ಯಾವುದಾದರೂ ಕಳ್ಳನು ತನ್ನ ಹೆಸರು ಬದಲಾಯಿಸಿ ಗಾಂಧಿ ಎಂದು ಹೇಳಿದರೆ ಅವನು ಸಂತ ಆಗುವನೇ ? – ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ್ ಬಿಸ್ವ ಶರ್ಮ ಇವರು ‘ಗಾಂಧಿ’ ಅಡ್ಡ ಹೆಸರಿನಿಂದ ಕಾಂಗ್ರೆಸ್ ಕುರಿತು ಟೀಕೆ !

ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ್ ಬಿಸ್ವ ಶರ್ಮ

ಗೋಹಾಟಿ (ಅಸ್ಸಾಂ) – ನಾನು ಬಹಳ ದಿನದಿಂದ ಸಂಶೋಧನೆ ನಡೆಸಿದ್ದೇನೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇವರು ಯಾವ ಸೂತ್ರಗಳ ಪ್ರಕಾರ ಗಾಂಧಿ ಆಗಿದ್ದಾರೆ ? ಮ. ಗಾಂಧಿ ಇವರು ದೇಶ ಸ್ವಾತಂತ್ರ್ಯಗೊಳಿಸಿದರು ಮತ್ತು ನೀವು ‘ಗಾಂಧಿ’ ಈ ಪದವಿ ಧರಿಸಿದಿರಿ. ನೀವೆಲ್ಲರೂ ನಕಲಿ ಗಾಂಧಿಗಳಾಗಿದ್ದೀರಾ. ನಾಳೆ ಯಾವುದಾದರೂ ಕಳ್ಳನು ತನ್ನ ಹೆಸರು ಬದಲಾಯಿಸಿ ಗಾಂಧಿ ಮಾಡಿಕೊಂಡರೆ, ಆಗ ಅವನು ಸಂತ ಆಗುವನೇ ? ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಇಲ್ಲಿಯ ಭಾಜಪದ ಕಾರ್ಯಾಲಯದಲ್ಲಿ ಭಾಜಪ ಮಹಿಳಾ ಮೋರ್ಚಾದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಪ್ರಶ್ನೆ ಕೇಳಿದರು.

ಮುಖ್ಯಮಂತ್ರಿ ಸರಮಾ ಇವರು ಮಂಡಿಸಿರುವ ಸೂತ್ರಗಳು,

೧. ‘ಭಾಜಪಕ್ಕೆ ‘ಭಾರತ’ ಹೆಸರಿನ ಭಯವಿದೆ, ಎಂದು ಕಾಂಗ್ರೆಸ್ಸಿನ ಹೇಳಿಕೆ ಆಗಿದೆ. ಯಾವಾಗ ಮತ ಪಡೆಯುವ ಸಮಯ ಬರುತ್ತದೆ ಆಗ ಕಾಂಗ್ರೆಸ್ ‘ಭಾರತ ಜೋಡೋ ಯಾತ್ರೆ’ ನಡೆಸುತ್ತದೆ. ಚುನಾವಣೆ ಮುಗಿದ ನಂತರ ಅದು ಅದರ ಮೈತ್ರಿಕೂಟದ ಹೆಸರು ಬದಲಾಯಿಸಿ ಇಂಡಿಯಾ ಮಾಡಿದರು, ನೀವೆಲ್ಲರೂ ಇಂಡಿಯಾ ಹೇಗೆ ?

೨. ಭಾರತದ ಮೊದಲು ಹಗರಣ ಒಂದು ಶೀರ್ಷಿಕೆಯಿಂದ ಆರಂಭವಾಗಿದೆ. ಶೀರ್ಷಿಕೆಯ ಪ್ರಕಾರ ಕಾಂಗ್ರೆಸ್ ನಿಂದ ದೇಶದ ಹೆಸರು ಕಬಳಿಸಲಾಯಿತು ಮತ್ತು ಇಂಡಿಯಾ ಆಯಿತು. ಕಾಂಗ್ರೆಸ್ಸಿಗರು ಎಂದು ಕೂಡ ಭಾರತದ ಗೌರವ ಹೆಚ್ಚಿಸಲಿಲ್ಲ. ದೇಶದ ಹೆಸರಿನಲ್ಲಿ ಕಾಂಗ್ರೆಸ್ಸಿನ ಮನೆತನದ ರಾಜಕಾರಣ ಹೆಚ್ಚಿಸಿ ದೇಶ ಒಡೆಯುವ ಕೆಲಸ ಮಾಡಿದರು. ಅವರಿಗೆ ‘ಇಂಡಿಯಾ’ ಅನ್ನುವ ಅಧಿಕಾರ ಕೂಡ ಇಲ್ಲ, ಭಾರತದ ಹೆಸರು ಕೂಡ ಅವರು ಹೇಳಬಾರದು.

ಕಾಂಗ್ರೆಸ್ಸಿನ ಪ್ರತ್ಯುತ್ತರ

ಮುಖ್ಯಮಂತ್ರಿ ಸರಮಾ ಇವರ ಟೀಕೆಯ ಕುರಿತು ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರೀನೆತ ಇವರು ಪ್ರತ್ಯುತ್ತರ ನೀಡುವಾಗ, ಹೇಗೆ ನಿಮ್ಮ ಹೆಸರು ನಿಮ್ಮ ತಂದೆ ಕೈಲಾಸನಾಥ ತಿವಾರಿ ಇವರಿಂದ ಬಂದಿದೆ ಹಾಗೆ ರಾಜೀವ ಗಾಂಧಿ ಇವರ ತಂದೆ ಫಿರೋಜ ಗಾಂಧಿ ಇವರಿಂದ ಈ ಹೆಸರು ಬಂದಿದೆ ಎಂದು ಹೇಳಿದರು.