Houthi Terrorists Attack : ಭಾರತಕ್ಕೆ ಬರುವ ನೌಕೆಗಳ ಮೇಲೆ ಹುತಿ ಉಗ್ರರಿಂದ ಕೆಂಪು ಸಮುದ್ರದಲ್ಲಿ ದಾಳಿ

ನವದೆಹಲಿ – ಯೆಮನಿನ ಹುತಿ ಉಗ್ರರು ಭಾರತಕ್ಕೆ ಬರುವ ನೌಕೆಯ ಮೇಲೆ ಕೆಂಪು ಸಮುದ್ರದಲ್ಲಿ ದಾಳಿ ಮಾಡಿದ್ದಾರೆ. ಈ ನೌಕೆಯ ಹೆಸರು ಏಂಡ್ರೋಮೇಡ ಸ್ಟಾರ್ ಎಂದಾಗಿದ್ದು ಇದು ತೈಲ ಹೊತ್ತು ಭಾರತಕ್ಕೆ ಬರುತ್ತಿತ್ತು. ಆ ದಾಳಿಯಲ್ಲಿ ನೌಕೆಗೆ ಅಲ್ಪ ಸ್ವಲ್ಪ ಹಾನಿ ಆಗಿದೆ ಎಂದು ಹೇಳಲಾಗಿದೆ. ಈ ನೌಕೆ ಬ್ರಿಟನ್ ದೇಶದ್ದಾಗಿದ್ದು ದಾಳಿಯ ನಂತರ ಕೂಡ ಅದು ಪ್ರವಾಸ ಮುಂದುವರೆಸಿದೆ. ನೌಕೆಯು ಗುಜರಾತಿನಲ್ಲಿನ ವಾಡಿನಾರ್ ಗೆ ತಲುಪಬೇಕಿದೆ .

ದಾಳಿಯಿಂದ ಭಾರತಕ್ಕೆ ಆಗುತ್ತಿರುವ ನಷ್ಟ

ಭಾರತದ ಶೇಕಡ ೮೦ ರಷ್ಟು ವ್ಯಾಪಾರ ಸಮುದ್ರ ಮಾರ್ಗದಿಂದ ನಡೆಯುತ್ತದೆ. ಅದರಲ್ಲಿಯೂ ಶೇಕಡ ೯೦ ರಷ್ಟು ಇಂಧನ ಕೂಡ ಸಮುದ್ರ ಮಾರ್ಗದಿಂದಲೇ ಬರುತ್ತದೆ. ಸಮುದ್ರ ಮಾರ್ಗದಲ್ಲಿನ ದಾಳಿಯ ನೇರ ಪರಿಣಾಮ ಭಾರತದ ವ್ಯಾಪಾರದ ಮೇಲೆ ಆಗುತ್ತದೆ. ಕಳೆದ ಎರಡು ವರ್ಷದಲ್ಲಿ ಭಾರತದಿಂದ ಯುರೋಪಿಗೆ ಡೀಸೆಲ್ ಪೂರೈಕೆ ಕೆಳಮಟ್ಟಕ್ಕೆ ತಲುಪಿದೆ. ಇದರಲ್ಲಿ ಸುಮಾರು ಶೇಕಡ ೯೦ ರಷ್ಟು ಇಳಿಕೆ ಆಗಿದೆ. ಏಶಿಯಾದಿಂದ ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್ ಗೆ ಹೋಗುವ ಸರಕು ಸಾಗಾಣಿಕೆಯ ಶುಲ್ಕ ಕೂಡ ಹೆಚ್ಚಾಗಿದೆ.