ಮ. ಗಾಂಧಿ ಇವರ ಕುರಿತು ತಥಾಕಥಿತ ಆಕ್ಷೇಪಾರ್ಹ ಟೀಕೆ ನೀಡಿದ್ದರಿಂದ ಮಾಜಿ ಸಂಪಾದಕ ಅತಿನ ದಾಸ್ ಇವರ ಬಂಧನ ಮತ್ತು ಬಿಡುಗಡೆ !

ಕಾಂಗ್ರೆಸ್ಸಿನಿಂದ ದೂರು ನೀಡಲಾಗಿತ್ತು

ಅಭಿವ್ಯಕ್ತಿ ಸ್ವಾತಂತ್ರ್ಯದ ಜೈಕಾರ ಮಾಡುವ ಕಾಂಗ್ರೆಸ್ಸಿನ ದ್ವಂದ್ವತೆ !

ಅತಿನ ದಾಸ್

ಹೈಲಾಕಂಡಿ (ಅಸ್ಸಾಂ) – ಮ. ಗಾಂಧಿ ಇವರ ಬಗ್ಗೆ ತಥಾಕಥಿತ ಆಕ್ಷೇಪಾರ್ಹ ಟೀಕೀಸಲಾಗಿದೆ ಎಂದು ಬರಾಕ್ ಖೋರೆ ಇಲ್ಲಿಯ ಒಬ್ಬ ಪ್ರಮುಖ ಬಂಗಾಲಿ ದೈನಿಕದ ಮಾಜಿ ಸಂಪಾದಕರು ಅತಿನ ದಾಸ್ ಇವರನ್ನು ಬಂಧಿಸಲಾಗಿತ್ತು. ಅದರ ನಂತರ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು. ಎಂದು ಇಲ್ಲಿಯ ಪೊಲೀಸ ಅಧಿಕಾರಿ ಫಾರೂಕ್ ಹುಸೇನ್ ಇವರು ಮಾಹಿತಿ ನೀಡಿದರು.

ಹುಸೇನ್ ಮಾತು ಮುಂದುವರೆಸುತ್ತಾ, ದಾಸ್ ಇವರ ವಿರುದ್ಧ ಕಾಂಗ್ರೆಸ್ಸಿನ ನಾಯಕ ಶಮಸುದ್ದೀನ್ ಬರಲಾಸ್ಕರ್ ಇವರು ದೂರು ನೀಡಿದ ನಂತರ ಅಪರಾಧ ದಾಖಲಿಸಿಕೊಂಡಿದ್ದೆವು. ಅದರ ಆಧಾರದಲ್ಲಿ ದಾಸ್ ಇವರನ್ನು ಕಛಾರ ಜಿಲ್ಲೆಯಲ್ಲಿನ ಸಿಲಚರದಲ್ಲಿನ ಅವರ ನಿವಾಸ ಸ್ಥಳದಿಂದ ಬಂದಿಸಲಾಗಿತ್ತು. ದಾಸ್ ಇವರಿಗೆ ಆಗಸ್ಟ್ ೧೪ ರಂದು ವಿಭಜನ ‘ವಿಭೀಷಿಕಾ ಸ್ಮೃತಿ ದಿವಸ್’ ಇದರ ಹಿನ್ನೆಲೆಯಲ್ಲಿ ಮ. ಗಾಂಧಿ ಇವರ ಕೊಡುಗೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು, ಎಂದು ಅವರ ಮೇಲೆ ಆರೋಪ ಕೂಡ ಮಾಡಲಾಗಿತ್ತು.

ಸಂಪಾದಕರ ನಿಲುವು

* ಮ. ಗಾಂಧಿ ಇವರ ಬಗ್ಗೆ ಮಾಡಿರುವ ಟೀಕೆ ಸಹಿಸದಿರುವ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ವೀರ ಸಾವರ್ಕರ್ ಇವರನ್ನು ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಾರೆ ಇದನ್ನು ತಿಳಿದುಕೊಳ್ಳಿ ! ಸಾವರಕರರನ್ನು ಅವಮಾನಿಸುವ ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದರೆ ಪೊಲೀಸರು ಹೀಗೆ ಕ್ರಮ ಕೈಗೊಳ್ಳುವರೇ ?