುತ್ತಾರೆ.
ಭಾರತದಲ್ಲಿ ಹಿಂದೂ ಸಂಸ್ಕೃತಿಯ ಅಭಿವೃದ್ಧಿ ಅತ್ಯಾವಶ್ಯಕ !
ಸರ್ವಸಾಮಾನ್ಯ ಭಾರತೀಯರ ಇಚ್ಛೆಯೆಂದರೆ, ‘ಭಾರತದಲ್ಲಿ ತಿರುಗಾಡುವಾಗ ‘ನಾವು ಭಾರತದಲ್ಲಿದ್ದೇವೆ, ಎಂದು ಅನಿಸಬೇಕು. ಭಾರತೀಯ ಶಾಲೆಗಳಿಗೆ ಹೋದರೆ ನಾವು ಪಾಕಿಸ್ತಾನದಲ್ಲಿ ಅಥವಾ ಅಫಘಾನಿಸ್ತಾನದ ಯಾವುದಾದರೊಂದು ಶಾಲೆಯಲ್ಲಿದ್ದೇವೆ, ಎಂದು ಅನಿಸತೊಡಗಿದರೆ, ಭಾರತದಲ್ಲಿನ ಮೂಲ ಸಂಸ್ಕೃತಿಯ ಮಹತ್ವವೆಲ್ಲಿ ಉಳಿಯಿತು ? ಇಂದು ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಮೂಲ ಸಂಸ್ಕೃತಿ ರಕ್ಷಿಸಲ್ಪಡಬೇಕು ಎಂಬುದಕ್ಕಾಗಿ ಒತ್ತಾಯಿಸುತ್ತಿವೆ. ಜ್ಞಾನೇಶ್ವರಿಯಲ್ಲಿ ಹೇಳಿದಂತೆ, ಹಿಂದೂ ಸಂಸ್ಕೃತಿ ಜಗತ್ತಿನ ಕಲ್ಯಾಣವನ್ನು ಚಿಂತನ ಮಾಡುವ ಸಂಸ್ಕೃತಿಯಾಗಿದೆ. ಕೊರೊನಾ ಸೊಂಕಿನ ಸಮಯದಲ್ಲಿ ಭಾರತೀಯ ಸಂಸ್ಕೃತಿಯಲ್ಲಿನ ನಮಸ್ಕಾರ ಮಾಡುವುದು, ಮೃತ್ಯುವಿನ ನಂತರ ದಹನ ಮಾಡುವುದು, ಸಸ್ಯಾಹಾರ, ಆಯುರ್ವೇದ, ಗಂಗಾಜಲದ ಮಹತ್ವ ಇವುಗಳು ರಕ್ಷಕರಾಗಿರುವುದು ಈಗ ಜಗತ್ತು ಸಹ ಒಪ್ಪಿಕೊಂಡಿದೆ. ಆದುದರಿಂದ ವ್ಯಕ್ತಿಯ ಪಾರಮಾರ್ಥಿಕ ಉನ್ನತಿಗಾಗಿ ಕಾರ್ಯನಿರತ ವಾಗಿರುವ ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ. ಹಿಜಾಬ್ ಬೇಡಿಕೆಯನ್ನು ಮಾಡಿ ಈ ಭೂಮಿಯಲ್ಲಿ ಶರಿಯಾ ಕಾನೂನನ್ನು ತರುವ ಕನಸು ಯಾರಿಗಾದರೂ ಇದ್ದರೆ, ಆಡಳಿತಗಾರರು ಅವರಿಗೆ ಅವರ ಸ್ಥಾನವನ್ನು ತೋರಿಸುವುದು ಆವಶ್ಯಕವಾಗಿದೆ. ಮತಾಂಧರ ಜನಂಖ್ಯೆಯು ಬೆಳೆದ ನಂತರ ಇತರ ಸಂಸ್ಕೃತಿಗಳನ್ನು ಅಳಿಸಿ ಹಾಕಲು ಅವರು ವಿವಿಧ ಘಟನೆಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ, ಅದರದೇ ‘ಹಿಜಾಬ್‌ಗೆ ಬೇಡಿಕೆ ಇದು ಒಂದು ವಿಶಿಷ್ಟ ಉದಾಹರಣೆಯಾಗಿದೆ. ಇದರಿಂದ ಸಮಾನ ನಾಗರಿಕ ಸಂಹಿತೆಯ ಅತ್ಯಾವಶ್ಯಕತೆಯು ಸ್ಪಷ್ಟವಾಗುತ್ತದೆ !