ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಎತ್ತಿನಗಾಡಿಗಾಗಿ ಎತ್ತನ್ನು ಸಾಕಬೇಕು. ಹಸು ಮತ್ತು ಎತ್ತು ಎರಡನ್ನೂ ಸಾಕಿದರೆ, ಹಸುವಿನಿಂದ ಹಾಲು ಸಿಗುವುದು, ಅಲ್ಲದೇ ಹಸು ಮತ್ತು ಎತ್ತುಗಳಿಂದ ಅವುಗಳ (ಕರು) ಉತ್ಪತ್ತಿಯೂ ಆಗುತ್ತಿರುತ್ತದೆ. ಸಾಧಾರಣವಾಗಿ ೩ ವರ್ಷಗಳಾದ ನಂತರ ಎತ್ತನ್ನು ಗಾಡಿಗೆ ಹೂಡಬಹುದು.

ಹೆಲ್ಪಲೈನ್ ಕ್ರಮಾಂಕ : ಆಪತ್ಕಾಲದ ಸಮೀಪದ ಹಾಗೂ ಸುರಕ್ಷಿತ ಮಿತ್ರ !

ಆಪತ್ಕಾಲದಲ್ಲಿ ಕಠಿಣ ಪರಿಸ್ಥಿತಿಯನ್ನು ಯಾವಾಗ ಎದುರಿಸಬೇಕಾಗುವುದು, ಎಂಬುದನ್ನು ಯಾರೂ ಹೇಳಲು ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಲಭ್ಯವಿರುವ ಎಲ್ಲ ಮಾರ್ಗಗಳ ಉಪಯೋಗವನ್ನು ಅವಶ್ಯಮಾಡಬೇಕು. ಅದರ ಜೊತೆಗೆ ‘ಹೆಲ್ಪಲೈನ್’ ಕ್ರಮಾಂಕಗಳನ್ನು ಕೂಡ ಅವಶ್ಯ ಉಪಯೋಗಿಸಬೇಕು.

ಔದ್ಯೋಗೀಕರಣದ ಗಂಭೀರ ದುಷ್ಪರಿಣಾಮಗಳಿಗೆ ಪ್ರಾಚೀನ ಭಾರತೀಯ ಜೀವನಶೈಲಿಯೇ ಉಪಾಯವಾಗಿದೆ !

ನಿಸರ್ಗದೊಂದಿಗಿನ ವಿಕೃತ ಅಸಾಧಾರಣ ವರ್ತನೆ ಈಗ ಸರ್ವಸಾಧಾರಣ ಆಗಿದೆ; ಆದ್ದರಿಂದ ೨೦೧೬ ರಿಂದ ಪ್ರತಿವರ್ಷ ವಾಯುಮಾಲಿನ್ಯದಿಂದ ಅಂದರೆ, ನಮ್ಮ ವರ್ತನೆಯಿಂದ ೨೦ ರಿಂದ ೨೫ ಲಕ್ಷ ಜನರು ಅಕಾಲ ಮರಣವನ್ನಪ್ಪುತ್ತಿದ್ದಾರೆ ಮತ್ತು ನಮಗೆ ಅದರಿಂದ ಏನೂ ಅನ್ನಿಸುವುದಿಲ್ಲ. ನಮ್ಮ ಔದ್ಯೋಗಿಕ ಜೀವನಶೈಲಿಯೆ ಅದಕ್ಕೆ ಕಾರಣವಾಗಿದೆ.

