ರಾಷ್ಟ್ರಪತಿ ರಾಮನಾಥ ಕೋವಿಂದ ಇವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಚೀನಾದೊಂದಿಗೆ ನಡೆಯುತ್ತಿರುವ ಘರ್ಷಣೆಯ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಜುಲೈ ೫ ರಂದು ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಇವರನ್ನು ಭೇಟಿಯಾದರು. ಸುಮಾರು ಅರ್ಧಗಂಟೆ ಭೇಟಿ ಮಾಡಿದ ಸಮಯದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಷಯದ ಬಗ್ಗೆ ಮಹತ್ವದ ಅಂಶಗಳ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ.

ಕಂಧಮಾಲ್(ಒಡಿಶಾ)ದಲ್ಲಿ ೪ ನಕ್ಸಲರ ಹತ್ಯೆ

ಇಲ್ಲಿಯ ತುಮುದಿ ಆಣೆಕಟ್ಟು ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ರಕ್ಷಣಾಪಡೆಗಳು ೪ ನಕ್ಸಲರ ಹತ್ಯೆ ಮಾಡಿದ್ದಾರೆ. ಇಲ್ಲಿ ನಕ್ಸಲರು ಅಡಗಿರುವ ಮಾಹಿತಿ ಸಿಕ್ಕಿದ ಮೇರೆಗೆ ರಕಣಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಚಕಮಕಿ ಆರಂಭವಾಯಿತು. ಈ ನಕ್ಸಲರಿಂದ ೧೫ ಕೆಜಿ ಸ್ಪೋಟಕಗಳು ಹಾಗೂ ೨೮ ಡಿಟೊನೆಟರ್ಸ ಪತ್ತೆಯಾಗಿವೆ.

ಕಾಶ್ಮೀರ ಗಡಿಯಲ್ಲಿ ತನ್ನ ಸೈನ್ಯವನ್ನು ಹೆಚ್ಚಿಸಿದ ಪಾಕ್

ಭಾರತ ಹಾಗೂ ಚೀನಾದ ನಡುವೆ ಪೂರ್ವ ಲಡಾಖ್‌ನಲ್ಲಿನ ಗಡಿಯಲ್ಲಿ ನಡೆಯುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಪುಂಛಟಗತ್‌ನ ಪಾಕ್‌ಆಕ್ರಮಿತ ಕಾಶ್ಮೀರದಲ್ಲಿನ ಕೊತಲೀ, ರಾವಲಕೋಟ್, ವಿಂಭರ್, ಬಾಗ್, ಮುಝಫ್ಫರಾಬಾದ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಹೆಚ್ಚುವರಿ ಬಟಾಲಿಯನ್‌ಗಳನ್ನು ನೇಮಿಸಿದೆ.

ಆಸ್ಸಾಮ್‌ನಲ್ಲಿ ಜಮಿಯತ್ ಉಲೆಮಾದ ಉಪಾಧ್ಯಕ್ಷ ಹಾಗೂ ಶಾಸಕನ ತಂದೆಯ ಅಂತಿಮಸಂಸ್ಕಾರಕ್ಕೆ ೧೦ ಸಾವಿರಕ್ಕಿಂತಲೂ ಹೆಚ್ಚು ಜನರ ಸಹಭಾಗ

ಅಖಿಲ ಭಾರತೀಯ ಜಮಿಯತ್ ಉಲೇಮಾ ಹಾಗೂ ಆಮಿರ-ಎ-ಶರಿಯತ್‌ನ ಉಪಾಧ್ಯಕ್ಷ ಖೈರುಲ್ ಇಸ್ಲಾಮ್ (೮೭ ವರ್ಷ) ಇವರ ಅಂತಿಮಸಂಸ್ಕಾರಕ್ಕೆ ೧೦ ಸಾವಿರಕ್ಕಿಂತಲೂ ಹೆಚ್ಚು ಜನರು ಸೇರಿದ್ದರಿಂದ ಕೊರೋನಾ ಹಾವಳಿಯಿಂದಾಗಿ ೩ ಗ್ರಾಮಗಳನ್ನು ‘ಸೀಲ್’ ಮಾಡಲಾಗಿದೆ. ಇಲ್ಲಿಯ ‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್’ನ ಶಾಸಕ ಅಮಿನುಲ್ ಇಸ್ಲಾಮ್‌ನ ತಂದೆಯಾಗಿದ್ದರು.

