ಕೊಲಕಾತಾದಲ್ಲಿ ೧ ಲಕ್ಷಕ್ಕಿಂತಲೂ ಹೆಚ್ಚಿನ ಜನರಿಂದ ಸಾಮೂಹಿಕ ಗೀತಾ ಪಠಣ !

  • ೬೦ ಸಾವಿರ ಮಹಿಳೆಯರಿಂದ ಶಂಖನಾದ !

  • ಕಾರ್ಯಕ್ರಮದಿಂದ ವಿಶ್ವದಾಖಲೆ !

ಕೋಲಕಾತಾ (ಬಂಗಾಲ) – ಇತ್ತೀಚೆಗೆ ನಡೆದ ಗೀತಾ ಜಯಂತಿಯ ಪ್ರಯುಕ್ತ ಇಲ್ಲಿಯ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಡಿಸೆಂಬರ್ ೨೪ ರಂದು ೧ ಲಕ್ಷಕ್ಕಿಂತಲೂ ಹೆಚ್ಚಿನ ಜನರು ಒಟ್ಟಾಗಿ ಸೇರಿ ಗೀತಾ ಪಠಣ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದೆ. ಈ ಕಾರ್ಯಕ್ರಮದ ಆಯೋಜನೆ ಅಖಿಲ ಭಾರತೀಯ ಸಂಸ್ಕೃತ ಪರಿಷತ ಮತ್ತು ಮೋತಿಲಾಲ ಭಾರತ ತೀರ್ಥ ಸೇವಾ ಮಿಷನ ಇವರು ಮಾಡಿದ್ದರು. ಇದರಲ್ಲಿ ದೇಶ ಮತ್ತು ವಿದೇಶಗಳಿಂದ ೩೦೦ ಕ್ಕೂ ಹೆಚ್ಚಿನ ಸಂತರು ಉಪಸ್ಥಿತರಿದ್ದರು. ಇದಲ್ಲದೆ ಬಂಗಾಲದ ರಾಜ್ಯಪಾಲ ಸಿ.ವಿ. ಆನಂದ ಬೋಸ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರ ಗೌರವಾನ್ವಿತರನ್ನು ಆಮಂತ್ರಿಸಲಾಗಿತ್ತು.

ಆಯೋಜಕರು, ಈ ಪಠಣೆಯಲ್ಲಿ ಸಹಭಾಗಿ ಆಗುವದಕ್ಕಾಗಿ ೧ ಲಕ್ಷ ೩೦ ಸಾವಿರ ಜನರು ಹೆಸರು ನೋಂದಾಯಿಸಿದ್ದರು. ಪಠಣದ ಸಮಯದಲ್ಲಿ ೬೦ ಸಾವಿರ ಮಹಿಳೆಯರು ಒಟ್ಟಾಗಿ ಸೇರಿ ಶಂಖನಾದ ಮಾಡಿದರು. ಇದು ಕೂಡ ಒಂದು ವಿಶ್ವದಾಖಲೆ ಆಯಿತು.

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ದೇಶದಲ್ಲಿನ ಪ್ರತಿಯೊಂದು ಶಾಲೆಯಲ್ಲಿ ಭಗವತ್ ಗೀತೆ ಕಲಿಸುವುದನ್ನು ಅನಿವಾರ್ಯ ಗೊಳಿಸಬೇಕು !