ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾವಿರಾರು ರೈತರ ಉಪಸ್ಥಿತಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಹಾಪಂಚಾಯತ

ಯೋಗ್ಯ ಬೆಲೆಯಲ್ಲಿ ಕಾನೂನ ರೀತಿ ಒಪ್ಪಿಗೆ, ಉಚಿತ ವಿದ್ಯುತ್ ಮತ್ತು ಸಾಲ ಮನ್ನಾಗೆ ಒತ್ತಾಯ !

ನವದೆಹಲಿ – ಇಲ್ಲಿಯ ರಾಮಲೀಲಾ ಮೈದಾನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಹಾಪಂಚಾಯತ್ ನ ಆಯೋಜನೆ ಮಾಡಲಾಗಿತ್ತು. ಅದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು. ರೈತರ ಮೇಲೆ ದಾಖಲಾಗಿರುವ ದೂರಗಳು ಹಿಂಪಡೆಯದಿರುವುದು, ಸಾಲ ಮನ್ನಾ, ಉಚಿತ ವಿದ್ಯುತ್ ಮತ್ತು ಕನಿಷ್ಠ ಮೂಲ ಬೆಲೆ (ಎಂ.ಎಸ್.ಪಿ) ನೀಡದೇ ಇರುವನ್ನು ಖಂಡಿಸಲು ಈ ಮಹಾಪಂಚಾಯತ್ ಆಯೋಜಿಸಲಾಗಿತ್ತು. ಈ ಮಹಾಪಂಚಾಯತ್ ನಲ್ಲಿ ೩೨ ರೈತ ಸಂಘಟನೆಯ ರೈತರು ಸಹಭಾಗಿಯಾಗಿದ್ದರು.

ಸಂಯುಕ್ತ ಕಿಸಾನ್ ಮೋರ್ಚಾದ ಕಾರ್ಯಕರ್ತರು, ಸರಕಾರ ಒಟ್ಟು ಉತ್ಪಾದನೆಯ ಖರ್ಚಿನಲ್ಲಿ ಶೇಕಡ ೫೦ ರಷ್ಟು ಎಂ.ಎಸ್.ಪಿ ಜಾರಿ ಮಾಡಲು ಲಿಖಿತ ಆಶ್ವಾಸನೆ ನೀಡಿತ್ತು. ಇದಕ್ಕಾಗಿ ಸರಕಾರವು ಸ್ಥಾಪಿಸಿರುವ ಸಮಿತಿಯ ೨೬ ಸದಸ್ಯ ಉದ್ಯಮಿಗಳ ಪರ ಇದ್ದರು. ಆದ್ದರಿಂದ ರೈತರು ಈ ಸಮಿತಿಯನ್ನು ವಿರೋಧಿಸುತ್ತಿದ್ದಾರೆ.