ಸೌದಿ ಅರೇಬಿಯಾದಲ್ಲಿ ೮ ಸಾವಿರ ವರ್ಷಗಳ (ಮೊದಲಿನ) ಹಳೆಯ ಪ್ರಾಚೀನ ದೇವಸ್ಥಾನ ಪತ್ತೆ!

ರಿಯಾಧ (ಸೌದಿ ಅರೇಬಿಯಾ): ರಿಯಾಧದ ದಕ್ಷಿಣ ಪಶ್ಚಿಮ ಪ್ರದೇಶದ ಅಲ್ಫಾ ನಗರದಲ್ಲಿ ನಡೆಸಲಾದ ಉತ್ಖನನದಲ್ಲಿ ೮ ಸಾವಿರ ವರ್ಷ ಹಳೆಯ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನದ ಮೇಲೆ ಅನೇಕ ಪ್ರತೀಕ ಚಿಹ್ನೆಗಳು ಮತ್ತು ಶಿಲಾ ಲೇಖನವೂ ಸಹ ಇವೆ. ಇಲ್ಲಿ ಯಜ್ಞಕುಂಡಗಳು ಸಹ ದೊರೆತಿದೆ. ಇದರಿಂದ ಅಲ್ಲಿ ನಿಯಮಿತವಾಗಿ ಯಜ್ಞ ಮತ್ತು ಅನುಷ್ಠಾನಗಳು ನಡೆಯುತ್ತಿರಬೇಕು ಎಂದು ನಿಷ್ಕರ್ಷ ತೆಗೆಯಲಾಗಿದೆ.


ಈ ದೇವಸ್ಥಾನದ ಹೆಸರು ರಾಕ್ ಕಟ್ ಮಂದಿರ ಎಂದು ಹೇಳಲಾಗುತ್ತಿದೆ. ಇಲ್ಲಿ ಸಿಕ್ಕಿರುವ ಶಿಲಾ ಲೇಖದ ಮೇಲೆ ಕಹಲ ದೇವಿಯ ಮಾಹಿತಿಯಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಯ ಜನರು ಯಾವ ಧರ್ಮದವರಾಗಿದ್ದರು, ಇದು ಇಲ್ಲಿಯವರೆಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ದೇವಸ್ಥಾನದ ಹತ್ತಿರ ಗೋರಿಗಳು ಸಹ ದೊರೆತಿದೆ.