ಪ್ರಧಾನಿ ಮೋದಿಯವರ ಮಾಸ್ಕೋ ಭೇಟಿಯಿಂದ ದ್ವಿಪಕ್ಷೀಯ ಸಂಬಂಧ ದೃಢವಾಗಲು ಸಾಧ್ಯ !

ವಿಶ್ವಸಂಸ್ಥೆಯಲ್ಲಿನ ರಷ್ಯಾದ ಖಾಯಂ ಪ್ರತಿನಿಧಿ ನೆಬೆಂಜಿಯಾ ಅವರ ಅಭಿಪ್ರಾಯ

ಮಾಸ್ಕೋ – ಭಾರತ-ರಷ್ಯಾ ಹಳೆಯ ಸ್ನೇಹಿತರು. ಭಾರತದೊಂದಿಗೆ ರಷ್ಯಾ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಸಂಬಂಧವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ವಿಶ್ವಸಂಸ್ಥೆಯ ರಷ್ಯಾದ ಖಾಯಂ ಪ್ರತಿನಿಧಿ ನೆಬೆಂಜಿಯಾ ವಿಶ್ವಾಸ ವ್ಯಕ್ತಪಡಿಸಿದರು. ವಿಶ್ವಸಂಸ್ಥೆಯ ರಷ್ಯಾದ ಖಾಯಂ ಪ್ರತಿನಿಧಿ ನೆಬೆಂಜಿಯಾ ಅವರು, ಇತ್ತೀಚೆಗೆ ರಷ್ಯಾವು ಜುಲೈ ತಿಂಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅಂಗೀಕರಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ನೆಬೆಂಜ್ಯಾ ಮಾತನಾಡಿ, “ನಾವು ಅನೇಕ ಕ್ಷೇತ್ರಗಳಲ್ಲಿ ಸಹಕರಿಸುತ್ತಿದ್ದೇವೆ ಮತ್ತು ನನಗೆ ಈ ಸಭೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಯಬಹುದು ಎಂದು ಅನಿಸುತ್ತದೆ. ಈ ಭೇಟಿಯಿಂದ ರಷ್ಯಾ-ಭಾರತದ ಸಂಬಂಧ ಇನ್ನಷ್ಟು ಸುಧಾರಿಸುತ್ತದೆ”, ಇದು ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮೊದಲ ರಷ್ಯಾ ಭೇಟಿಯಾಗಿದೆ. ವರ್ಷ 2019 ರಲ್ಲಿ ರಷ್ಯಾಕ್ಕೆ ಅವರು ಅಂತಿಮ ಭೇಟಿ ನೀಡಿದ್ದರು ಎಂದಿದ್ದಾರೆ.