ಬೈರುತ್ (ಲೆಬನಾನ್) – ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿರುವಾಗಲೇ ಲೆಬನಾನ್‌ನಿಂದ ಕಾರ್ಯಾಚಟುವಟಿಕೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ಇಸ್ರೇಲ್‌ನೊಂದಿಗೆ ನೇರ ಯುದ್ಧದ ಸಿದ್ಧತೆಯಲ್ಲಿದೆ. ಹಿಜ್ಬುಲ್ಲಾ ಮುಖಂಡ ಶೇಖ್ ನಯಿಮ್ ಖಾಸಿಂ ಮಾತನಾಡಿ, ‘ಲೆಬನಾನ್-ಇಸ್ರೇಲ್ ಗಡಿಯಲ್ಲಿ ಇಬ್ಬರ ನಡುವೆ ವೈಮನಸ್ಸು ಹೆಚ್ಚುತ್ತಿದೆ. ಇಸ್ರೇಲ್ ಪಡೆಗಳು ಗಡಿ ದಾಟಿ ಲೆಬನಾನ್ ಗೆ ಬಂದರೆ ಗಡಿಯಲ್ಲಿಯೇ ನಾಶಪಡಿಸುತ್ತೇವೆ’ ಎಂದು ಹೇಳಿದೆ. ಇದ್ಕಕೆ ಪ್ರತ್ಯುತ್ತರವೆಂದು ಇಸ್ರೆಲ್ ನ ಪ್ರಧಾನಿ ಬೆಂಜಾಮಿನ ನೆತಾನ್ಯಾಹು ಇವರು ಹಿಜ್ಬುಲ್ಲಾಗೆ ಎಚ್ಚರಿಕೆ ನೀಡುತ್ತಾ, ಉತ್ತರ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದೆ.
ಹಿಜ್ಬುಲ್ಲಾ ಇತ್ತೀಚೆಗೆ ಇಸ್ರೇಲ್‌ನ ಕಿರ್ಯಾತ್ ಶಮೋನಾದಲ್ಲಿ ಡ್ರೋನ್ ದಾಳಿ ನಡೆಸಿತ್ತು.
ಲೆಬನಾನ್‌ನ ಗಡಿಯಲ್ಲಿರುವ ನಕೌರಾ ಪಟ್ಟಣದ ಮೇಲೆ ಇಸ್ರೇಲ್‌ನ ದಾಳಿಗೆ ಪ್ರತ್ಯುತ್ತರವೆಂದು ದಾಳಿ ನಡೆದಿದೆ ಎಂದು ವರದಿಯಾಗಿದೆ.
ಹಿಜ್ಬುಲ್ಲಾ ವಿರುದ್ಧದ ಯುದ್ಧವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ! – ಇಸ್ರೇಲ್
ಟೆಲ್ ಅವಿವ್ – ಇಸ್ರೇಲ್‌ನ ರಕ್ಷಣಾ ಮುಖ್ಯಸ್ಥ ಜನರಲ್ ಹರ್ಜಿ ಹಾಲೇವಿ ಇವರು, ಹಿಜ್ಬುಲ್ಲಾ ವಿರುದ್ಧ ನೇರ ಯುದ್ಧವನ್ನು ನಡೆಸಬೇಕೆ ಎಂದು ಇಸ್ರೇಲ್ ಶೀಘ್ರದಲ್ಲೇ ನಿರ್ಧರಿಸುತ್ತದೆ ಎಂದು ಹೇಳಿದರು. ‘ಕಳೆದ 8 ತಿಂಗಳಿಂದ ನಾವು ಅದರ ಮೇಲೆ ದಾಳಿ ನಡೆಸುತ್ತಿದ್ದೇವೆ. ಇದಕ್ಕೆ ಹಿಜ್ಬುಲ್ಲಾ ಭಾರೀ ಬೆಲೆ ತೆರಬೇಕಾಗುತ್ತದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಇತ್ತೀಚೆಗೆ ಲೆಬನಾನ್ ಗಡಿಯಲ್ಲಿರುವ ಕಿರ್ಯಾತ್ ಶಮೋನಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇಲ್ಲಿ ಅವರು ಇಸ್ರೇಲಿ ಸೈನಿಕರನ್ನು ಭೇಟಿಯಾದರು. ಈ ವೇಳೆ ಮಾತನಾಡಿದ ನೆತನ್ಯಾಹು, “ಹೆಜ್ಬೊಲ್ಲಾಗೆ ಉತ್ತರಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದರು.