Bangladesh Hindu Attacked : ಬಾಂಗ್ಲಾದೇಶದಲ್ಲಿ ಕಳೆದ ೩ ತಿಂಗಳಿಂದ ಹಿಂದುಗಳ ಮೇಲೆ ಪ್ರತಿದಿನ ೩ ದಾಳಿಗಳು

ಶೇಖ ಹಸೀನಾ ಸರಕಾರ ಹಿಂದುಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ವಿಫಲ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಈ ವರ್ಷ ಜನವರಿ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ಶೇಖ ಹಸೀನಾ ಸರಕಾರ ಮತಾಂಧ ಮುಸಲ್ಮಾನರಿಂದ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುವ ದಾಳಿಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ.

೧. ಈ ಚುನಾವಣೆಯಲ್ಲಿ ಹಿಂದುಗಳು ಶೇಖ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಮತ ನೀಡಿದ್ದರು. ಚುನಾವಣೆಯ ಸಮಯದಲ್ಲಿ ಕೂಡ ಹಿಂದುಗಳ ಮೇಲೆ ದಾಳಿಗಳು ನಡೆದಿದ್ದವು ಮತ್ತು ಹಸಿನಾ ಅವರ ಪಕ್ಷ ಅಧಿಕಾರಕ್ಕೆ ಬಂದ ನಂತರವು ಕೂಡ ಈ ದಾಳಿಗಳು ಮುಂದುವರೆದಿದೆ ಆದ್ದರಿಂದ ಅಲ್ಲಿನ ಹಿಂದುಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

೨. ಹಿಂದೂ ಸಂಘಟನೆಗಳ ಆರೋಪವೇನೆಂದರೆ, ಚುನಾವಣೆಯ ನಂತರ ಪ್ರತಿ ದಿನ ಹಿಂದುಗಳ ಮೇಲೆ ೩ ದಾಳಿಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿನ ಕುಸ್ತಿಯ, ಭಾಗೇರಹಾಟ್, ಜೈನೆದಾಹ, ಗೈಬಾಂಧಾ, ಚಟಗಾವ ಮತ್ತು ಶಿಲಹಟ ಈ ೬ ಜಿಲ್ಲೆಗಳಲ್ಲಿ ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿವೆ.

೩. ಹಿಂದೂ, ಬೌದ್ಧ, ಕ್ರಿಶ್ಚಿಯನ್ ಓಯಿಕ್ಯಾ ಪರಿಷತ್ತಿನ ಸದಸ್ಯ ರಂಜನ್ ಕರಮಾಕರ ಅವರು ಮಾತನಾಡಿ, ಚುನಾವಣೆಯ ನಂತರ ಅಲ್ಪಸಂಖ್ಯಾತರ ಮತ್ತು ದೇವಸ್ಥಾನಗಳ ಮೇಲೆ ನಡೆಯುವ ದಾಳಿಗಳು ಆಘಾತಕಾರಿಯಾಗಿವೆ. ಈ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೆ ಇರುವುದರಿಂದ ಅನೇಕ ಮತಾಂಧ ಸಂಘಟನೆಗಳ ಧೈರ್ಯ ಹೆಚ್ಚಾಗಿದೆ. ಭವಿಷ್ಯದಲ್ಲಿ ಇಂತಹ ದಾಳಿಗಳು ತಡೆಯುವುದಕ್ಕಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಕಳೆದ ೩ ತಿಂಗಳಲ್ಲಿ ನಡೆದಿರುವ ಕೆಲವು ದಾಳಿಗಳು :

  • ಚಟಗಾವ ನ ಸೀತಾ ಕುಂಡದಲ್ಲಿನ ಬಾರಬನಲ ದೇವಸ್ಥಾನ ದ್ವಂಸ.
  • ಮೌಲವಿ ಮಾರುಕಟ್ಟೆಯ ಶ್ರೀಕಾಳಿ ಮಂದಿರದಲ್ಲಿನ ಮೂರ್ತಿ ದ್ವಂಸ ಗೊಳಿಸಿ ಆಭರಣಗಳ ಕಳವು.
  • ಗೋಪಾಲಗಂಜದ ಪ್ರಸ್ತುತ ಉಪಜಿಲ್ಹೆಯಲ್ಲಿನ ಮಹಿಳಾ ಅರ್ಚಕರ ಕತ್ತುಹಿಸಿಕಿ ಹತ್ಯೆ ಮತ್ತು ದೇವಿಯ ಬಂಗಾರದ ಆಭರಣಗಳ ಲೂಟಿ.
  • ಸಿರಾಜಗಂಜದಲ್ಲಿನ ಶ್ರೀಕಾಳಿ ಮಾತಾ ದೇವಸ್ಥಾನದ ಮೇಲೆ ದಾಳಿ ನಡೆಸಿ ಒರ್ವ ಯುವಕನಿಂದ ಅನೇಕ ಮೂರ್ತಿಗಳ ವಿಡಂಬನೆ.
  • ಬರಿಸಲಾದಲ್ಲಿ ರಾಧಾ ಗೋವಿಂದ ಸೇವಾಶ್ರಮ ದೇವಸ್ಥಾನದ ಮೇಲೆ ದಾಳಿ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾ ಮತ್ತು ಭಾರತದ ನಡುವೆ ಒಳ್ಳೆಯ ಸಂಬಂಧವಿದೆ; ಆದರೆ ಅಲ್ಲಿಯ ಹಿಂದುಗಳಿಗೆ ಅದರ ಯಾವುದೇ ಲಾಭವಾಗದೆ ತದ್ವಿರುದ್ಧ ಹಿಂದೂಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಇದು ಭಾರತಕ್ಕೆ ನಾಚಿಕೆಗೇಡಾಗಿದೆ !