ಭಗವಾನ್ ಶ್ರೀಕೃಷ್ಣನನ್ನು ‘ವ್ಯಭಿಚಾರಿ ಹಾಗೂ ‘ಉನ್ಮತ್ತನೆಂದು ಕರೆಯುವ ‘ಹಿಂದುಸ್ತಾನ್ ಟೈಮ್ಸ್ ದೈನಿಕದ ಪತ್ರಕರ್ತೆ ಸೃಷ್ಟೀ ಜಸ್‌ವಾಲ್ ಪದಚ್ಯುತಿ

ಭಗವಾನ್ ಶ್ರೀಕೃಷ್ಣನನ್ನು ‘ವ್ಯಭಿಚಾರಿ ಹಾಗೂ ‘ಉನ್ಮತ್ತನೆಂದು ಹೇಳುವ ‘ಹಿಂದುಸ್ತಾನ್ ಟೈಮ್ಸ್ ಎಂಬ ಆಂಗ್ಲ ದೈನಿಕದ ಮಹಿಳಾ ಪತ್ರಕರ್ತೆ ಸೃಷ್ಟಿ ಜಸವಾಲ್‌ರವರನ್ನು ಆ ದೈನಿಕವು ಕೆಲಸದಿಂದ ವಜಾ ಮಾಡಿದೆ. ಮತ್ತೊಂದೆಡೆ ಸೃಷ್ಟಿ ತನ್ನ ‘ಟ್ವಿಟರ್ ಹಾಗೂ ‘ಇನ್ಸ್‌ಟಾಗ್ರಾಮ್ ಖಾತೆಯನ್ನು ನಿಲ್ಲಿಸಿದ್ದಾರೆ. ‘ಹಿಂದುಸ್ತಾನ್ ಟೈಮ್ಸ್ ಟ್ವಿಟ್ ಮಾಡಿ ‘ಹಿಂದುಸ್ತಾನ್ ಟೈಮ್ಸ್ ಸೃಷ್ಟಿಯವರ ವಿಚಾರಗಳನ್ನು ಬೆಂಬಲಿಸುವುದಿಲ್ಲ.

ಚೌಬೇಪೂರ್‌ನ ಪೋಲಿಸ್ ಉಪನಿರೀಕ್ಷಕರಾದ ವಿನಯ ತಿವಾರಿ ವಜಾ : ಗುಂಡಾ ವಿಕಾಸ ದುಬೆಗೆ ಪೋಲಿಸ್ ಕಾರ್ಯಾಚರಣೆಯ ಮುನ್ಸೂಚನೆ ನೀಡಿದ ಆರೋಪ

ಇಲ್ಲಿಯ ೮ ಪೊಲೀಸರ ಕೊಲೆಯ ಪ್ರಕರಣದಲ್ಲಿ ಚೌಬೆಪೂರ್‌ದ ಪೊಲೀಸ್ ಉಪನಿರೀಕ್ಷಕ ವಿನಯಯ್ ತಿವಾರಿಯವರನ್ನು ವಜಾ ಮಾಡಿದ ಮಾಹಿತಿಯನ್ನು ಪೊಲೀಸ್ ಮಹಾನಿರೀಕ್ಷಕ ಮೋಹಿತತ್ ಅಗ್ರವಾಲ್‌ರವರು ನೀಡಿದ್ದರು. ತಿವಾರಿಯವರು ಗುಂಡಾ ವಿಕಾಸಸ್ ದುಬೆಗೆ ಪೊಲೀಸ್ ಕಾರ್ಯಾಚರಣೆಯ ಮುನ್ಸೂಚನೆ ನೀಡಿರುವಂತೆ ಆರೋಪಿಸಲಾಗಿದೆ.

‘ಸಡಕ್ ೨ ಚಲನಚಿತ್ರದ ಪೋಸ್ಟ್‌ರ್‌ನಲ್ಲಿ ಕೈಲಾಸ ಪರ್ವತದ ಛಾಯಾಚಿತ್ರ !