‘ಶರಿಯತ್ ಕಾಯ್ದೆಗನುಸಾರ ಇಸ್ಲಾಮಿ ಪ್ರದೇಶಗಳಲ್ಲಿ ದೇವಸ್ಥಾನ ಕಟ್ಟುವುದು ಹರಾಮ್ ಆಗಿದೆ !’ – ಹಿಂದೂದ್ವೇಷಿ ವಿಷ ಕಕ್ಕಿದ ಪ್ರಚಾರಕ ಝಾಕಿರ ನಾಯಿಕ್

ಪಾಕಿಸ್ತಾನ ಸರಕಾರ ತನ್ನ ಭೂಮಿಯಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನು ಕಟ್ಟಲು ಆರ್ಥಿಕ ಸಹಾಯ ಮಾಡಿ ಪಾಪವನ್ನು ಮಾಡುತ್ತಿದೆ. ಶರಿಯತ್ ಕಾಯ್ದೆಗನುಸಾರ ಇಸ್ಲಾಮಿ ದೇಶದಲ್ಲಿ ದೇವಸ್ಥಾನವನ್ನು ಕಟ್ಟುವುದು ಹರಾಮ್ ಆಗಿದೆ, ಎಂಬ ಹಿಂದೂದ್ವೇಷಿ ಹೇಳಿಕೆಯನ್ನು ಭಯೋತ್ಪಾದಕರ ‘ಪ್ರೇರಣಾಸ್ಥಾನ’ವಾಗಿರುವ ಇಸ್ಲಾಮಿ ಪ್ರಚಾರಕ ಝಾಕಿರ್ ನಾಯಿಕನು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾನೆ.

ಕೊರೋನಾದಿಂದ ಗುಣಮುಖರಾಗುವ ಪ್ರಮಾಣವು ಇತರ ದೇಶಗಳ ತುಲನೆಯಲ್ಲಿ ಭಾರತದಲ್ಲಿ ಉತ್ತಮ ಸ್ಥಿತಿ ! – ಪ್ರಧಾನಿ ಮೋದಿ

ಈಗ ಯುದ್ಧ ಕೇವಲ ಗಡಿಯಲ್ಲಿ ಮಾತ್ರ ಹೋರಾಡುವುದಲ್ಲ, ದೇಶದಲ್ಲಿಯೂ ಹೋರಾಟ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ನಿಲುವನ್ನು ನಿರ್ಧರಿಸಬೇಕಾಗಬಹುದು. ಕಳೆದ ಕೆಲವು ತಿಂಗಳಿಂದ ದೇಶವು ಒಗ್ಗಟ್ಟಿನಿಂದ ಕೊರೋನಾವನ್ನು ಎದುರಿಸಿದೆ. ಆದ್ದರಿಂದ ಅನೇಕ ಸಂದೇಹಗಳು ತಪ್ಪಾದವು. ದೇಶವು ಕೊರೋನಾದಿಂದ ಗುಣಮುಖರಾಗುತ್ತಿರುವ ಪ್ರಮಾಣವು ಇತರ ದೇಶಗಳ ತುಲನೆಯಲ್ಲಿ ಉತ್ತಮವಾಗಿದೆ, ಮೃತ್ಯುದರವೂ ಅಲ್ಪವಿದೆ

ಕೊರೋನಾವನ್ನು ಮುಗಿಸಲು ಆಗಸ್ಟ್ ೫ ರ ತನಕ ಪ್ರತಿದಿನ ಹನುಮಾನ ಚಾಲೀಸಾ ಪಠಿಸಿ ! – ಸಾಧ್ವಿ ಪ್ರಜ್ಞಾಸಿಂಹ ಠಾಕುರ್ ಇವರಿಂದ ಕರೆ

‘ನಡೆಯಿರಿ ಕೊರೋನಾ ಮಹಾಮಾರಿಯನ್ನು ಮುಗಿಸಲು ಹಾಗೂ ಜನರಿಗೆ ಉತ್ತಮ ಆರೋಗ್ಯಕ್ಕಾಗಿ ನಾವು ಒಂದು ಆಧ್ಯಾತ್ಮಿಕ ಪ್ರಯತ್ನವನ್ನು ಮಾಡೋಣ. ಇಂದಿನಿಂದ ಆಗಸ್ಟ್ ೫ ರ ತನಕ ಪ್ರತಿದಿನ ಸಂಜೆ ೭ ಗಂಟೆಗೆ ತಮ್ಮ ತಮ್ಮ ಮನೆಗಳಲ್ಲಿ ಹನುಮಾನ ಚಾಲೀಸಾದ ಪಠಣವನ್ನು ಮಾಡಬೇಕು.

