ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ಶ್ರೀ ಬದ್ರಿನಾಥ ಧಾಮದ ಬಾಗಿಲು ತೆರೆಯಲಾಯಿತು !

ಮೇ ೧೫ ರಂದು ಬೆಳಿಗ್ಗೆ ೪.೩೦ ಕ್ಕೆ ಶ್ರೀ ಬದ್ರಿನಾಥ್ ದೇವಾಲಯದ ಬಾಗಿಲನ್ನು ವೈದಿಕ ಪಠಣದೊಂದಿಗೆ ತೆರೆಯಲಾಯಿತು. ಮುಂಜಾನೆ ೩ ರಿಂದ ಬಾಗಿಲು ತೆರೆಯುವ ಆಚರಣೆ ಪ್ರಾರಂಭವಾಗಿತ್ತು. ರಾವಲ್ ಈಶ್ವರ ಪ್ರಸಾದ ನಂಬೂದಾರಿ ಅವರು ವಿಶೇಷ ಪೂಜೆಯನ್ನು ನಡೆಸಿದರು. ಬಾಗಿಲು ತೆರೆದ ನಂತರ ದೇವಾಲಯದಲ್ಲಿ ಲಕ್ಷ್ಮಿ ದೇವಿಯನ್ನು ಸ್ಥಾಪಿಸಲಾಯಿತು.

ಮುಂದಿನ ೬ ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ! – ಯುನಿಸೆಫ್

ಕರೋನಾ ಬಿಕ್ಕಟ್ಟು ಮಕ್ಕಳ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಲು ವಿಫಲವಾದರೆ ೫ ವರ್ಷದೊಳಗಿನ ಮಕ್ಕಳ ಸಾವಿನ ಅಪಾಯ ಹೆಚ್ಚಾಗಬಹುದು. ಮುಂದಿನ ಆರು ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದ್ದಾರೆ.

ಹಿಂದೂಗಳ ನ್ಯಾಯಾಂಗ ಹೋರಾಟಕ್ಕೆ ಸಂದ ಜಯ

ತಮಿಳುನಾಡು ರಾಜ್ಯದಲ್ಲಿ ಎಪ್ರಿಲ್ ೨೨ ರಂದು ‘ಹಿಂದೂ ಧಾರ್ಮಿಕ ಇಲಾಖೆಯು ರಾಜ್ಯದಲ್ಲಿ ಸರಕಾರಿಕರಣ ಗೊಂಡಿರುವ ೩ ಸಾವಿರ ದೇವಸ್ಥಾನಗಳ ಪೈಕಿ ೪೭ ಬೃಹತ್ ಹಿಂದೂ ದೇವಸ್ಥಾನಗಳಿಂದ ಕೊರೋನಾ ಹೋರಾಟದ ಸಹಾಯಕ್ಕಾಗಿ ೧೦ ಕೋಟಿ ರೂಪಾಯಿಯ ನಿಧಿಯನ್ನು ‘ಮುಖ್ಯಮಂತ್ರಿ ಸಹಾಯ ನಿಧಿಗೆ ನೀಡಬೇಕು ಎಂದು ಆದೇಶ ನೀಡಿದ್ದನ್ನು ಮದ್ರಾಸ್ ಉಚ್ಚ ನ್ಯಾಯಾಲಯ ವಜಾ ಮಾಡಿತು.

ಶ್ರೀರಾಮನನ್ನು ಕಾಲ್ಪನಿಕವೆಂದು ಘೋಷಿಸಿದ ಕಾಂಗ್ರೆಸ್ಸಿನ ಕಣ್ಣು ಈಗ ಹಿಂದೂ ದೇವಸ್ಥಾನಗಳಲ್ಲಿನ ಬಂಗಾರದ ಮೇಲೆ ?

