‘ಸೆಕ್ಯುಲರ್ ಸರಕಾರವು ದೇವಸ್ಥಾನಗಳನ್ನು ನಡೆಸುವುದೆಂದರೆ ನಾಸ್ತಿಕರ ಕೈಯಲ್ಲಿ ಧಾರ್ಮಿಕ ದೇವಸ್ಥಾನಗಳ ಆಡಳಿತವಿರುವಂತಾಗಿದೆ ! – ಟಿ.ಆರ್. ರಮೇಶ, ಅಧ್ಯಕ್ಷರು, ಟೆಂಪಲ್ ವರ್ಶಿಪರ್ಸ್ ಸೊಸೈಟಿ, ತಮಿಳುನಾಡು

ಇದರಲ್ಲಿ ಭಾಗ್ಯನಗರ (ಹೈದರಾಬಾದ್) ಚಿಲ್ಕೂರ್ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸಿ.ಎಸ್. ರಂಗರಾಜನಜಿ, ಕೇರಳದ ‘ಪೀಪಲ್ ಫಾರ್ ಧರ್ಮ ಇದರ ಅಧ್ಯಕ್ಷೆ ಸೌ. ಶಿಲ್ಪಾ ನಾಯರ್, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕಿರಣ ಬೆಟ್ಟದಾಪುರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.

ಜಗತ್ತಿನಾದ್ಯಂತದ ಮಾನವರೇ, ಕೊರೋನಾ ವಿಷಾಣುವಿನ ಪ್ರಕೋಪವನ್ನು ಅರಿತುಕೊಂಡು ಅದನ್ನು ಗೆಲ್ಲಲು ಸಾಧನೆಯನ್ನು ಮಾಡಿರಿ !

ನಿಜ ಹೇಳಬೇಕೆಂದರೆ ಈ ಸಂಕಟವನ್ನು ಎದುರಿಸಲು ಆಧ್ಯಾತ್ಮಿಕ ಶಕ್ತಿ ಬೇಕಾಗುತ್ತದೆ ! ಇದು ಕೂಡ ಕೆಲವು ಕಾರಣಗಳಿಂದ ಖಾತ್ರಿಯಾಗಿದೆ. ಅಮೇರಿಕಾ, ಇಟಲಿ, ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಕೊರೋನಾದಿಂದ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಅದರಿಂದ ಪ್ರತಿದಿನ ಸಾವಿರಾರು ಜನರು ಇರುವೆಗಳಂತೆ ಸಾಯುತ್ತಿದ್ದಾರೆ.

ಭಾರತದಲ್ಲಿ ಪತ್ತೆ ಆಯಿತು ಭಗವಾನ ಶಂಕರನ ೨೮ ಸಾವಿರದ ೪೫೦ ವರ್ಷಗಳಷ್ಟು ಪ್ರಾಚೀನ ಮೂರ್ತಿ ಅಂದರೆ ದ್ವಾಪರಯುಗದ್ದಾಗಿದೆ !

ಭಾರತದಲ್ಲಿ ‘ಕಲ್ಪ ವಿಗ್ರಹ’ ಈ ಹೆಸರಿನಲ್ಲಿ ಗುರುತಿಸಲ್ಪಡುವ ಭಗವಾನ ಶಂಕರನ ಧಾತುವಿನ ಮೂರ್ತಿಯು ಜಗತ್ತಿನಲ್ಲಿ ಇಲ್ಲಿಯವರೆಗೆ ಸಿಕ್ಕಿರುವ ಅನೇಕ ಮೂರ್ತಿಗಳ ಪೈಕಿ ಎಲ್ಲಕ್ಕಿಂತ ಪ್ರಾಚೀನ ಮೂರ್ತಿಯಾಗಿದೆ ಎಂದು ತಿಳಿದುಬಂದಿದೆ. ಈ ಮೂರ್ತಿ ಒಂದು ಮರದ ಪೆಟ್ಟಿಗೆಯಲ್ಲಿ ಇಡಲಾಗಿತ್ತು.

