ಆನ್ ಲೈನ್ ನಲ್ಲಿ ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳು ಮಾರಾಟ !

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಇವರು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಕ್ರಮಕೈಗೊಳ್ಳಲು ಆದೇಶ !

ನವ ದೆಹಲಿ – ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳು ಆನ್ಲೈನ್ ನಲ್ಲಿ ಮಾರಾಟಮಾಡಲಾಗುತ್ತಿರುವ ಪ್ರಕರಣದಲ್ಲಿ ದೆಹಲಿ ಮಹಿಳಾ ಆಯೋಗದಿಂದ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಜೊತೆಗೆ ಆಯೋಗವು ಕ್ರಮ ಕೈಗೊಂಡಿರುವ ವರದಿ ಪ್ರಸ್ತುತಪಡಿಸಲು ಕೂಡ ಆದೇಶ ನೀಡಿದೆ.
ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಇವರು ದೆಹಲಿ ಪೊಲೀಸರು ಸೈಬರ್ ಅಪರಾಧ ಶಾಖೆಯ ಅಧಿಕಾರಿಗಳಿಗೆ ನವೆಂಬರ್ ೧ ವರೆಗೆ ಈ ಸಂದರ್ಭದಲ್ಲಿ ದೂರು ದಾಖಲಿಸಿರುವ ಪ್ರತಿ ಪ್ರಸ್ತುತಪಡಿಸಲು ಹೇಳುತ್ತಾ ‘ಈ ಪ್ರಕರಣದಲ್ಲಿ ಯಾರನ್ನು ಬಂಧಿಸಲಾಗಿದೆ ?, ಇದರ ಮಾಹಿತಿ ಕೂಡ ಕೇಳಿದೆ. ಒಂದು ವೇಳೆ ಇಲ್ಲಿಯವರೆಗೆ ಯಾರನ್ನು ಬಂಧಿಸಲಿಲ್ಲ ಎಂದರೆ, ಅದರ ಕಾರಣ ಪ್ರಸ್ತುತಪಡಿಸಲು ಕೂಡ ಮಾಲಿವಲ ಇವರು ಹೇಳಿದ್ದಾರೆ. ಜಾಲತಾಣದಿಂದ ಈ ಚಿತ್ರಗಳನ್ನು ತೆರವುಗೊಳಿಸಲು ಮತ್ತು ಅವುಗಳ ಪ್ರಸಾರ ನಿಲ್ಲಿಸುವುದಕ್ಕಾಗಿ ಏನು ಮಾಡಲಾಗಿದೆ ?, ಇದರ ವರದಿ ಕೂಡ ಕೇಳಿದೆ.

೧. ಆಯೋಗ ಬಳಿ ಇದರ ಸಂದರ್ಭದಲ್ಲಿ ಓರ್ವ ವ್ಯಕ್ತಿ ದೂರು ನೀಡಿದ್ದರು. ಇದರ ನಂತರ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಇದರ ಬಗ್ಗೆ ಅಧ್ಯಕ್ಷೆ ಸ್ವಾತಿ ಮಾಲಿವಾಲ ಇವರು, ಇದು ಬಹಳ ಅವಮಾನಕಾರಕವಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ನೋವು ಉಂಟಾಗುತ್ತಿದೆ. ಈ ಪ್ರಕರಣದಲ್ಲಿ ತಕ್ಷಣ ದೂರು ದಾಖಲೆಸಿ ಆರೋಪಿಗಳನ್ನು ಬಂಧಿಸಬೇಕು ಮತ್ತು ಜಾಲತಾಣದಿಂದ ಈ ಚಿತ್ರಗಳನ್ನು ತೇಗೆಯಬೇಕು ಎಂದು ಹೇಳಿದ್ದಾರೆ.

೨. ದೆಹಲಿ ಪೊಲೀಸರ ವಿಶೇಷ ಶಾಖೆಯ ಅಧಿಕಾರಿಗಳು, ನಮ್ಮ ಬಳಿ ದೂರು ನೀಡಿರುವ ಇಮೇಲ್ ಗಳು ಬಂದಿವೆ. ನಾವು ದೂರು ನೀಡಿರುವವರನ್ನು ಸಂಪರ್ಕಿಸಿದ್ದೇವೆ ನಾವು ಅವರ ಹೇಳಿಕೆ ನಮೂದಿಸಿ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿದ್ದೇವೆ. ಇ-ಮೇಲ್ ಜೊತೆಗೆ ಯಾವ ಮಾಹಿತಿ ನೀಡಲಾಗಿದೆ, ಅದರ ಪ್ರಕಾರ ತನಿಖೆ ಆರಂಭಿಸಿದ್ದೇವೆ. ಜಾಲತಾಣದಲ್ಲಿನ ಚಿತ್ರಗಳು ನಾವು ತೆಗೆಯುತ್ತೇವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಯಾವ ಮಾಹಿತಿ ಮಹಿಳಾ ಆಯೋಗಕ್ಕೆ ದೊರೆಯುತ್ತದೆ ಅದು ಭಾರತದ ರಾಜಧಾನಿಯಲ್ಲಿನ ಪೊಲೀಸರಿಗೆ ಏಕೆ ದೊರೆಯುವುದಿಲ್ಲ ? ಅವರು ನಿದ್ರಿಸುತ್ತಿದ್ದಾರೆಯೇ ?