ಹಿಂದೂಗಳ ದೇವಸ್ಥಾನಗಳಲ್ಲಿನ ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಕಪಟತನದ ಕರೆ ನೀಡಿದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ್‌ರ ಕಾಂಗ್ರೆಸ್ ಪಕ್ಷ ಭಾರತವನ್ನು ಜಾತ್ಯತೀತ ಎಂದು ಘೋಷಿಸಿ ಅಲ್ಪಸಂಖ್ಯಾತರಿಗಾಗಿ ಯೋಜನೆ ಹಾಗೂ ಹಜ್ ಯಾತ್ರೆ, ಇಫ್ತಾರ, ಮೌಲ್ವಿಗಳ ವೇತನಗಳ ಮೇಲೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದೆ,

ಜಾತ್ಯತೀತ ಎಂದು ಹೇಳಿಕೊಳ್ಳುವ ಭಾರತದಲ್ಲಿ ಧರ್ಮಾಧಾರಿತ ಸಮನಾಂತರ ಹಲಾಲ್ ಆರ್ಥಿಕತೆ ಏಕೆ ಬೇಕು ?

ಮೂಲತಃ ಮಾಂಸದ ವಿಷಯದಲ್ಲಿ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹನಿರ್ಮಾಣಸಂಸ್ಥೆಗಳು, ಮಾಲ್ ಹೀಗೆ ಅನೇಕ ಅಂಶಗಳಲ್ಲಿ ಮಾಡಲಾರಂಭಿಸಿದ್ದಾರೆ. ಅದಕ್ಕಾಗಿ ಖಾಸಗಿ ಇಸ್ಲಾಮಿ ಸಂಸ್ಥೆಗಳಿಂದ ‘ಹಲಾಲ್ ಪ್ರಾಮಾಣಪತ್ರ’ ತೆಗೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಪಾಲಕರೇ, ಮಕ್ಕಳ ಮೇಲೆ ಎಳೆವಯಸ್ಸಿನಲ್ಲಿ ಸಂಸ್ಕಾರ ಮಾಡುವ ಮಹತ್ವ ಅರಿಯಿರಿ !

ತಂದೆ-ತಾಯಂದಿರೇ, ನಿಮ್ಮ ‘ಮುದ್ದಿನ ಮಗುವಿನ ಸಂದರ್ಭದಲ್ಲಿಯೂ ಹೀಗೆಯೇ ಆಗುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಅವರ ಮೇಲೆ ಒಳ್ಳೆಯ ಸಂಸ್ಕಾರಗಳನ್ನು ಮಾಡುವುದು ಕಠಿಣವಾಗುತ್ತದೆ; ಆದರೆ ಸಣ್ಣವಯಸ್ಸಿನಲ್ಲಿ ಮನಸ್ಸು ಸಂಸ್ಕಾರಕ್ಷಮವಾಗಿರುವುದರಿಂದ ಅವರ ಮೇಲೆ ಒಳ್ಳೆಯ ಸಂಸ್ಕಾರ ಮಾಡುವುದು ಸುಲಭವಾಗಿದೆ.

ದೋಷಿಗಳ ಮೇಲೆ ಕೂಡಲೇ ಕ್ರಮಕೈಗೊಂಡು ದೇಶದ ಇತರ ಯೋಜನೆಗಳನ್ನು ಪರಿಶೀಲಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ಒಂದೆಡೆ ದೇಶ ಕೊರೋನಾ ರೋಗಾಣುದೊಂದಿಗೆ ಹೋರಾಡುತ್ತಿರುವಾಗ ‘ಭೋಪಾಲ್ ಅನಿಲ ದುರಂತ’ವನ್ನು ನೆನಪಿಸುವ ಗಂಭೀರ ಘಟನೆ ವಿಶಾಖಾಪಟ್ಟಣಮ್‌ದಲ್ಲಿ ಘಟಿಸಿದೆ. ಅಲ್ಲಿ ೧೧ ಜನರು ಮೃತಪಟ್ಟಿದ್ದು ಅನೇಕರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಬೆದರಿಕೆಯೊಡ್ಡಿದ ಮತಾಂಧ ಪೊಲೀಸನ ಬಂಧನ