‘ಓಟಿಟಿನ ಮೇಲೆ ಶೀಘ್ರದಲ್ಲಿಯೇ ಪ್ರದರ್ಶನಗೊಳ್ಳಲಿರುವ ‘ಸಡಕ್ ೨ ಎಂಬ ಚಲನಚಿತ್ರದ ಫಲಕದ ಮೇಲೆ (ಪೋಸ್ಟರ್) ಕೈಲಾಸ ಮಾನಸಸರೋವರ ಪರ್ವತದ ಛಾಯಾಚಿತ್ರವನ್ನು ತೋರಿಸಿ ಅದರ ಮೇಲಿನ ಬದಿಯಲ್ಲಿ ‘ಸಡಕ್ ೨ ಎಂದು ಬರೆಯಲಾಗಿದೆ. ಅದೇ ರೀತಿ ಅದರ ಕೆಳಗೆ ರಸ್ತೆಯ ಚಿತ್ರವನ್ನು ತೋರಿಸಲಾಗಿದೆ.

ತಬಲಿಗೀ ಜಮಾತ್‌ನ ೨ ಸಾವಿರದ ೬೦೦ ಸದಸ್ಯರ ಮೇಲಿನ ಖಟ್ಲೆ ಮುಗಿಯುವ ತನಕ ದೇಶಬಿಟ್ಟು ಹೊಗಲು ಸಾಧ್ಯವಿಲ್ಲ !

ಮಾರ್ಚ್ ೨೦೨೦ ರಲ್ಲಿ ದೆಹಲಿಯ ನಿಝಾಮುದ್ದೀನ್‌ನಲ್ಲಿ ತಬಲಿಗೀ ಜಮಾತ್‌ನ ಮರಕಝನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕೊರೋನಾ ಸೋಂಕನ್ನು ದೇಶದಾದ್ಯಂತ ಹಬ್ಬಿಸಿದ ೨ ಸಾವಿರದ ೬೦೦ ಕ್ಕೂ ಹೆಚ್ಚು ತಬಲಿಗೀಗಳು ತಮ್ಮ ದೇಶಕ್ಕೆ ಹೋಗಲು ಸಾಧ್ಯವಿಲ್ಲ, ಎಂಬ ಪ್ರತಿಜ್ಞಾಪತ್ರವನ್ನು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ.

ನ್ಯಾಯಾಲಯದಲ್ಲಿ ದಿನಾಂಕ ೧೩ ರಂದು ಅನುಪಸ್ಥಿತನಾಗಿದ್ದರಿಂದ ಅತ್ಯಾಚಾರಿ ಬಿಷಪ್ ಮುಲಕ್ಕಲ್‌ಗೆಬಂಧಿಸುವುದಾಗಿ ನ್ಯಾಯಾಲಯದ ಎಚ್ಚರಿಕೆ

ಪಂಜಾಬಿನ ಜಾಲಂಧರ್‌ನ ಮಾಜೀ ಬಿಷಪ್ ಫ್ರಾಂಕೋ ಮುಲಕ್ಕಲ್‌ನ ಮೇಲೆ ೪೪ ವರ್ಷದ ನನ್ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಒಂದು ವೇಳೆ ಅವನು ಜುಲೈ ೧೩ರಂದು ಮುಲಕ್ಕಲ್‌ನು ನ್ಯಾಯಾಲಯದಲ್ಲಿ ಹಾಜರಾಗದಿದ್ದರೆ ಅವನನ್ನು ಬಂಧಿಸಲಾಗುವುದು, ಎಂದು ಎಚ್ಚರಿಕೆ ನೀಡಿದೆ

ಲೇಹ್‌ ಗೆ ದಿಢೀರ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಚೀನಾದಿಂದ ಭಾರತಕ್ಕಾಗುವ ಆತಂಕದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ ೩ ರಂದು ಲೇಹಗೆ ದಿಢೀರ್ ಭೇಟಿ ನೀಡಿದ್ದಾರೆ. ಅವರು ನೀಮು ಎಂಬಲ್ಲಿಯ ‘ಫಾರ್‌ವರ್ಡ್ ಪೋಸ್ಟ’ಗೆ ಹೋಗಿ ಸೈನಿಕರನ್ನು ಭೇಟಿಯಾದರು. ಇದು ಸಮುದ್ರ ಮಟ್ಟಕ್ಕಿಂತ ಸುಮಾರು ೧೧ ಸಾವಿರ ಅಡಿಯಷ್ಟು ಎತ್ತರದಲ್ಲಿದ್ದು ಇದು ಜಗತ್ತಿನ ಎಲ್ಲಕ್ಕಿಂತ ಎತ್ತರದ ಹಾಗೂ ಸವಾಲಿನ ಸ್ಥಳ ಎಂದು ಹೇಳಲಾಗುತ್ತದೆ.