ನೇಪಾಳಿ ಪೊಲೀಸರಿಂದ ಭಾರತೀಯ ಮಹಿಳೆ ಹಾಗೂ ಆಕೆಯ ಮಗನನ್ನು ಬಂಧಿಸಿ ಹಲ್ಲೆ

ನೇಪಾಳಿ ಪೊಲೀಸರು ಓರ್ವ ಭಾರತೀಯ ಮಹಿಳೆಯನ್ನು ಹಾಗೂ ಆಕೆಯ ಮಗನನ್ನು ಬಂಧಿಸಿ ಹಲ್ಲೆ ಮಾಡಿರುವ ಖೇದಕರ ಘಟನೆ ನಡೆದಿದೆ. ನೇಪಾಳ ಗಡಿಗೆ ತಾಗಿರುವ ಬಿಹಾರ ರಾಜ್ಯದ ಚಂಪಾರಣದಲ್ಲಿಯ ಖರಸಲಾವಾ ಪ್ರದೇಶದಲ್ಲಿ ಓರ್ವ ಮಹಿಳೆಯು ಆಕೆಯ ಮಗದೊಂದಿಗೆ ಹುಲ್ಲು ತೆಗೆಯಲು ಹೋಗಿದ್ದಳು. ಆಗ ಪೊಲೀಸರು ಆಕೆಯನ್ನು ತಡೆದರು. ಆಗ ಆಕೆಯು ‘ನಾನು ಭಾರತದ ಗಡಿಯಲ್ಲಿದ್ದೇನೆ’, ಎಂದು ನೇಪಾಳಿ ಪೊಲೀಸರಿಗೆ ಹೇಳಿದಳು.

ನಾಗರಪಂಚಮಿಯ ದಿನ ನಾಗದೇವತೆಗೆ ಹಾಲು ನೀಡುವುದು ಅವೈಜ್ಞಾನಿಕವಿರುವುದರಿಂದ ಬಡಮಕ್ಕಳಿಗೆ ನೀಡಿ !(ಯಂತೆ)- ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರ ಪುಕ್ಕಟೆ ಸಲಹೆ

ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವುದು ಅವೈಜ್ಞಾನಿಕವಾಗಿದೆ. ಅದರ ಬದಲು ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಬೇಕು, ಅದಲ್ಲದೇ ಕರ್ನಾಟಕದಲ್ಲಿ ಪ್ರತಿ ವರ್ಷ ೪೦ ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ; ಹಾಗಾಗಿ ಅಂತಹವರಿಗೆ ಹಾಲು ನೀಡಿ, ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಪುಕ್ಕಟೆ ಸಲಹೆ ನೀಡಿದ್ದಾರೆ.

ನಾಗರ ಪಂಚಮಿ ದಿನ ಹಿಂದೂಗಳ ಹಬ್ಬಗಳ ಟೀಕಿಸುವ ಸತೀಶ ಜಾರಕಿಹೊಳಿಯವರು ಕ್ಷಮೆಯಾಚನೆ ಮಾಡಬೇಕು

ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವ ಸಂಪ್ರದಾಯವನ್ನು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಟೀಕಿಸುತ್ತಾ, ಇದು ಅವೈಜ್ಞಾನಿಕ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ. ಹಾಗಾಗಿ ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಿ ಎಂದು ಹಿಂದೂ ವಿರೋಧಿ ಕರೆ ನೀಡುವ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ.

ಕರ್ನಾಟಕ ಮತ್ತು ಕೇರಳದಲ್ಲಿ ಅನೇಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ! – ವಿಶ್ವಸಂಸ್ಥೆ

ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅನೇಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಇರಬಹುದು. ಅಲ್-ಖೈದಾ ಕೂಡ ಭಾರತದ ಉಪಖಂಡದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಈ ಸಂಘಟನೆಯು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ೧೦೦ ರಿಂದ ೧೫೦ ಭಯೋತ್ಪಾದಕರನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.