ದೇಶದಾದ್ಯಂತ ಇಲ್ಲಿಯವರೆಗೆ ೯ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಕೊರೋನಾದ ಸೋಂಕು

ಇಂದು ದೇಶದಾದ್ಯಂತ ಕೊರೋನಾ ಪೀಡಿತರ ಸಂಖ್ಯೆ ೯ ಲಕ್ಷ ೬ ಸಾವಿರದ ೭೫೨ ತನಕ ತಲುಪಿದೆ. ಈ ಪೈಕಿ ಚಿಕಿತ್ಸೆ ನಡೆಯುತ್ತಿರುವ ರೋಗಿಗಳ ಸಂಖ್ಯೆ ೩ ಲಕ್ಷ ೧೧ ಸಾವಿರದ ೫೬೫ ಇದ್ದು ಇಲ್ಲಿಯವರೆಗೆ ೫ ಲಕ್ಷ ೭೧ ಸಾವಿರದ ೪೬೦ ರೋಗಿಗಳು ಗುಣಮುಖರಾಗಿದ್ದಾರೆ.

‘ಕೊರೋನಾ ಹಬ್ಬಿಸಿದ ಬಗ್ಗೆ ಒಂದೇ ಧರ್ಮದ ಮೇಲೆ ಆರೋಪಿಸಲಾಯಿತು !’(ಅಂತೆ) – ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ

ಕೊರೋನಾವನ್ನು ಹಬ್ಬಿಸಿದ ತಬಲಿಗೀ ಜಮಾತ್‌ನ ಮೇಲೆ ಟೀಕೆಗಳಾದವು. ಇದರ ಬಗ್ಗೆ ಅವರು ಮಾತನಾಡುತ್ತಿದ್ದರು. ಕೊರೋನಾ ಮುಕ್ತಿಗಾಗಿ ಪ್ರಾರ್ಥಿಸಲು ಶಿವಕುಮಾರ ಇವರು ಇಲ್ಲಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮುಫ್ತಿಯವರು ಕೊರೋನಾದಿಂದ ಮುಕ್ತಿ ಸಿಗಲು ಪ್ರಾರ್ಥನೆ ಮಾಡಿದರು.

ಅನಂತನಾಗನಲ್ಲಿ ಒಬ್ಬ ಭಯೋತ್ಪಾದಕನ ಹತ್ಯೆ

ಅನಂತನಾಗ(ಜಮ್ಮು-ಕಾಶ್ಮೀರ) – ಇಲ್ಲಿಯ ಶ್ರೀಗುಫವಾಡಾದಲ್ಲಿ ಬೆಳಗಿನ ಜಾವ ನಡೆದ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಯಿತು. ರಕ್ಷಣಾಪಡೆಗೆ ಸಿಕ್ಕಿದ ಮಾಹಿತಿಯ ಮೇರೆಗೆ ಇಲ್ಲಿ ಶೋಧ ಕಾರ್ಯಾಚರಣೆಯನ್ನು ಮಾಡುತ್ತಿರುವಾಗ ಈ ಚಕಮಕಿ ನಡೆಯಿತು.

ಬಂಗಾಲದಲ್ಲಿ ಮಾರುಕಟ್ಟೆಯಲ್ಲೇ ಭಾಜಪದ ಶಾಸಕನ ಮೃತದೇಹ ನೇತಾಡುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿತು !

ಭಾಜಪದ ಶಾಸಕ ದೇವೇಂದ್ರ ನಾಥ ರೇ ಇವರ ಮೃತದೇಹವು ಇಲ್ಲಿಯ ಮಾರುಕಟ್ಟೆಯ ಒಂದು ಅಂಗಡಿಯ ಮುಂದೆ ನೇತಾಡುತ್ತಿರುವ ಸ್ಥಿತಿಯಲ್ಲಿ ಸಿಕ್ಕಿರುವ ಆಘಾತಕಾರಿ ಘಟನೆ ನಡೆದಿದೆ. ರೇ ಇವರ ಮನೆಯಿಂದ ೧ ಕಿ.ಮೀ ದೂರದಲ್ಲಿ ಈ ಮೃತದೇಹ ಸಿಕ್ಕಿದೆ.

