ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ಮಾರ್ಗದರ್ಶನ

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಕ್ಷಾತ್‌ ಶ್ರೀಹರಿ ವಿಷ್ಣುವಿನ ಅವತಾರವಾಗಿದ್ದಾರೆ, ಎಂಬುದು ಸತ್ಯವಾಗಿದೆ ‘ಎಲ್ಲ ದೇವತೆಗಳ ತತ್ತ್ವಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿವೆ. ವೇದ, ಪಂಚಮಹಾಭೂತಗಳು ಹೇಗೆ ಸತ್ಯವಾಗಿವೆಯೋ, ಹಾಗೆಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಸಾಕ್ಷಾತ್‌ ಶ್ರೀಹರಿ ವಿಷ್ಣುವಿನ ಅವತಾರ ಆಗಿದ್ದಾರೆ, ಎಂಬುದು ಕೂಡ ಸತ್ಯವಾಗಿದೆ.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುತ್ತಿದ್ದಾರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎಲ್ಲೆಡೆ ಹಾಗೂ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುತ್ತಾರೆ. ಯಾರ ಮನಸ್ಸು ಮತ್ತು ವಿಚಾರ ನಿರ್ಮಲವಾಗಿರುತ್ತದೋ, ಅವರಿಗೆ ಗುರುದೇವರ ದಿವ್ಯತ್ವದ ಅನುಭೂತಿ ಬರುತ್ತದೆ.

೩. ಚಂದ್ರ-ಸೂರ್ಯ ಇರುವವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಬ್ಬ ಸಾಧಕನ ಜೊತೆಗೆ ಸದಾಕಾಲ ಇರುವರು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸೂಕ್ಷ್ಮ ರೂಪದಲ್ಲಿ ಸಾಧಕರ ಹೃದಯದಲ್ಲಿರುತ್ತಾರೆ. ಎಷ್ಟರವರೆಗೆ ಚಂದ್ರ – ಸೂರ್ಯ ಇರುವರೋ, ಅಷ್ಟರ ವರೆಗೆ ಗುರುಗಳು ತಮ್ಮ ಪ್ರತಿಯೊಬ್ಬ ಸಾಧಕನ ಜೊತೆಗಿರುವರು. ನಮ್ಮ ಪ್ರಾಣ ಹೋದರೂ ಶ್ರೀ ಗುರು ನಮ್ಮನ್ನು ಬಿಡುವುದಿಲ್ಲ.

೪. ಸಾಧಕರಿಗಾಗಿ ಎಲ್ಲ ತೀರ್ಥಗಳು : ಎಲ್ಲ ತೀರ್ಥಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿಯೇ ಇವೆ.

೫. ಸಾಧಕರಿಗಾಗಿ ಮೋಕ್ಷ : ಪರಮಪ್ರಿಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಿವ್ಯ ಚರಣಗಳಲ್ಲಿ ಏಕನಿಷ್ಠೆಯಿಂದ ಭಕ್ತಿ ಮಾಡುವುದೇ ಮೋಕ್ಷವಾಗಿದೆ.
೬. ನಿಜವಾದ ಗುರುಭಕ್ತಿ : ಸ್ವತಃ ಮೋಕ್ಷವೇ ಯಾರ ಶ್ರೀಚರಣಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುತ್ತದೋ, ಅಂತಹ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳ ಬಗ್ಗೆ ನಿಷ್ಠೆಯನ್ನಿಡುವುದೇ ನಿಜವಾದ ಗುರುಭಕ್ತಿಯಾಗಿದೆ ! ಇದೇ ಗುರುಕೃಪಾಯೋಗ !

೭. ಅಂತಿಮ ಶ್ವಾಸ ಇರುವ ವರೆಗಿನ ಗುರಿ : ನಮ್ಮ ಅಂತಿಮ ಶ್ವಾಸ ಇರುವವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ದಿವ್ಯ ಶ್ರೀಚರಣಗಳ ಭಕ್ತಿ ಮಾಡೋಣ.’

– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೧೩.೧.೨೦೨೩)