ಸಾಮಾಜಿಕ ಮಾಧ್ಯಮಗಳಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಮೇಲೆ ಗುಂಡಿಕ್ಕಿ ಕೊಲ್ಲುವ ಬೆದರಿಕೆಯೊಡ್ಡಿದ ತನ್ವೀರ್ ಖಾನ್ ಈ ಪೊಲೀಸನನ್ನು ಬಂಧಿಸಲಾಗಿದೆ. ಎಪ್ರಿಲ್ ೨೪ ರಂದು ಆತ ಫೇಸ್‌ಬುಕ್‌ನಲ್ಲಿ ಬೆದರಿಕೆಯೊಡ್ಡಿದ್ದನು. ತನ್ವೀರ್ ಖಾನ್ ಗಾಝಿಪುರದ ದಿಲದಾರ್‌ನಗರ ಭಾಗದಲ್ಲಿ ವಾಸವಾಗಿದ್ದು ಹಾಗೂ ಬಿಹಾರದ ನಾಲಂದಾದಲ್ಲಿ ಪೊಲೀಸ್ ಪೇದೆ ಎಂದು ನೇಮಿಸಲಾಗಿತ್ತು.

ಕೇರಳದ ಗುರುವಾಯೂರ ದೇವಸ್ಥಾನದಿಂದ ಮುಖ್ಯಮಂತ್ರಿಯ ಸಹಾಯ ನಿಧಿಗೆ ೫ ಕೋಟಿ ಹಣ ನೀಡಲು ನಿರ್ಧಾರ

ಕೇರಳದಲ್ಲಿ ಸರಕಾರಿಕರಣಗೊಳಿಸಿದ ಗುರುವಾಯೂರ ದೇವಸ್ಥಾನದ ಸ್ಥಿರ ಠೇವಣಿಯಿಂದ ಕೊರೋನಾದ ವಿರುದ್ಧದ ಹೋರಾಟಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಹಾಯ ನಿಧಿಗೆ ೫ ಕೋಟಿ ರೂಪಾಯಿ ಹಣವನ್ನು ನೀಡಲಾಗುವುದು ಎಂದು ಗುರುವಾಯೂರ ದೇವಸ್ಥಾನ ಸಮಿತಿಯು ನಿರ್ಣಯವನ್ನು ತೆಗೆದುಕೊಂಡಿದೆ. ಇದಕ್ಕೆ ಅಖಿಲ ಭಾರತೀಯ ಶಬರಿಮಾಲೆ ಕೃತಿ ಸಮಿತಿಯು ವಿರೋಧವನ್ನು ವ್ಯಕ್ತಪಡಿಸಿದೆ.

ಪಾಕ್ ನಗರಗಳಲ್ಲಿ ಕ್ರೈಸ್ತರಿಂದ ಮಾಡಿಸಲಾಗುತ್ತದೆ ಚರಂಡಿ ಸ್ವಚ್ಚತೆ !

ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಅಲ್ಲಿಯ ಕ್ರೈಸ್ತರಿಗೆ ಬಲವಂತವಾಗಿ ಚರಂಡಿ ಸ್ವಚ್ಚತೆಯ ಕೆಲಸಕ್ಕೆ ಹಾಕುತ್ತಾರೆ. ಅಲ್ಲಿಯ ಅನೇಕ ಹಿಂದುಳಿದ ವರ್ಗದವರು ಕ್ರೈಸ್ತಧರ್ಮವನ್ನು ಸ್ವೀಕಾರ ಮಾಡಿದ್ದಾರೆ; ಆದರೂ ಅವರಿಂದ ಚರಂಡಿ ಸ್ವಚ್ಚತೆಯನ್ನು ಮಾಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಅವರಿಗೆ ಮಾಸ್ಕ್ ಅಥವಾ ಕೈಗವಸುಗಳನ್ನು ಕೊಡುತ್ತಿಲ್ಲ. ಇದರಿಂದ ಅನೇಕ ಜನರು ಮೃತಪಟ್ಟಿದ್ದಾರೆ