ಬಂಗಾಲದ ಹಿಂದುತ್ವನಿಷ್ಠ ನಾಯಕ ತಪನ ಘೋಷ ನಿಧನ

ಬಂಗಾಲದ ಹಿಂದುತ್ವನಿಷ್ಠ ಸಂಘಟನೆಯಾದ ‘ಹಿಂದೂ ಸಂಹತಿ’ಯ ಸಂಸ್ಥಾಪಕ, ‘ಸಿಂಹ ವಾಹಿನಿ’ಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿಂದುತ್ವದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಅಭ್ಯಾಸಕರಾದ ತಪನ ಘೋಷ ಇವರು ಕೊರೋನಾದ ಸೋಂಕಿನಿಂದ ನಿಧನರಾದರು. ಅವರು ೨೦೦೭ ರಲ್ಲಿ ‘ಹಿಂದೂ ಸಂಹತಿ’ಯ ಸ್ಥಾಪನೆಯನ್ನು ಮಾಡಿದ್ದರು. ಬಂಗಾಲದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದರು.

ಘಾಟಶಿಲಾ (ಝಾರಖಂಡ) ಇಲ್ಲಿನ ಶಾಲೆಯಲ್ಲಿ ಶಿಶುವರ್ಗದ ಮಕ್ಕಳಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯ ಬಾಯಿಪಾಠ ಮಾಡಿಸುತ್ತಿರುವುದು ಪೋಷಕರ ವಿರೋಧದ ನಂತರ ರದ್ದು

ಇಲ್ಲಿ ಸಂತ ನಂದಲಾಲ ಸ್ಮೃತಿ ವಿದ್ಯಾ ಮಂದಿರ ಶಾಲೆಯಲ್ಲಿ ಸಣ್ಣ ಹಾಗೂ ದೊಡ್ಡ ಶಿಶುವರ್ಗದ ಮಕ್ಕಳ ಬೇರೆ ಬೇರೆ ಗುಂಪುಗಳನ್ನು ಮಾಡಿ ಭಾರತ ಸಹಿತ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಬಾಯಿಪಾಠ ಮಾಡಲು ಹೇಳಲಾಗಿತ್ತು. ಇದರಿಂದ ಮಕ್ಕಳ ಪೋಷಕರು ಇದರ ಬಗ್ಗೆ ಆಕ್ಷೇಪವೆತ್ತಿ ಶಾಲೆಯ ಆಡಳಿತಮಂಡಳಿಗೆ ‘ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕಲಿಸಬಾರದು’, ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಭಾಜಪ ಸರಕಾರ ಶೀಘ್ರದಲ್ಲೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರಲಿದೆ

ಕರ್ನಾಟಕದಲ್ಲಿ ಶೀಘ್ರದಲ್ಲೇ ಗೋಹತ್ಯೆ, ಗೋಮಾಂಸ ಮಾರಾಟ, ಕಸಾಯಿಖಾನೆಗಾಗಿ ಗೋವುಗಳ ಸಾಗಾಟ ಹಾಗೂ ಮಾರಾಟದ ಮೇಲೆ ನಿರ್ಬಂಧ ಹೇರಲಿದೆ, ಎಂಬ ಮಾಹಿತಿಯನ್ನು ಪಶುಸಂಗೋಪಾಸನೆ ರಾಜ್ಯ ಸಚಿವ ಪ್ರಭು ಚೌಹಾಣ ಇವರು ನೀಡಿದರು. ಭಾಜಪ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಗೋ ಹತ್ಯಾ ನಿಷೇಧ ಮಾಡುವ ಆಶ್ವಾಸನೆಯನ್ನು ನೀಡಿತ್ತು.