Ajit Doval Faster Progress : ದೇಶದ ಗಡಿಗಳು ಸುರಕ್ಷಿತವಾಗಿದ್ದರೆ, ನಮ್ಮ ಪ್ರಗತಿಯು ವೇಗವಾಗಿರುತ್ತಿತ್ತು!

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿಕೆ !

ಅಜಿತ್ ದೋವಲ್

ಹೊಸದಿಲ್ಲಿ – ಯಾವುದೇ ದೇಶದ ಗಡಿಗಳು ಮುಖ್ಯವಾಗಿರುತ್ತವೆ; ಏಕೆಂದರೆ ಅವು ಸ್ವಾಯತ್ತತೆಯನ್ನು ವ್ಯಾಖ್ಯಾನಿಸುತ್ತವೆ. ನಮ್ಮ ದೇಶದ ಗಡಿಗಳು ಹೆಚ್ಚು ಸುರಕ್ಷಿತ, ಸ್ಪಷ್ಟ ಮತ್ತು ವಿವಾದ ಇರದಿದ್ದರೆ ನಾವು ಇನ್ನಷ್ಟು ವೇಗವಾಗಿ ಪ್ರಗತಿ ಹೊಂದುತ್ತಿದ್ದೆವು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹೇಳಿದ್ದಾರೆ. ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 21ನೇ ಅಧಿಕಾರ ಸ್ವೀಕಾರ ಸಮಾರಂಭದ ನಿಮಿತ್ತ ಆಯೋಜಿಸಿದ್ದ ‘ರುಸ್ತಮ್‌ಜಿ ಸ್ಮಾರಕ ಉಪನ್ಯಾಸ’ದಲ್ಲಿ ಅವರು ಮಾತನಾಡುತ್ತಿದ್ದರು.

ಭವಿಷ್ಯದಲ್ಲಿ ದೇಶದ ಗಡಿಗಳು ಸುರಕ್ಷಿತವಾಗಿರುತ್ತವೆ ಎಂದಲ್ಲ !

ದೋವಲ್ ಅವರು ಮುಂದೆ ಮಾತನಾಡಿ, ಭವಿಷ್ಯದಲ್ಲಿ ಕ್ರಿಯಾತ್ಮಕ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು ನಮ್ಮ ಗಡಿಗಳು ಸುರಕ್ಷಿತವಾಗಿರುತ್ತವೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು. ಆದ್ದರಿಂದ, ಗಡಿ ಭದ್ರತಾ ಪಡೆಗಳ ಜವಾಬ್ದಾರಿ ಬಹಳ ದೊಡ್ಡದಾಗಿದೆ. ಅವರು 24 ಗಂಟೆಗಳ ಕಾಲ ಎಚ್ಚರಿಕೆಯಲ್ಲಿರಬೇಕು. ನಮ್ಮ ಹಿಡಿತದಲ್ಲಿರುವ ಭೂಮಿಯೇ ನಮ್ಮದಾಗಿರುತ್ತದೆ. ಕಳೆದ 10 ವರ್ಷಗಳಲ್ಲಿ ಗಡಿ ಭದ್ರತೆಗೆ ಸರ್ಕಾರ ಹೆಚ್ಚಿನ ಗಮನ ನೀಡಿದೆ ಮತ್ತು ಈ ಅವಧಿಯಲ್ಲಿ ನಮ್ಮ ರಾಷ್ಟ್ರೀಯ ಶಕ್ತಿಯು ಅಗಾಧವಾಗಿ ಬೆಳೆದಿದೆ ಎಂದು ತಿಳಿಸಿದರು.